ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಸಮೀಪದ ಪಾಲಂಗಾಲದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಭೂಕುಸಿತ ಉಂಟಾಗಿದೆ. ಇದು ಜಿಲ್ಲೆಯಲ್ಲಿ ಮತ್ತೆ ಆತಂಕವನ್ನುಂಟು ಮಾಡಿದೆ.ಅರಣ್ಯದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮನೆಗಳು ಇಲ್ಲದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಗುಡ್ಡ ಕುಸಿತದಿಂದ ಹಲವು ಮರಗಳು ಧರೆಗೆ ಉರಳಿವೆ. ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 9.55 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 25.05 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 2.65 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 2.78 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 7.45 ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ 9.80 ಮಿ.ಮೀ. ಮಳೆಯಾಗಿದೆ.ಹೋಬಳಿವಾರು ವಿವರ: ಮಡಿಕೇರಿ ಕಸಬಾ 23, ನಾಪೋಕ್ಲು 6.40, ಸಂಪಾಜೆ 48, ಭಾಗಮಂಡಲ 22.80, ವಿರಾಜಪೇಟೆ 2.80, ಅಮ್ಮತ್ತಿ 2.50, ಹುದಿಕೇರಿ 5.90, ಶ್ರೀಮಂಗಲ 1.20, ಪೊನ್ನಂಪೇಟೆ 2, ಬಾಳೆಲೆ 2.01, ಸೋಮವಾರಪೇಟೆ 6.80, ಶನಿವಾರಸಂತೆ 3, ಶಾಂತಳ್ಳಿ 16, ಕೊಡ್ಲಿಪೇಟೆ 4, ಕುಶಾಲನಗರ 2.60, ಸುಂಟಿಕೊಪ್ಪ 17 ಮಿ.ಮೀ.ಮಳೆಯಾಗಿದೆ.