ಮೂಲ್ಕಿಯಲ್ಲಿ ಸಾಮೂಹಿಕ ಬೃಹತ್‌ ಪ್ರಾಣಾಯಾಮ ಯೋಗ ಶಿಬಿರಕ್ಕೆ ಚಾಲನೆ

| Published : Mar 18 2025, 12:32 AM IST

ಮೂಲ್ಕಿಯಲ್ಲಿ ಸಾಮೂಹಿಕ ಬೃಹತ್‌ ಪ್ರಾಣಾಯಾಮ ಯೋಗ ಶಿಬಿರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಚನಕೆರೆಯ ಪತಂಜಲಿ ಯೋಗ ಕೇಂದ್ರದ ಯೋಗ ಗುರು ಜಯ ಮುದ್ದು ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮೂಲ್ಕಿ ನಗರ ಪಂಚಾಯತ್‌ ನ ಕಾರ್ನಾಡು ಗಾಂಧಿ ಮೈದಾನದಲ್ಲಿ ಮಾ.17ರ ಸೋಮವಾರದಿಂದ 23 ರ ಆದಿತ್ಯವಾರದವರೆಗೆ ಏಳು ದಿನಗಳ ಕಾಲ ಬೆಳಗ್ಗೆ 5 ರಿಂದ 6.30 ರವರೆಗೆ ಉಚಿತ ಸಾಮೂಹಿಕ ಯೋಗ ತರಬೇತಿ ಶಿಬಿರ ನಡೆಯಲಿದೆ.

ಕನ್ನಡಪ್ರಭವಾರ್ತೆ ಮೂಲ್ಕಿ

ನಗರ ಪಂಚಾಯತ್ ಮೂಲ್ಕಿ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಹಾಗೂ ಮೂಲ್ಕಿ ತಾಲೂಕಿನ ವಿವಿಧ ಸ್ಥಳೀಯಾಡಳಿತೆಗಳು, ಸಮಾಜ ಸೇವಾ ಸಂಘಟನೆಗಳ ಸಹಯೋಗದಲ್ಲಿ ಮೂಲ್ಕಿ ಕೆಂಚನಕೆರೆಯ ಪತಂಜಲಿ ಯೋಗ ಕೇಂದ್ರದ ಯೋಗ ಗುರು ಜಯ ಮುದ್ದು ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮೂಲ್ಕಿ ನಗರ ಪಂಚಾಯತ್‌ ನ ಕಾರ್ನಾಡು ಗಾಂಧಿ ಮೈದಾನದಲ್ಲಿ ಮಾ.17ರ ಸೋಮವಾರದಿಂದ 23 ರ ಆದಿತ್ಯವಾರದವರೆಗೆ ಏಳು ದಿನಗಳ ಕಾಲ ಬೆಳಗ್ಗೆ 5 ರಿಂದ 6.30 ರವರೆಗೆ ಜರಗಲಿರುವ ಉಚಿತ ಸಾಮೂಹಿಕ ಯೋಗ ತರಬೇತಿ ಶಿಬಿರದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು.

ಯೋಗ ಗುರು ಜಯ ಮುದ್ದು ಶೆಟ್ಟಿ, ಮೂಲ್ಕಿ ನ.ಪಂ. ಅಧ್ಯಕ್ಷ ಸತೀಶ್‌ ಅಂಚನ್‌, ಮಾಜಿ ಅಧ್ಯಕ್ಷ ಸುನೀಲ್‌ ಆಳ್ವ, ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಎಚ್‌. ಅರವಿಂದ ಪೂಂಜ, ಮಧು ಆಚಾರ್ಯ, ಸರ್ವೋತ್ತಮ ಅಂಚನ್‌, ಪ್ರಥ್ವಿರಾಜ್‌ ಆಚಾರ್ಯ ಕಿನ್ನಿಗೋಳಿ, ಸಂಪತ್‌ ಕಾರ್ನಾಡ್‌, ಮೂಲ್ಕಿ ಪೊಲೀಸ್‌ ಠಾಣೆಯ ಉಪ ನಿರೀಕ್ಷಕಿ ಅನಿತಾ ಮತ್ತಿತರರಿದ್ದರು.

ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಬಂಧುಗಳು ಭಾಗವಹಿಸಿದ್ದರು.