ಸಾರಾಂಶ
ಬೃಹತ್ ಕಾಡುಕೋಣ ಬೇಟೆಯಾಡಿ ಅದರ ಮಾಂಸ ಕೊಂಡೊಯ್ಯುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಡಿಕೇರಿ ವಲಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬೃಹತ್ ಕಾಡುಕೋಣವನ್ನು ಭೇಟೆಯಾಡಿ ಅದರ ಮಾಂಸವನ್ನು ಕೊಂಡೊಯ್ಯುತ್ತಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ.ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ನಂದಿ ಮೊಟ್ಟೆಯಲ್ಲಿ ಸುಮಾರು 539 ಕೆ.ಜಿ. ತೂಕದ ಕಾಡುಕೋಣ ಮಾಂಸ ಪತ್ತೆಯಾಗಿದೆ. ಮಡಿಕೇರಿ ತಾಲೂಕಿನ ಎಮ್ಮೆಮಾಡು ನಿವಾಸಿ ಹ್ಯಾರಿಸ್(42) ನನ್ನು ಬಂಧಿಸಲಾಗಿದೆ.
ಮಡಿಕೇರಿ ವಲಯ ಅರಣ್ಯ ಅಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆದಿದ್ದು, ವಾಹನವನ್ನು ಬೆನ್ನಟ್ಟುವ ಸಂದರ್ಭ ಜೊತೆಗಿದ್ದ ಮತ್ತೊಬ್ಬ ಆರೋಪಿ ಮೂಸ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.ಭಾನುವಾರ ತಡರಾತ್ರಿ ಅಪ್ಪಂಗಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಮಗೆ ದೊರೆತ ಖಚಿತ ವರ್ತಮಾನದ ಮೇಲೆ ವಾಹನವನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಂಧಿತನಿಂದ ಎರಡು ಕತ್ತಿ ಹಾಗೂ ಪಿಕಪ್ ವಾಹನ ವಶಕ್ಕೆ ಪಡೆಯಲಾಗಿದೆ.