ಯತ್ನಾಳ ಪರ ಅಭಿಮಾನಿಗಳ ಬೃಹತ್ ಪ್ರತಿಭಟನೆ

| Published : Mar 29 2025, 12:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಛಾಟನೆ ಮಾಡಿದ ಕ್ರಮ ಖಂಡಿಸಿ ವಿವಿಧ ಸಂಘಟನೆಗಳ ಪ್ರಮುಖರು, ಯತ್ನಾಳ ಅಭಿಮಾನಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಪ್ರತಿಭಟನೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಗಾಂಧಿ ವೃತ್ತ ತಲುಪಿತು. ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕೃತಿ ದಹಿಸಿ ಅಸಮಾಧಾನ ಹೊರಹಾಕಿದರು. ವಿಜಯೇಂದ್ರ ವಿರುದ್ದ ಘೋಷಣೆ ಕೂಗಿದರು. ಯತ್ನಾಳರೇ ಹೆದರಬೇಡಿ ನಾವು ನಿಮ್ಮೊಂದಿಗಿದ್ದೇವೆ, ನಿಮ್ಮೊಂದಿಗೆ ಇದ್ದೇವೆ ಎಂದು ಯತ್ನಾಳರ ಭಾವಚಿತ್ರ ಹಿಡಿದು ಬೆಂಬಲ ಘೋಷಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಛಾಟನೆ ಮಾಡಿದ ಕ್ರಮ ಖಂಡಿಸಿ ವಿವಿಧ ಸಂಘಟನೆಗಳ ಪ್ರಮುಖರು, ಯತ್ನಾಳ ಅಭಿಮಾನಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಪ್ರತಿಭಟನೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಗಾಂಧಿ ವೃತ್ತ ತಲುಪಿತು. ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕೃತಿ ದಹಿಸಿ ಅಸಮಾಧಾನ ಹೊರಹಾಕಿದರು. ವಿಜಯೇಂದ್ರ ವಿರುದ್ದ ಘೋಷಣೆ ಕೂಗಿದರು. ಯತ್ನಾಳರೇ ಹೆದರಬೇಡಿ ನಾವು ನಿಮ್ಮೊಂದಿಗಿದ್ದೇವೆ, ನಿಮ್ಮೊಂದಿಗೆ ಇದ್ದೇವೆ ಎಂದು ಯತ್ನಾಳರ ಭಾವಚಿತ್ರ ಹಿಡಿದು ಬೆಂಬಲ ಘೋಷಿಸಿದರು.ಯುವಕರು ಮೊಬೈಲ್ ಟಾರ್ಚ್ ಬೆಳಗಿ ಯತ್ನಾಳ ಪರ ಬೆಂಬಲ ಸೂಚಿಸಿದರು. ಭ್ರಷ್ಟಾಚಾರ, ಕುಟುಂಬ ರಾಜಕಾರಣ ವಿರೋಧಿಸಿದ್ದಕ್ಕೆ ಹಿಂದುತ್ವವಾದಿ ನಾಯಕ ಯತ್ನಾಳರನ್ನು ಬಿಜೆಪಿ ಉಚ್ಛಾಟಿಸಿ ಅನ್ಯಾಯ ಮಾಡಿದೆ ಎಂದು ಹಿಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಯುವ ಧುರೀಣ ರಾಘವ ಅಣ್ಣಿಗೇರಿ ಮಾತನಾಡಿ, ಬಸನಗೌಡರ ಆಸ್ತಿಯೇ ಹಿಂದುತ್ವ. ಅವರ ಶಕ್ತಿಯೇ ಹಿಂದೂಗಳು. ಪಕ್ಷ ಏನಾದರಾಗಲಿ ಕುಟುಂಬದ ಹಿತವೇ ಮುಖ್ಯ ಎನ್ನುವ ಅಪ್ಪ ಮಕ್ಕಳ ಕುಮ್ಮಕ್ಕಿನಿಂದ ಯತ್ನಾಳರನ್ನು ಹೊರಗೆ ಹಾಕಿಲ್ಲ. ಬದಲಾಗಿ ಇಡೀ ಹಿಂದುತ್ವವನ್ನೇ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದುತ್ವದ ನಾಯಕ ಯಾರು ಅಂತ ಕೇಳಿದರೆ ಮೊದಲಿಗೆ ಬರುವ ಹೆಸರೇ ಬಸನಗೌಡ ಪಾಟೀಲ ಯತ್ನಾಳ. ರಾಜ್ಯದಲ್ಲಿ ಎಲ್ಲೇ ಹಿಂದು ಕಾರ್ಯಕರ್ತರ ಕೊಲೆಯಾದರೆ, ಅವರ ಮೇಲೆ ದೌರ್ಜನ್ಯ ನಡೆದರೆ ಮೊದಲು ಅವರನ್ನು ಭೇಟಿಯಾಗಿ ಸಾಂತ್ವನದ ಜೊತೆಗೆ ಪರಿಹಾರ ನೀಡುವವರೇ ಯತ್ನಾಳರು. ರೈತರ ಆಸ್ತಿಗಳನ್ನು ಕಬಳಿಸುವ ಹುನ್ನಾರ ತಡೆಯಲು ಮೊದಲು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದವರೇ ಬಸನಗೌಡರು. ಗಟ್ಟಿಯಾಗಿ ನಿಂತು ದಿಟ್ಟತನದಿಂದ ಹೋರಾಟ ಮಾಡಿ ಆಸ್ತಿ ಮರಳಿ ಸಿಗುವಂತೆ ಮಾಡಿದ ನಾಯಕರು ನಮ್ಮ ಬಸನಗೌಡರು. ಫಕೀರ ಬಸ್ತಿ ಆಗಿದ್ದ ವಿಜಯಪುರ ಹಿಂದುತ್ವ, ಶಾಂತಿಯ ಬಿಡು ಮಾಡಿದ್ದಾರೆ ಎಂದು ಸ್ಮರಿಸಿದರು.ದಯಾಸಾಗರ ಪಾಟೀಲ, ಪ್ರತಾಪ ಸಿಕ್ಕಲಕಿ ಉಚ್ಛಾಟನೆ ಮಾಡಿದ್ದು ಹುಚ್ಚಾಟ. ಈ ಮೂಲಕ ಹಿಂದೂ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಕಿಡಿಕಾರಿದರು.

ಮುಖಂಡರಾದ ಎಂ.ಎಸ್.ರುದ್ರಗೌಡರು, ಬಿ.ಎಸ್.ಪಾಟೀಲ ನಾಗರಾಳ ಹುಲಿ, ಗುರು ಗಚ್ಚಿನಮಠ ಸೇರಿದಂತೆ ಹಿಂದೂ ಅಭಿಮಾನಿಗಳು, ನಿಷ್ಠಾವಂತ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.