ಸಾರಾಂಶ
ಮಹಾತ್ಮಾ ಗಾಂಧಿ ವೃತ್ತದ ಬಳಿ ಸಭೆಯಲ್ಲಿ ರೈತರ ಭೂಮಿ ತೆರವುಗೊಳಿಸದಂತೆ: ಶಾಸಕ ಜಿ.ಎಚ್.ಶ್ರೀನಿವಾಸ್ ಆಗ್ರಹ
ಕನ್ನಡಪ್ರಭ ವಾರ್ತೆ, ತರೀಕೆರೆತರೀಕೆರೆ ತಾಲೂಕು ಲಿಂಗದಹಳ್ಳಿ ಹೋಬಳಿ ಗುಳ್ಳದಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೇನಹಳ್ಳಿ ಸಿದ್ದಾಪುರ, ತ್ಯಾಗದಬಾಗಿ ತಾಂಡ್ಯಸ, ಐನಳ್ಳಿ, ತ್ಯಾಗದಬಾಗಿ ಹಾಗೂ ಲಕ್ಕವಳ್ಳಿ ಹೋಬಳಿ ರೈತರಿಂದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಪಟ್ಟಣದ ಎಪಿಎಂಸಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮಹಾತ್ಮಾ ಗಾಂಧಿ ವೃತ್ತದ ಬಳಿ ಸಭೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ರೈತರ ಭೂಮಿ ತೆರವುಗೊಳಿಸಬಾರದು. ಭದ್ರಾ ಡ್ಯಾಂ ಮತ್ತು ಶರಾವತಿ ನದಿ ಮುಳುಗಡೆಯ ಸಾವಿರಾರು ಎಕರೆ ಜಾಗ ಇದೆ. ಅರಣ್ಯ ಇಲಾಖೆ ತೆರವು ಮಾಡಬಾರದು ಎಂದರು.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಕೂಡದು, ಪುನರ್ ಪರಿಶೀಲನೆ ಮಾಡಬೇಕು. ಯಾರಾದರೂ ನಮ್ಮ ರೈತರ ಭೂಮಿ ತೆರವು ಮಾಡಿಸಲು ಬಂದರೆ ನಾನೇ ಅಡ್ಡ ಮಲಗುತ್ತೇನೆ. ರೈತರು ದೇಶಕ್ಕೆ ಅನ್ನ ಕೊಡುವವರು, ನಿಮ್ಮ ಜೊತೆ ನಾನು ಇರುತ್ತೇನೆ, ಜನಗಳ ಪರವಾಗಿ ನಾನು ಸದಾ ಇರುತ್ತೇನೆ ಎಂದು ಹೇಳಿದರು.ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ ನಮ್ಮ ಭೂಮಿ ನಮ್ಮ ಹಕ್ಕು, ರೈತರು ಬಹಳ ಕಾಲದಿಂದಲೂ ಸಾಗುವಳಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಭೂಮಿ ಬಿಡುವುದಿಲ್ಲ. ರೈತರ ಎಲ್ಲಾ ಬೇಡಿಕೆ ಹಾಗೂ ಸಮಸ್ಯೆ ಪರಿಹರಿಸಲು ಸರ್ಕಾರ ಮುಂದಾಗಬೇಕು. ರೈತರ ಹೋರಾಟಕ್ಕೆ ಜಯವಾಗಲಿ ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ ಕಸ್ತೂರಿ ರಂಗನ್ ವರದಿ ಪುನರ್ ಪರಿಶೀಲನೆಗೆ ಕರ್ನಾಟಕ ಸರ್ಕಾರಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರ ಹೊರಡಿಸಿರುವ 23ನೇ ಸಾಲಿನ ಈ ವರದಿಗೆ ಸಂಬಂಧ ಪಟ್ಟಂತ ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಯಥಾವತ್ತಾಗಿ ಜಾರಿ ವರೆಗೂ ಯಾವುದೇ ಕಾರಣಕ್ಕೂರೈತರನ್ನು ಒಕ್ಕೆಲೆಬ್ಬಿಸಬಾರದು.ಅಗತ್ಯವಾದಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ಸ್ವಾತಂತ್ರ ಬಂದ ನಂತರ ಮಾರ್ಪಾಡಾ್ ಅಧಿಸೂಚನೆಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶರಾವತಿ ಹಾಗೂ ಭದ್ರಾ ಡ್ಯಾಂನಿಂದ ಮುಳುಗಡೆ ರೈತರಿಗೆ ನೀಡಿರುವ ಜಮೀನು ಸಹ ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಬರುವುದರಿಂದ ರೈತರು ಬೀದಿಗೆ ಬರುವಂತಹ ಪರಿಸ್ಥಿತಿಗೆ ಸರ್ಕಾರ ತಂದೊಡ್ಡಿದ್ದು ತಕ್ಷಣ ಈ ಕ್ರಮ ಹಿಂತೆಗೆದು ಕೊಳ್ಳಬೇಕೆಂದು ಆಗ್ರಹಿಸಿದರು.ಬಿಜೆಪಿ ಮುಖಂಡ, ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಅಭಿಪ್ರಾಯ ತಿಳಿಸುವಂತೆ ಆಗ್ರಹಿಸಿದರು. ರೈತರು ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗಳಲ್ಲಿ ನಿರ್ಣಯ ಮಂಡಿಸಿ ಕಸ್ತೂರಿ ರಂಗನ್ ವರದಿ ವಿರುದ್ಧನಿರ್ಣಯ ಮಾಡಲು ಒತ್ತಾಯಿಸಿದರು.ರೈತ ಸಂಘದ ಮಹೇಶ್, ಟಿ.ಎಲ್.ಕೃಷ್ಣಮೂುರ್ತಿ, ಜಿಪಂ ಮಾಜಿ ಸದಸ್ಯ ಕೆ.ಎಚ್.ಮಹೇಂದ್ರ ಮತ್ತಿತರ ರೈತ ಮುಖಂಡರು ಮಾತನಾಡಿದರು.
2ಕೆಟಿಆರ್.ಕೆ.4ಃತರೀಕೆರೆಯಲ್ಲಿ ಲಿಂಗದಹಳ್ಳಿ ಹೋಬಳಿ ಗುಳ್ಳದಮನೆ ಗ್ರಾಪಂವ್ಯಾಪ್ತಿಗೆ ಒಳಪಡುವ ಮಲ್ಲಿಗೇನಹಳ್ಳಿ ಸಿದ್ದಾಪುರ, ತ್ಯಾಗದಬಾಗಿ ತಾಂಡ್ಯಸ ಐನಳ್ಳಿ, ತ್ಯಾಗದಬಾಗಿ ರೈತರು ಲಕ್ಕವಳ್ಳಿ ಹೋಬಳಿ ರೈತರ ಬೃಹತ್ ಪ್ರತಿಭಟನೆಯಲ್ಲಿ ತಾಲೂಕಿನ ರೈತರು ಶಾಸಕ ಜಿ.ಎಚ್.ಶ್ರೀನಿವಾಸ್, ಮಾಜಿ ಶಾಸಕ ಡಿ.ಎಸ್.ಸುರೇಶ್ ಮತ್ತಿತರರು ಭಾಗವಹಿಸಿದ್ದರು.