ಮೊಹನಂ ಕಾರ್ಖಾನೆ ಬಂದ್‌ಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

| Published : Jul 12 2025, 12:32 AM IST

ಮೊಹನಂ ಕಾರ್ಖಾನೆ ಬಂದ್‌ಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

Massive protest demanding closure of Mohanam factory

-ಕಮಲಾಪುರ ನಾಗರಿಕರು, ಸರ್ವ ಸಂಘಟನೆ ಸಮಿತಿಯಿಂದ ಕಾರ್ಖಾನೆ ಬಂದ್‌ಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

----

ಕನ್ನಡಪ್ರಭ ವಾರ್ತೆ ಕಮಲಾಪುರ

ಮೋಹನಂ ಟೈಯರ್ ಕಾರ್ಖಾನೆಯಿಂದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ಸುತ್ತಮುತ್ತಲಿನ ಹಳ್ಳಿ ಜನರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದ ಹೆದ್ದಾರಿ ಮೇಲೆ ನಿತ್ಯ ಲಕ್ಷಾಂತರ ವಾಹನ ಸಂಚರಿಸುವ ಸವಾರರಿಗೆ ಟೈಯರ್ ಸುಟ್ಟು ಕೆಮಿಕಲ್ ತಯಾರಿಸುವ ಯಂತ್ರೋಪಕರಣಗಳಿಂದ ಬರುವ ದುರ್ವಾಸನೆಯಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಪಕ್ಕದಲ್ಲಿರುವ ರೈತರ ಬೆಳೆಗಳು ಸುಟ್ಟು ಹೋಗುತ್ತಿವೆ ಕೂಡಲೇ ಕಾರ್ಖಾನೆ ಬಂದ್ ಮಾಡಬೇಕೆಂದು ಕಮಲಾಪುರ ನಾಗರಿಕರು ಮತ್ತು ಸರ್ವ ಸಂಘಟನೆ ಸಮಿತಿಯಿಂದ ಕಾರ್ಖಾನೆ ಬಂದ್‌ ಮಾಡುವಂತೆ ಬೃಹತ್ ಪ್ರತಿಭಟನೆ ನಡೆಸಿದ್ದರು.

ಬಸವೇಶ್ವರ ವೃತ್ತದಿಂದ ಕಿರಣ ಬಜಾರ್ ಮಾರ್ಗವಾಗಿ ಬಸ್ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ದಾರಿ ಉದ್ದಕ್ಕೂ ಕಾರ್ಖಾನೆ ವಿರುದ್ಧ ಬಂದ್ ಮಾಡುವಂತೆ ಘೋಷಣೆಗಳು ಕೂಗುತ್ತ ತಾಸಿಲ ಕಚೇರಿ ತಲುಪಿದ್ದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷ ರವಿ ಬಿರಾದಾರ ಮಾತನಾಡಿ, ಟೈಯರ್ ಕಾರ್ಖಾನೆಯಿಂದ ಬರುವ ದುರ್ವಾಸನೆಯಿಂದ ಕಮಲಾಪುರ ಸಾರ್ವಜನಿಕರು ವಿದ್ಯಾರ್ಥಿಗಳು ಬೇಸತ್ತಿದ್ದಾರೆ. ವಾಯುಮಾಲಿನ್ಯ ಹಾಳಾಗುತ್ತಿದೆ ಕಾರ್ಖಾನೆ ಪಕ್ಕದಲ್ಲಿರುವ ರೈತರ ಬೆಳೆಗಳು ಸುಟ್ಟು ಹೋಗುತ್ತಿವೆ. ಕಮಲಾಪುರ ತಾಲೂಕ ಕೇಂದ್ರವಾಗಿರುವುದರಿಂದ ನಿತ್ಯ ಹಳ್ಳಿಗಳಿಂದ ತಾಂಡಾಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ವ್ಯಾಪಾರ ವಹಿವಾಟಕ್ಕೆ ಕಮಲಾಪುರ ಅವಲಂಬನೆ ಯಾಗಿದ್ದಾರೆ. ಆದರೆ, ಸಾರ್ವಜನಿಕರಿಗೆ ಕಾರ್ಖಾನೆಯಿಂದ ಬರುವ ಕೆಮಿಕಲ್ ತ್ಯಾಜ್ಯ ಕಂಪನಿಯಿಂದ ವಿಷ ಗಾಳಿ

ದುರ್ವಾಸನೆಯಿಂದ ಕಳೆದ 5, 6 ವರ್ಷಗಳಿಂದ ರಾಜಾರೋಷವಾಗಿ ಕಾರ್ಖಾನೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ಉಸಿರಾಟ ತೊಂದರೆಯಾಗುತ್ತಿದೆ. ವಿಷಪೂರಿತ ಅನಿಲ ಜನರ ಜೀವನ ಜೊತೆ ಆಟ ಆಡುತ್ತಿದ್ದಾರೆ. ಇದರಿಂದ ಆರೋಗ್ಯ ಹದಗೆಡುತ್ತಿದ್ದು ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಡಲೇ ಕಾಠಪತಿ, ನಟರಾಜ್ ಕಲ್ಯಾಣ್, ಸಂತೋಷ್ ರಾಂಪುರೆ, ವೀರೇಶ್ ಸ್ವಾಮಿ, ಸಂಜು ಕುಮಾರ ಬೊಮ್ಮಣ್ಣಿ, ರಾಮಲಿಂಗ ಗುತ್ತೇದಾರ್, ಬಸವರಾಜ್ ಕ ಶೆಟ್ಟಿ, ಶಿವಕುಮಾರ್ ಗಾಂಧಿ, ಮಹೇಶ್ ಹಾಲು, ಶಿವಾನಂದ ಜಗಪತಿ, ವಿನೋದ್ ರಾಥೋಡ್, ಶರಣು ಕುಂಬಾರ್, ಸಂತೋಷ್ ಮುಗಳಿ, ಕೈಲಾಸ್ ಪಟ್ನಾಯಕ, ಜಗದೀಶ್ ಭಾಲ್ಕಿ ಎಲ್ಲಪ್ಪ ಪೂಜಾರಿ, ಕೂಡಲೇ ಕಾರ್ಖಾನೆ ಬಂದ್ ಮಾಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮೊಸಿನ ಅಹಮ್ಮದ್ ಅವರಿಗೆ ಮನವಿ ಸಲ್ಲಿಸಿದ್ದರು.