ಡಾ.ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ಕಂದಾಯ ನಿವೇಶನದಾರರಿಗೆ ಅವರ ಮೂಲ ಜಾಗಗಳಲ್ಲಿಯೇ ಸಮಾನ ವಿಸ್ತೀರ್ಣದ ಬದಲಿ ನಿವೇಶನಗಳನ್ನು ನೀಡಬೇಕು ಎಂದು ಆಗ್ರಹಿಸಿ, ದಲಿತ ಸಂಘರ್ಷ ಸಮಿತಿ (ಸಂಯೋಜಕ), ಬೆಂಗಳೂರು ಜಿಲ್ಲಾ ಸಮಿತಿ ಹಾಗೂ ಕಂದಾಯ ನಿವೇಶನದಾರರ ಒಕ್ಕೂಟದ ಸಹಭಾಗಿತ್ವದಲ್ಲಿ ಭಾನುವಾರ ಯಲಹಂಕ ಕ್ಷೇತ್ರದ ರಾಮಗೊಂಡನಹಳ್ಳಿ ಗ್ರಾಮದಿಂದ ಸೋಮಶೆಟ್ಟಿಹಳ್ಳಿ ಗ್ರಾಮದವರೆಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಪಾದಯಾತ್ರೆಯನ್ನು ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ನಡೆಯಿತು.
-ಡಿಎಸ್ಎಸ್, ಕಂದಾಯ ನಿವೇಶನದಾರರಿಂದ ಪಾದಯಾತ್ರೆ ಹೋರಾಟ---ಕನ್ನಡಪ್ರಭ ವಾರ್ತೆ ಯಲಹಂಕಡಾ.ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ಕಂದಾಯ ನಿವೇಶನದಾರರಿಗೆ ಅವರ ಮೂಲ ಜಾಗಗಳಲ್ಲಿಯೇ ಸಮಾನ ವಿಸ್ತೀರ್ಣದ ಬದಲಿ ನಿವೇಶನಗಳನ್ನು ನೀಡಬೇಕು ಎಂದು ಆಗ್ರಹಿಸಿ, ದಲಿತ ಸಂಘರ್ಷ ಸಮಿತಿ (ಸಂಯೋಜಕ), ಬೆಂಗಳೂರು ಜಿಲ್ಲಾ ಸಮಿತಿ ಹಾಗೂ ಕಂದಾಯ ನಿವೇಶನದಾರರ ಒಕ್ಕೂಟದ ಸಹಭಾಗಿತ್ವದಲ್ಲಿ ಭಾನುವಾರ ಯಲಹಂಕ ಕ್ಷೇತ್ರದ ರಾಮಗೊಂಡನಹಳ್ಳಿ ಗ್ರಾಮದಿಂದ ಸೋಮಶೆಟ್ಟಿಹಳ್ಳಿ ಗ್ರಾಮದವರೆಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಪಾದಯಾತ್ರೆಯನ್ನು ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ನಡೆಯಿತು.ರಾಮಗೊಂಡನಹಳ್ಳಿ ಗ್ರಾಮದ ಏಳುಮಂದೆಮ್ಮ ದೇವಸ್ಥಾನದ ಬಳಿ ಬೆಳಗ್ಗೆ 11 ಗಂಟೆಗೆ ಜಮಾವಣೆಯಾದ ಡಿಎಸ್ಎಸ್ ಮುಖಂಡರು ಮತ್ತು ಕಂದಾಯ ನಿವೇಶನದಾರರು ಪಾದಯಾತ್ರೆ ಆರಂಭಿಸಿ 1 ಕಿ.ಮೀ. ಕ್ರಮಿಸಿದ ಬಳಿಕ ಜಾರಕಬಂಡೆ ಕಾವಲ್ ಪ್ರದೇಶದ ಬಳಿ ಪೊಲೀಸರು ಅವರನ್ನು ತಡೆದು, ವಶಕ್ಕೆ ಪಡೆದರು.
ಕೋರ್ಟ್ ಆದೇಶದ ಪ್ರಕಾರ ಫ್ರೀಡಂ ಪಾರ್ಕ್ ಹೊರತು, ಸತ್ಯಾಗ್ರಹ ನಡೆಸಲು ಬೇರೆಡೆ ಅವಕಾಶವಿಲ್ಲ. ಆದರೂ ಪಾದಯಾತ್ರೆಗೆ ಅವಕಾಶ ಕೊಡಲಾಗಿದೆ. ಮುಂದಿನ ಯಾತ್ರೆಗೆ ಅವಕಾಶವಿಲ್ಲದ ಕಾರಣ ನಿಲ್ಲಿಸಬೇಕೆಂದು ಪೊಲೀಸರು ತಿಳಿಸಿ, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ಹೋರಾಟಗಾರರು, ನಮ್ಮ ನಿವೇಶನಗಳನ್ನು ಯಾವುದೇ ಷರತ್ತುಗಳಿಲ್ಲದೆ ಹಿಂದಿರುಗಿಸಬೇಕೆಂದು ಒತ್ತಾಯಿಸಿದರು.ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕ ವಿ.ನಾಗರಾಜ್ ಅವರು ಮಾತನಾಡಿದರು, ನಿವೇಶನದಾರರಿಗೆ ನ್ಯಾಯ ದೊರೆಯುವವರೆಗೂ ಹಂತ ಹಂತವಾಗಿ ಹೋರಾಟ ಮುಂದುವರಿಸಲು ತೀರ್ಮಾನಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್, ನಿವೇಶನದಾರರಾದ ಅಶ್ವಿನಿ, ರೈತ ಮುಖಂಡ ಬಸವರಾಜ ಪಾದಯಾತ್ರಿ, ರಾಮಗೊಂಡನಹಳ್ಳಿ ಮುನಿರಾಜು, ಕಂದಾಯ ನಿವೇಶನಗಳ ಮಾಲೀಕರಾದ ಅರುಣ್, ಶೇಷನ್ ಎಚ್. ಕಲ್ಲುಹೊಲ, ನಟರಾಜ್, ಓಂ ಪ್ರಸನ್ನ, ಚಂದ್ರಶೇಖರ್, ಸರವಣದಾಸ್, ಲೋಕೇಶ್, ಕೇಶವ್, ಯಶ್ ಪಾಲ್ ಇದ್ದರು.
