ವಾಲ್ಮೀಕಿ ಸಮಾಜಕ್ಕೆ ನಿಂದನೆ, ಕತ್ತಿ ವಿರುದ್ಧ 27ಕ್ಕೆ ಬೃಹತ್‌ ಪ್ರತಿಭಟನೆ

| Published : Oct 25 2025, 01:00 AM IST

ವಾಲ್ಮೀಕಿ ಸಮಾಜಕ್ಕೆ ನಿಂದನೆ, ಕತ್ತಿ ವಿರುದ್ಧ 27ಕ್ಕೆ ಬೃಹತ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ರಮೇಶ ಕತ್ತಿ ಬೆಳಗಾವಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿಯೇ ಅವಾಚ್ಯವಾಗಿ ಸಮುದಾಯದ ಹೆಸರನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ. ಇದರಿಂದ ಸಮುದಾಯದ ಜನರಿಗೆ ಅವಮಾನ, ಆಘಾತವಾಗಿದೆ.

ಹುಬ್ಬಳ್ಳಿ:

ಬೆಳಗಾವಿಯ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ ಅವರು ಸಾರ್ವಜನಿಕವಾಗಿ ವಾಲ್ಮೀಕಿ ಸಮುದಾಯ ಅವಮಾನಿಸುವ ಹಾಗೂ ಜನಾಂಗದ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅ. 27ರಂದು ಬೆಳಗ್ಗೆ 11ಕ್ಕೆ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್ ಗುಡಸಲಮನಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ರಮೇಶ ಕತ್ತಿ ಬೆಳಗಾವಿಯ ಬಿ.ಕೆ. ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿಯೇ ಅವಾಚ್ಯವಾಗಿ ಸಮುದಾಯದ ಹೆಸರನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ. ಇದರಿಂದ ಸಮುದಾಯದ ಜನರಿಗೆ ಅವಮಾನ, ಆಘಾತವಾಗಿದೆ. ಈ ಬಗ್ಗೆ ಧಾರವಾಡದ ಉಪನಗರ ಠಾಣೆಯಲ್ಲಿ ಜಾತಿನಿಂದನೆ ದೂರು ದಾಖಲಿಸಲಾಗಿದೆ. ಆದರೂ ಈ ವರೆಗೆ ರಮೇಶ ಕತ್ತಿ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬೆಳಗಾವಿಯ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಧಾರವಾಡದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯುವ ಬೃಹತ್‌ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ. ಅರವಿಂದ, ಬಸವರಾಜ ಕುರಭೇಟ್, ಮಂಜುನಾಥ ಹುಡೇದ, ಶಿವಕುಮಾರ ಕಸಳ್ಳಿ, ಲಕ್ಷ್ಮಣ ಕಡಪ್ಪನವರ, ಅಶೋಕ ವಾಲ್ಮೀಕಿ ಸೇರಿದಂತೆ ಹಲವರಿದ್ದರು.