ಕನ್ನಡ ಅಸ್ಮಿತೆ ಬಾನೆತ್ತರಕ್ಕೆ ಹಾರಿಸಿದ ಮಾಸ್ತಿ

| Published : May 23 2025, 11:45 PM IST

ಕನ್ನಡ ಅಸ್ಮಿತೆ ಬಾನೆತ್ತರಕ್ಕೆ ಹಾರಿಸಿದ ಮಾಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ೧೩೪ನೇ ಜಯಂತಿ ಕಾರ್ಯಕ್ರಮ ಜೂ.೬ರಂದು ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಆಯೋಜಿಸಲಾಗುತ್ತದೆ, ಮಾಸ್ತಿ ಮನೆಯ ಆವರಣದಲ್ಲಿ ದಾನಿಗಳು ನೀಡಿರುವ ಪುತ್ಥಳಿ ಅನಾವರಣ ಮಾಡಿ ನಂತರ ಸ್ತಬ್ಧಚಿತ್ರಗಳ ಮೆರವಣಿಗೆ ೧೦.೩೦ ಚಾಲನೆ ನೀಡುವುದು ನಂತರ ೧೧.೩೦ ರಿಂದ ೧೨.೩೦ ರವರಿಗೆ ಮಕ್ಕಳ ಕವಿಗೋಷ್ಠಿ ನಡೆಸುವುದು.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾಡಳಿತ ಮತ್ತು ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್‌ನಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ೧೩೪ನೇ ವರ್ಷದ ಜಯಂತಿಯ ಅಂಗವಾಗಿ ಕಾರ್ಯಕ್ರಮ ಆಚರಣೆ ಮಾಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಿದ್ದರು.ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಕನ್ನಡದ ಸಣ್ಣ ಕಥೆಗಳ ಜನಕರೆಂದೇ ಖ್ಯಾತಿ ಹೊಂದಿದ್ದ ಮಾಸ್ತಿ ಅವರು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡವನ್ನು ಹೃದಯ ಭಾಗಿಯಾಗಿ ಜೀವಂತವಿರಿಸಿಕೊಂಡವರು ಎಂದು ಬಣ್ಣಿಸಿದರು.

ಸಹಾಯಕ ಆಯುಕ್ತರಾಗಿದ್ದ ಮಾಸ್ತಿ

ಮಾಸ್ತಿ ಕನ್ನಡದ ಆಸ್ತಿ ಎನಿಸಿಕೊಂಡಿದ್ದ ಕೇವಲ ಸಾಹಿತ್ಯ ಕೃಷಿಯಿಂದಲ್ಲ ಕನ್ನಡದ ಮನಸ್ಸುಗಳನ್ನು, ಲೇಖಕರನ್ನು, ಕವಿಗಳನ್ನು ಘೋಷಿಸಿ ಕನ್ನಡದ ಅಸ್ಮಿತೆಯನ್ನು ಎತ್ತರಕ್ಕೆ ಏರಿಸಿದ ಕಾರಣದಿಂದ ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ ಎಂದರು.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ೧೩೪ನೇ ಜಯಂತಿ ಕಾರ್ಯಕ್ರಮ ಜೂ.೬ರಂದು ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಆಯೋಜಿಸಲಾಗುತ್ತದೆ, ಮಾಸ್ತಿ ಮನೆಯ ಆವರಣದಲ್ಲಿ ದಾನಿಗಳು ನೀಡಿರುವ ಪುತ್ಥಳಿ ಅನಾವರಣ ಮಾಡಿ ನಂತರ ಸ್ತಬ್ಧಚಿತ್ರಗಳ ಮೆರವಣಿಗೆ ೧೦.೩೦ ಚಾಲನೆ ನೀಡುವುದು ನಂತರ ೧೧.೩೦ ರಿಂದ ೧೨.೩೦ ರವರಿಗೆ ಮಕ್ಕಳ ಕವಿಗೋಷ್ಠಿ ನಡೆಸುವುದು.

ನಂತರ ಮಧ್ಯಾಹ್ನ ೧ ಗಂಟೆಗೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಜನಪ್ರತಿ ನಿಧಿಗಳು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಛಲವಾದಿ, ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಮಾಲೂರು ತಹಸೀಲ್ದಾರ್ ರೂಪ, ಟ್ರಸ್ಟಿಗಳಾದ ವೆಂಕಟಾಚಲಪತಿ, ಕನ್ನಡ ಸಾಹಿತ್ಯ ಪರಿಷತ್ ಡಾ.ಶಂಕರಪ್ಪ ಇದ್ದರು.