ಮಾತಾ ಲಕ್ಷ್ಮಮ್ಮದೇವಿ ಮೂರ್ತಿ, ಎತ್ತುಗಳ ಬೃಹತ್‌ ಮೆರವಣಿಗೆ

| Published : Jun 23 2024, 02:06 AM IST / Updated: Jun 23 2024, 02:07 AM IST

ಮಾತಾ ಲಕ್ಷ್ಮಮ್ಮದೇವಿ ಮೂರ್ತಿ, ಎತ್ತುಗಳ ಬೃಹತ್‌ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಹುಣ್ಣಿಮೆ ನಿಮಿತ್ತ ನಗರದಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನವಾದ ಶನಿವಾರ ಶ್ರೀಮಾತಾ ಲಕ್ಷ್ಮಮ್ಮ ದೇವಿ ಮೂರ್ತಿ, ಎತ್ತುಗಳ ಬೃಹತ್‌ ಮೆರವಣಿಗೆ ಹಾಗೂ ದೇಶದ ವಿವಿಧ ಪ್ರಾಂತಗಳಿಂದ ಆಗಮಿಸಿದ್ದ 40 ಕ್ಕು ಹೆಚ್ಚು ಕಲಾತಂಡಗಳಿಂದ ಆಕರ್ಷಣೀಯ ಕಲಾ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.

ಗಮನ ಸೆಳೆದ ಆಕರ್ಷಣೆ ಕಲಾ ಪ್ರದರ್ಶನಕನ್ನಡಪ್ರಭ ವಾರ್ತೆ ರಾಯಚೂರು

ಕಾರಹುಣ್ಣಿಮೆ ನಿಮಿತ್ತ ನಗರದಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನವಾದ ಶನಿವಾರ ಶ್ರೀಮಾತಾ ಲಕ್ಷ್ಮಮ್ಮ ದೇವಿ ಮೂರ್ತಿ, ಎತ್ತುಗಳ ಬೃಹತ್‌ ಮೆರವಣಿಗೆ ಹಾಗೂ ದೇಶದ ವಿವಿಧ ಪ್ರಾಂತಗಳಿಂದ ಆಗಮಿಸಿದ್ದ 40 ಕ್ಕು ಹೆಚ್ಚು ಕಲಾತಂಡಗಳಿಂದ ಆಕರ್ಷಣೀಯ ಕಲಾ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.

ಸ್ಥಳೀಯ ಮುಖ್ಯರಸ್ತೆ, ವೃತ್ತ ಹಾಗೂ ಬಡಾವಣೆಗಳಲ್ಲಿ ಸಾಗಿದ ಭವ್ಯ ಮೆರವಣಿಗೆಯನ್ನು ನಿವಾಸಿಗಳು ವೀಕ್ಷಿಸಿ ಸಂಭ್ರಮಿಸಿದರು. ಮೆರವಣಿಗೆಯನ್ನು ಹರಿಹರಪುರದ ಆದಿ ಶಂಕರಾಚಾರ್ಯ ಶಾರದಾಲಕ್ಷ್ಮೀನರಸಿಂಹ ಪೀಠಾಧೀಶ್ವರರಾದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು. ಶ್ರೀಮಾತಾಲಕ್ಷ್ಮಮ್ಮ ದೇವಿ ಮೂರ್ತಿ ಅಂಬಾರಿ ಹಾಗೂ ಅಲಂಕಾರಿತ ಎತ್ತುಗಳು ಮೆರವಣಿಗೆಯಲ್ಲಿ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಿಂದ 40 ಕ್ಕು ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಆಕರ್ಷಿಸಿದವು. ಕುದುರೆ ಡೊಳ್ಳು ಮತ್ತು ಲಂಬಾಣಿ ನೃತ್ಯ, ಮಹಿಳೆಯರ ತಮಟೆ ಭರಿಸುವುದು ಮದ್ದಲೆ, ಕರಡಿ ಮಜುಲು, ಶಿವನವತಾರ, ಕುಂಭನೃತ್ಯ ವಿವಿಧ ಕಲಾ ತಂಡಗಳ ನೃತ್ಯ ಮನೋಜ್ಞವಾಗಿದ್ದವು.--------------------

22ಕೆಪಿಆರ್‌ಸಿಆರ್ 04

ರಾಯಚೂರು ನಗರದಲ್ಲಿ ಕಾರಹುಣ್ಣಿಮೆ ನಿಮಿತ್ತ ಮುನ್ನೂರು ಕಾಪು (ಬಲಿಜ) ಸಮಾಜದಿಂದ ಹಮ್ಮಿಕೊಂಡಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನ ಶ್ರೀಮಾತಾ ಲಕ್ಷ್ಮಮ್ಮದೇವಿ ಮೂರ್ತಿ ಅಂಬಾರಿ ಹಾಗೂ ಎತ್ತುಗಳ ಬೃಹತ್‌ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.22ಕೆಪಿಆರ್‌ಸಿಆರ್ 05ಮತ್ತು06

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನ ಕಾರಹುಣ್ಣಿಮೆ ನಿಮಿತ್ತ ನಡೆದ ಮೆರವಣಿಗೆಯಲ್ಲಿ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಕಲಾತಂಡಗಳು ಪಾಲ್ಗೊಂಡಿದ್ದವು.