ಮಾತಾ ಮಾಣಿಕೇಶ್ವರಿ ಆಶ್ರಮ ಪ್ರವಾಸಿ ತಾಣ: ಸರ್ಕಾರಕ್ಕೆ ಅಭಿನಂದನೆ

| Published : Mar 14 2025, 12:34 AM IST

ಮಾತಾ ಮಾಣಿಕೇಶ್ವರಿ ಆಶ್ರಮ ಪ್ರವಾಸಿ ತಾಣ: ಸರ್ಕಾರಕ್ಕೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

Mata Manikeshwari Ashram tourist destination: Congratulations to the government

-ಗುರುಮಠಕಲ್‌ ನಲ್ಲಿ ಅಭಿನಂದನಾ ಪತ್ರ ಪ್ರದರ್ಶಿಸಿದ ಶಿವಯ್ಯಸ್ವಾಮಿ

-----

ಕನ್ನಡಪ್ರಭ ವಾರ್ತೆ ಗುರುಮಠಕಲ್‌

ಕ್ಷೇತ್ರ ಯಾನಾಗುಂದಿ ಬೆಟ್ಟದಲ್ಲಿರುವ ಮಾತಾ ಮಾಣಿಕೇಶ್ವರಿ ಆಶ್ರಮವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರ ನಿರ್ಧರಿಸಿ ಘೋಷಿಸಿರುವ ಹಿನ್ನೆಲೆಯಲ್ಲಿ ಆಶ್ರಮದ ಭಕ್ತರಿಗೆ ಮತ್ತು ಟ್ರಸ್ಟಿನ ಸದಸ್ಯರುಗಳಿಗೆ ಅತೀವ ಸಂತೋಷವಾಗಿದೆ. ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಮತ್ತು ಸಚಿವರುಗಳಿಗೆ ಆಶ್ರಮ ವತಿಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಸಮೀಪದ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗಡಿಭಾಗ ವ್ಯಾಪ್ತಿಗೆ ಒಳಪಟ್ಟಿರುವ ಮಾತಾ ಮಾಣಿಕೇಶ್ವರಿ ಆಶ್ರಮವನ್ನು ಪ್ರವಾಸ ತಾಣವನ್ನಾಗಿ ಮಾಡುವಂತೆ ಕಲಬುರ್ಗಿ ವಿಧಾನ ಪರಿಷತ್‌ನ ಸದಸ್ಯ ತಿಪ್ಪಣ್ಣಪ್ಪ ಕಮ್ಮಕನೂರು ಅವರು ವಿಧಾನ ಸಭೆಯ ಚರ್ಚಾ ಸಂದರ್ಭದಲ್ಲಿ ಪ್ರಸ್ತಾಪಿಸಿದಾಗ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಧನಾತ್ಮಕವಾಗಿ ಸ್ಪಂಧಿಸಿದಕ್ಕೆ ಧನ್ಯವಾದಗಳು ತಿಳಿಸುತ್ತೇನೆ, ಹಿಂದೆ ಮಾಜಿ ಸಚಿವ ಡಾ.ಮಾಲಕರೆಡ್ಡಿ ಅವರ ಜೊತೆಯಲ್ಲಿ ಹೆಚ್.ಕೆ ಪಾಟೀಲ್ ನಮ್ಮ ಆಶ್ರಮಕ್ಕೆ ಬಂದು ಮಾತಾಜಿಯ ದರ್ಶನ ಪಡೆದ್ದಾರೆ ಎಂದು ಅವರು ಸ್ಮರಿಸಿದರು.

----

13ಜಿಕೆಎಲ್9 : ಗುರುಮಠಕಲ್ ಸಮೀಪದ ಯಾನಾಗುಂದಿಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಶಿವಯ್ಯಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಿನಂದನಾ ಪತ್ರವನ್ನು ಪ್ರದರ್ಶಿಸಿದರು. ಟ್ರಸ್ಟ್ ಸದಸ್ಯರು ಇದ್ದರು.

---000---