ಸಾರಾಂಶ
ವಿಜಯಪುರ: ಬಲಿಷ್ಠ ಭಾರತ ದೇಶಕ್ಕಾಗಿ ಮತ್ತೊಮ್ಮೆ ಮೋದಿಗೆ ಮತ ನೀಡಿ ಎಂಬ ಜನರ ಅಭಿಪ್ರಾಯಕ್ಕಾಗಿ ಸಾದ್ವಿ ಮಾತಾ ರಾಜಲಕ್ಷ್ಮೀ ಬುಲೆಟ್ ಬೈಕ್ ಯಾತ್ರೆ ನಡೆಸುತ್ತಿದ್ದಾರೆ. ತಮಿಳುನಾಡು ರಾಜ್ಯದಿಂದ ಈ ಯಾತ್ರೆ ಪ್ರಾರಂಭವಾಗಿದ್ದು, 15 ರಾಜ್ಯಗಳ ಮುಖಾಂತರ 21 ಸಾವಿರ ಕಿಮೀ ಬೈಕ್ ಯಾತ್ರೆ ನಡೆಸಲಾಗುತ್ತಿದೆ. ಈ ಯಾತ್ರೆ ಏ.18 ಕ್ಕೆ ದೆಹಲಿಗೆ ತಲುಪುವಂತೆ ಯೋಜನೆ ಹಾಕಿಕೊಳ್ಳಲಾಗಿದೆ. ಇದೀಗ ವಿಜಯಪುರ ನಗರಕ್ಕೆ ಈ ಯಾತ್ರೆಯು ಪ್ರವೇಶಿಸಿದ್ದು, ಸಾದ್ವಿ ಮಾತಾ ರಾಜಲಕ್ಷ್ಮೀ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಉಪಾಧ್ಯಕ್ಷ ಶ್ರೀಧರ ಬಿಜ್ಜರಗಿ ನೇತೃತ್ವದಲ್ಲಿ ನಗರಕ್ಕೆ ಭವ್ಯ ಸ್ವಾಗತ ಕೋರಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಲಿಷ್ಠ ಭಾರತ ದೇಶಕ್ಕಾಗಿ ಮತ್ತೊಮ್ಮೆ ಮೋದಿಗೆ ಮತ ನೀಡಿ ಎಂಬ ಜನರ ಅಭಿಪ್ರಾಯಕ್ಕಾಗಿ ಸಾದ್ವಿ ಮಾತಾ ರಾಜಲಕ್ಷ್ಮೀ ಬುಲೆಟ್ ಬೈಕ್ ಯಾತ್ರೆ ನಡೆಸುತ್ತಿದ್ದಾರೆ. ತಮಿಳುನಾಡು ರಾಜ್ಯದಿಂದ ಈ ಯಾತ್ರೆ ಪ್ರಾರಂಭವಾಗಿದ್ದು, 15 ರಾಜ್ಯಗಳ ಮುಖಾಂತರ 21 ಸಾವಿರ ಕಿಮೀ ಬೈಕ್ ಯಾತ್ರೆ ನಡೆಸಲಾಗುತ್ತಿದೆ. ಈ ಯಾತ್ರೆ ಏ.18 ಕ್ಕೆ ದೆಹಲಿಗೆ ತಲುಪುವಂತೆ ಯೋಜನೆ ಹಾಕಿಕೊಳ್ಳಲಾಗಿದೆ. ಇದೀಗ ವಿಜಯಪುರ ನಗರಕ್ಕೆ ಈ ಯಾತ್ರೆಯು ಪ್ರವೇಶಿಸಿದ್ದು, ಸಾದ್ವಿ ಮಾತಾ ರಾಜಲಕ್ಷ್ಮೀ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಉಪಾಧ್ಯಕ್ಷ ಶ್ರೀಧರ ಬಿಜ್ಜರಗಿ ನೇತೃತ್ವದಲ್ಲಿ ನಗರಕ್ಕೆ ಭವ್ಯ ಸ್ವಾಗತ ಕೋರಲಾಯಿತು.ನಗರದ ಅಂಬೇಡ್ಕರ ವೃತ್ತದಲ್ಲಿ ಸಾದ್ವಿ ಮಾತಾ ರಾಜಲಕ್ಷ್ಮೀ ಗೆ ಸ್ವಾಗತ ಕೋರಿದ್ದು, ನಂತರ ಬಸವೇಶ್ವರ ವೃತ್ತ, ಗಾಂಧಿ ಚೌಕ್ ಮುಖಾಂತರ ಸಾಗಿ ಸಿದ್ದೇಶ್ವರ ದೇವಸ್ಥಾನದ ಮಾರ್ಗವಾಗಿ ತೆರಳಿ ಬೈಕ್ ಯಾತ್ರೆ ಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿಜಿ ಗೆಲುವಿಗಾಗಿ ರಾಜಲಕ್ಷ್ಮೀ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ಸಾದ್ವಿ ರಾಜಲಕ್ಷ್ಮೀ, ದೇಶದಲ್ಲಿ ಬಡವರ ಬಗ್ಗೆ ಕಾಳಜಿ ಪ್ರಧಾನಿ ಮೋದಿ ವಹಿಸಿದ್ದಾರೆ. ದೇಶದ ರಕ್ಷಣೆಯಲ್ಲಿ ಪ್ರಧಾನಿ ಮೋದಿ ಅವರ ಪಾತ್ರ ಬಹಳ ದೊಡ್ಡದು, ಮಹಿಳೆಯರ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದರು.ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶ್ರೀಧರ ಬಿಜ್ಜರಗಿ ಮಾತನಾಡಿ, ಪ್ರಧಾನಿ ಮೋದಿಗಾಗಿ ಸುಡು ಬಿಸಲು ಲೆಕ್ಕಿಸದೆ ಸಾದ್ವಿ ಮಾತಾ ರಾಜಲಕ್ಷ್ಮೀ ಅವರು ದೇಶ ಸುತ್ತುತ್ತಿದ್ದಾರೆ. ಇದು ದೇಶದ ಅಖಂಡತೆಗೆ ಹಾಗೂ ಅಭಿವೃದ್ಧಿಗಾಗಿ ಮಾತೆಯವರ ದೇಶ ಸಂಚಾರಕ್ಕೆ ಒಳ್ಳಯದಾಗಲಿ ಎಂದು ಶುಭ ಹಾರೈಸಿದರು.
ಬೈಕ್ ರಾಲಿಯಲ್ಲಿ ಮಹೇಶ ಮುನುರ್, ಶಿವರಾಜ ಬಿರಾದಾರ, ರಾಹುಲ ಐಹೊಳೆ, ವಿನಾಯಕ ಬಂಡಿ, ಸ್ವರೂಪ ಗಾಯಕವಾಡ, ಎಲ್ಲಪ್ಪ ಭಜಂತ್ರಿ, ಸಾಯಿಕುಮಾರ ಹತ್ತಳ್ಳಿ, ಸದಾಶಿವ ಬಿರಾದಾರ, ಸಚಿನ ಬಿಜ್ಜರಗಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.