ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿ: ಶ್ರೀಪತಿ

| Published : Jan 05 2025, 01:30 AM IST

ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿ: ಶ್ರೀಪತಿ
Share this Article
  • FB
  • TW
  • Linkdin
  • Email

ಸಾರಾಂಶ

ವಸ್ತು ಪ್ರದರ್ಶನವು ಮಕ್ಕಳಲ್ಲಿ ಕಲ್ಪನಾ ಶಕ್ತಿ, ಮೇಧಾ ಶಕ್ತಿ ಹೆಚ್ಚಿಸುವ ಜೊತೆಗೆ ಅಧ್ಯಯನ ಶೀಲತೆಯನ್ನು ಬೆಳೆಸಿಕೊಳ್ಳಲು ತುಂಬಾ ಉಪಯುಕ್ತವಾಗುತ್ತದೆ. ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ದೊಡ್ಡ ಪ್ರಾಜೆಕ್ಟ್ ಗಳನ್ನು ಮಾಡಲು ಸಿದ್ಧತೆ ಸೇರಿದಂತೆ ಓದಿನಲ್ಲಿ ತೊಡಗಲು ವಸ್ತು ಪ್ರದರ್ಶನ ನೆರವಾಗಲಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಶಾಲಾ ಕಾಲೇಜುಗಳಲ್ಲಿ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ವಿದ್ಯಾರ್ಥಿಗಳ ಕಲ್ಪನಾ ಶಕ್ತಿ ಮತ್ತು ಮೇಧಾ ಶಕ್ತಿ ಹೆಚ್ಚಳವಾಗಿ ಸಾಧನೆಗೆ ಸಹಕಾರಿಯಾಗಲಿದೆ ಎಂದು ಕೆರಗೋಡ ಮಾಧವ ವಿದ್ಯಾಲಯ ಕಾರ್ಯದರ್ಶಿ ಶ್ರೀಪತಿ ತಿಳಿಸಿದರು.

ಚನ್ನಪಟ್ಟಣ ರಸ್ತೆಯ ಜೆಜೆ ಪಬ್ಲಿಕ್ ಶಾಲಾ ಅವರಣದಲ್ಲಿ 2 ದಿನಗಳ ಕಾಲ ಆಯೋಜಿಸಿರುವ 2024- 2025ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ವಸ್ತು ಪ್ರದರ್ಶನವು ಮಕ್ಕಳಲ್ಲಿ ಕಲ್ಪನಾ ಶಕ್ತಿ, ಮೇಧಾ ಶಕ್ತಿ ಹೆಚ್ಚಿಸುವ ಜೊತೆಗೆ ಅಧ್ಯಯನ ಶೀಲತೆಯನ್ನು ಬೆಳೆಸಿಕೊಳ್ಳಲು ತುಂಬಾ ಉಪಯುಕ್ತವಾಗುತ್ತದೆ ಎಂದರು.

ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ದೊಡ್ಡ ಪ್ರಾಜೆಕ್ಟ್ ಗಳನ್ನು ಮಾಡಲು ಸಿದ್ಧತೆ ಸೇರಿದಂತೆ ಓದಿನಲ್ಲಿ ತೊಡಗಲು ವಸ್ತು ಪ್ರದರ್ಶನ ನೆರವಾಗಲಿದೆ ಎಂದರು.

ಪ್ರಾಂಶುಪಾಲರಾದ ಲಲಿತಾಂಬ ಸೋಮಶೇಖರ್ ಮಾತನಾಡಿ, ಎರಡು ದಿನಗಳ ವಸ್ತು ಪ್ರದರ್ಶನದಲ್ಲಿ ಮೊದಲು ಫ್ರಿ ಕೆಜಿಯಿಂದ 3ನೇ ತರಗತಿಯ ವಿದ್ಯಾರ್ಥಿಗಳಿಂದ ಕಿಡ್ಸೋ ಕಾರ್ಯಕ್ರಮ, 4 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಂದ ವಿಶೇಷವಾಗಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಒಂದೇ ವಿಷಯಕ್ಕೆ ಸೀಮಿತವಾಗದೆ ಎಲ್ಲಾ ಪಠ್ಯ ವಿಷಯಗಳಿಗೂ ಸಂಬಂಧಿಸಿದಂತೆ ಹೆಚ್ಚು ಹೊತ್ತು ನೀಡಿ ಒಂದು ತಿಂಗಳಿಂದ ತಯಾರಿ ಮಾಡಿದ್ದೇವೆ. ಕನ್ನಡ ಹಾಗೂ ಹಿಂದಿ ಭಾಷೆಗೂ ಹೆಚ್ಚು ಮಹತ್ವ ನೀಡಿದ್ದೇವೆ. ವಿಜ್ಞಾನ ವಿಷಯಗಳಲ್ಲಿ ಮಕ್ಕಳಿಗೆ ಹೆಚ್ಚು ಅರಿವು ಮೂಡಿಸಲು ಪ್ರತಿಕೃತಿಗಳನ್ನು ತಯಾರಿಸಿದ್ದೇವೆ ಎಂದರು.

ಗಣಿತದ ವಿಷಯದಲ್ಲಿ ಅವರಿಗೆ ಲೆಕ್ಕಾಚಾರ ಮಾಡಲು ಸುಲಭ ವಿಧಾನ ತಿಳಿಸುವ ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ. ಸಮಾಜ ಶಾಸ್ತ್ರ ವಿಷಯದಲ್ಲಿ ನಿಜವಾದ ಇತಿಹಾಸ ತಿಳಿಸುವ ನಮ್ಮ ದೇಶದ ನಿಜವಾದ ನಾಯಕರದ ಸೈನಿಕರ ವಿಷಯಕ್ಕೆ ಹೆಚ್ಚು ಹೊತ್ತು ನೀಡಿ ಮಾದರಿಗಳನ್ನು ತಯಾರಿಸಿದ್ದೇವೆ. ಗುರು ಪರಂಪರೆ ತಿಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಸಂಪನ್ಮೂಲಗಳು, ಸೋಲರ್ ಆಧಾರಿತ ಮಾದರಿಗಳು, ಪೈಥಾಗೋರಸ್ ಪ್ರಮೇಯ, ಉಪಗ್ರಹ ಸಂವಹನ ಮಾದರಿ, ಉಷ್ಣ ವಿದ್ಯುತ್ ಸ್ಥಾವರ, ದಸರಾ ಉತ್ಸವ, ಬೆಂಗಳೂರು ಮಾದರಿ, ಬೀಜಗಣಿತದ ಗುರುತುಗಳು, ಯಕ್ಷಗಾನ, ಜ್ಯೋತಿರ್ಲಿಂಗ, ಆರ್ಥಿಕ ವಲಯಗಳು , ರಕ್ಷಣಾ ಪಡೆ ಸೇರಿದಂತೆ ಎಲ್ಲ ವಿಷಯದ ಮಾದರಿಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಹಾಗೂ ಸಾರ್ವಜನಿಕರು, ಪೋಷಕರ ಗಮನ ಸೆಳೆಯಲಾಯಿತು.

ಕಾರ್ಯಕ್ರಮವನ್ನು ಶ್ರೀರಂಗಪಟ್ಟಣ ವಿದ್ಯಾಭಾರತಿ ಸ್ಕೂಲಿನ ಸಂಚಾಲಕ ರಂಗನಾಥ್ ಉದ್ಘಾಟಿಸಿದರು. ಮಳವಳ್ಳಿ ಎಜುಕೇಷನ್‌ ಟ್ರಸ್ಟ್ ಕಾರ್ಯದರ್ಶಿ ಕೆ.ಜೆ.ಸೋಮಶೇಖರ್, ಪ್ರಾಂಶುಪಾಲೆ ಕೆ.ಎನ್.ಲಲಿತಾಂಭ, ಮುಖ್ಯ ಶಿಕ್ಷಕಿ ಶಿವಮಣಿ, ಸಂಯೋಜಕ ವಿಕಾಶ್, ಶಿಕ್ಷಕಿಯರಾದ ಶೃತಿ, ಕೋಮಲ, ಶಬ್ರಿನ್, ಶಿಕ್ಷಕಿಯರು ಪೋಷಕರು ಸೇರಿದಂತೆ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.