ಗಣಿತ ಮೇಳಗಳು ಮಕ್ಕಳ ಮಾನಸಿಕ ಶಕ್ತಿ ಹೆಚ್ಚಿಸುತ್ತವೆ

| Published : Sep 29 2024, 01:30 AM IST

ಸಾರಾಂಶ

ಗಣಿತ ಮೇಳಗಳು ಮಕ್ಕಳ ಮಾನಸಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಬೌದ್ಧಿಕವಾಗಿ ಸದೃಢಗೊಳಿಸುತ್ತವೆ ಎಂದು ಕಾಮತಿ ಕೂಡಿಗೆ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಅಭಿಪ್ರಾಯಪಟ್ಟರು. ನಮ್ಮ ಜೀವನದಲ್ಲಿ ಗಣಿತ ಬಹಳ ಮಹತ್ವ ಪಡೆಯುತ್ತದೆ. ದೈನಂದಿನ ಜೀವನದಲ್ಲಿ ಲೆಕ್ಕಾಚಾರ ಹಾಸುಹೊಕ್ಕಾದ ಪ್ರಕ್ರಿಯೆಯಾಗಿದೆ. ಇಂತಹ ಕೌಶಲಗಳನ್ನು ಮಕ್ಕಳಲ್ಲಿ ವೃದ್ಧಿಸುವ ನಿಟ್ಟಿನಲ್ಲಿ ಇಂತಹ ಮೇಳಗಳು ತುಂಬಾ ಮಹತ್ವ ಪಡೆಯುತ್ತವೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಗಣಿತ ಮೇಳಗಳು ಮಕ್ಕಳ ಮಾನಸಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಬೌದ್ಧಿಕವಾಗಿ ಸದೃಢಗೊಳಿಸುತ್ತವೆ ಎಂದು ಕಾಮತಿ ಕೂಡಿಗೆ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ತಾಳೂರು ಪಂಚಾಯಿತಿ ವ್ಯಾಪ್ತಿಯ ದೇವರಾಜಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಫೌಂಡೇಶನ್ ಮತ್ತು ಶಾಲಾ ಶಿಕ್ಷಣ ಇಲಾಖೆ, ತಾಳೂರು ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಕಾಮತಿಕೂಡಿಗೆ ಕ್ಲಸ್ಟರ್‌ ಮಟ್ಟದ ಗಣಿತಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಜೀವನದಲ್ಲಿ ಗಣಿತ ಬಹಳ ಮಹತ್ವ ಪಡೆಯುತ್ತದೆ. ದೈನಂದಿನ ಜೀವನದಲ್ಲಿ ಲೆಕ್ಕಾಚಾರ ಹಾಸುಹೊಕ್ಕಾದ ಪ್ರಕ್ರಿಯೆಯಾಗಿದೆ. ಇಂತಹ ಕೌಶಲಗಳನ್ನು ಮಕ್ಕಳಲ್ಲಿ ವೃದ್ಧಿಸುವ ನಿಟ್ಟಿನಲ್ಲಿ ಇಂತಹ ಮೇಳಗಳು ತುಂಬಾ ಮಹತ್ವ ಪಡೆಯುತ್ತವೆ. ಅಳತೆಯ ಮಾನಗಳು, ಹಣದ ಲೆಕ್ಕಾಚಾರ, ಅಂದಾಜು ಲೆಕ್ಕ, ದೂರ, ಆಳ, ಎತ್ತರ, ಉದ್ದ, ಅಗಲ, ತೂಕ, ಪ್ರಮಾಣ ಮುಂತಾದ ಅಂಶಗಳಿಗೆ ಇಂದಿನ ಗಣಿತ ಮೇಳದಲ್ಲಿನ ಪ್ರಮುಖ ಅಂಶಗಳಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಆನಂದ್, ದೇವರಾಜಪುರ ಶಾಲೆಯ ಮುಖ್ಯ ಶಿಕ್ಷಕಿ ಅನ್ನಪೂರ್ಣ, ವಾಟೆಹೊಳೆ ಮುಖ್ಯ ಶಿಕ್ಷಕ ಮಂಜುನಾಥರಾವ್, ಟಿ.ಗುಡ್ಡೇನಹಳ್ಳಿ ಮುಖ್ಯ ಶಿಕ್ಷಕ ಎಚ್.ಡಿ.ಕುಮಾರ್‌, ಬೊಮ್ಮನಮನೆ ಮುಖ್ಯ ಶಿಕ್ಷಕ ಪರಮೇಶ್ ಸೇರಿದಂತೆ ಹಲವರು ಮಾತನಾಡಿದರು. ದೇವರಾಜಪುರ ಶಾಲೆಯ ಸಹ ಶಿಕ್ಷಕಿ ವೀಣಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಫೊಟೋ ಶೀರ್ಷಿಕೆ:

ಆಲೂರು ತಾಲೂಕಿನ ತಾಳೂರು ಪಂಚಾಯಿತಿ ವ್ಯಾಪ್ತಿಯ ದೇವರಾಜಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾಮತಿಕೂಡಿಗೆ ಕ್ಲಸ್ಟರ್ ಮಟ್ಟದ ಗಣಿತಮೇಳ ಉದ್ಘಾಟಿಸಲಾಯಿತು.