ಸಾರಾಂಶ
ತಾಲೂಕಿನ ಹೆಡಗಿಮದ್ರಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯಾ ಸ್ವಾಮಿ ಮಠಪತಿ ಅಧ್ಯಕ್ಷರಾಗಿ ಹಾಗೂ ಲಕ್ಷ್ಮಣ ತುಳಜಾರಾಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಲಕ್ಷ್ಮಣ ಆಯ್ಕೆ
ಯಾದಗಿರಿ: ತಾಲೂಕಿನ ಹೆಡಗಿಮದ್ರಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯಾ ಸ್ವಾಮಿ ಮಠಪತಿ ಅಧ್ಯಕ್ಷರಾಗಿ ಹಾಗೂ ಲಕ್ಷ್ಮಣ ತುಳಜಾರಾಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಟ್ಟು 12 ಜನ ಸದಸ್ಯ ಬಲದ ಸಂಘದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರ ಪರಿಶೀಲನೆ ನಡೆಸಿ, ಕ್ರಮಬದ್ಧವಾದ ಕಾರಣ ಮಠಪತಿ ಅಧ್ಯಕ್ಷರಾಗಿ ಹಾಗೂ ಲಕ್ಷ್ಮಣ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ ಘೋಷಿಸಿದರು.
ನಂತರ ಗ್ರಾಮದಲ್ಲಿ ವಿಜಯೋತ್ಸವ ಆಚರಿಸಲಾಯಿತು. ವಿರೂಪಾಕ್ಷಯ್ಯಾ ಸ್ವಾಮಿ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದು, ಪಕ್ಷ ನಿಷ್ಠೆ ಹೊಂದಿದ ಕಾರಣ ಎರಡನೇ ಅವಧಿಗೆ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಹುದ್ದೆಯಲ್ಲಿದ್ದಾರೆ.ನೂತನ ಅಧ್ಯಕ್ಷ ವಿರುಪಾಕ್ಷಯ್ಯಾ ಸ್ವಾಮಿ ಮಠಪತಿ ಮಾತನಾಡಿ, ಸಂಘದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಸೌಲಭ್ಯಗಳನ್ನು ರೈತಾಪಿ ವರ್ಗಕ್ಕೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸದಸ್ಯ ಸಿದ್ರಾಮರಡ್ಡಿ ಅಣಿಬಿ, ನಿಂಗಪ್ಪ ತಳಕ, ಬಲವಂತಪ್ಪ ಪೂಜಾರಿ, ಮಲ್ಲಣ್ಣಗೌಡ ಅರಿಕೇರಿ, ಅಮರೇಶ ಕೆಂಭಾವಿ, ಮಲ್ಲಿಕಾರ್ಜುನ ಅರಿಕೇರಿ, ಭೀಶಪ್ಪ ಹುಲಿಕಲ್, ಶಿವಪ್ಪ ನಾಟೇಕರ, ಪಾರ್ವತಮ್ಮ ಅಣಿಬಿ, ಸಾಬಮ್ಮ ಯಂಕಪ್ಪ ಮತ್ತು ಹಿರಿಯ ಮುಖಂಡ ನಾಗರಡ್ಡಿಗೌಡ ಅಣಿಬಿ, ಸಿದ್ದಲಿಂಗರಡ್ಡಿ ಅರಿಕೇರಿ, ಗ್ರಾಮ ಪಂಚಾಯ್ತಿ ಸದಸ್ಯ ಸಾಬಯ್ಯ ಬೈರಿ, ಭಾಗಣ್ಣಗೌಡ ತಳಕ, ಕಾಂತಪ್ಪಗೌಡ ಬೋಮಶೇಟಹಳ್ಳಿ, ಅನಂತಪ್ಪ ಹುಲಕಲ್, ರಾಮಣ್ಣಗೌಡ ಕಂದಳ್ಳಿ, ಸಂತೋಷ ನಾಟೇಕಾರ, ಲೋಕೇಶ್ ಕನಕ, ಕಾರ್ಯದರ್ಶಿ ಕರಣಪ್ಪ ಯರಗೋಳ ಸೇರಿದಂತೆ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))