ಸಾರಾಂಶ
ಅಧ್ಯಾತ್ಮದ ಗಾಳಿ ಸಿಗಬೇಕಾದರೆ ವಿರಕ್ತಮಠಕ್ಕೆ ಭೇಟಿ ನೀಡಬೇಕು. ಯಾರು ಭಕ್ತಿ, ಭಾವದಿಂದ ಸ್ಮರಿಸುತ್ತಾರೆಯೋ ಅವರ ಮನಸ್ಸಿನಲ್ಲಿ ಮಂತ್ರಾಲಯವಿದೆ.
ಶಿಗ್ಗಾಂವಿ: ಅರಿವಿನ, ಅಧ್ಯಾತ್ಮ, ವಚನಗಳ ಹಂದರದ ಮಂಟಪವೇ ಅನುಭವ ಮಂಟಪ. ವಚನಗಳನ್ನು ತಿಳಿದಾಗ ಜ್ಞಾನ ಹೆಚ್ಚಿಸುವ ಜತೆಗೆ ಬದುಕು ಪಾವನವಾಗುತ್ತದೆ ಎಂದು ವಿರಕ್ತಮಠದ ಬಸವದೇವರು ತಿಳಿಸಿದರು.
ಪಟ್ಟಣದ ವಿರಕ್ತಮಠದಲ್ಲಿ ೩೨ನೇ ಶರಣ ಸಂಸ್ಕೃತಿ ಉತ್ಸವ- ೨೦೨೫ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಮಾತನಾಡಿ, ಮನುಷ್ಯನಿಗೆ ಸಂಸ್ಕಾರ, ಸಂಸ್ಕೃತಿ ನೀಡುವ ಕೇಂದ್ರಗಳೆಂದರೆ ಮಠ ಮಂದಿರಗಳು ಎಂದರು.ಮಹಾಂತೇಶ ಶಾಸ್ತ್ರಿಗಳು ಕಲ್ಲೂರ ಪ್ರವಚನ ನೀಡಿ, ಅಧ್ಯಾತ್ಮದ ಗಾಳಿ ಸಿಗಬೇಕಾದರೆ ವಿರಕ್ತಮಠಕ್ಕೆ ಭೇಟಿ ನೀಡಬೇಕು. ಯಾರು ಭಕ್ತಿ, ಭಾವದಿಂದ ಸ್ಮರಿಸುತ್ತಾರೆಯೋ ಅವರ ಮನಸ್ಸಿನಲ್ಲಿ ಮಂತ್ರಾಲಯವಿದೆ. ಜೀವನ ಬಹಳ ಪವಿತ್ರವಾದದು. ಪಾವಿತ್ರ್ಯತೆ ಇದ್ದರೆ ಹೆಚ್ಚಿನ ಗೌರವ ಸಿಗುತ್ತದೆ ಎಂದರು.ಸಂಗನಬಸವ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಿಡಗುಂದಿ ಕುಮಾರೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಸಂಗೀತ ಸೇವೆಯನ್ನು ಗದಿಗೆಯ್ಯ ಹಿರೇಮಠ ನೀಡಿದರು. ಅವರಿಗೆ ಬಸವರಾಜ ಹೂಗಾರ ತಬಲಾ ಸಾಥ್ ನೀಡಿದರು. ನಾಗರಾಜ ಮಿಶ್ರಿಕೋಟಿ, ಈರಣ್ಣ ಯಲಿಗಾರ, ಸಿ.ವಿ. ಚಿಕ್ಕಮಠ, ಯಲ್ಲಪ್ಪ ಸಾಳುಂಕೆ, ಹೋಟೆಲ್ ಉದ್ಯಮಿ ಉಮೇಶ ಗೌಳಿ, ಕಮಲವ್ವ ಹರಿಗೊಂಡ, ಸೋಮಲಿಂಗಯ್ಯ ಹಿರೇಮಠ, ಪ್ರಸಾದ ಸೇವೆ ದಿ. ಸಂಗಪ್ಪ ಮೊರಬದ ಕುಟುಂಬ ವರ್ಗ, ಚನ್ನಬಸನಗೌಡ ತೋಟದ, ಶಿವನಗೌಡ ತೋಟದ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಇದ್ದರು. ನಟರಾಜ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯರೂಪಕ ನೆರವೇರಿತು. ಪ್ರೊ. ಶರೀಫ ಮಾಕಪ್ಪನವರ ನಿರೂಪಿಸಿದರು. ನರೇಗಲ್ ಕೆರೆ ಏರಿ ರಸ್ತೆ ಸುಧಾರಣೆಗೆ ಶಾಸಕ ಮಾನೆ ಚಾಲನೆಹಾನಗಲ್ಲ: ಸಂಪೂರ್ಣ ಹದಗೆಟ್ಟು ಅಪಾಯ ಆಹ್ವಾನಿಸುತ್ತಿರುವ ತಾಲೂಕಿನ ನರೇಗಲ್ ಕೆರೆ ಏರಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಒಟ್ಟು ₹2 ಕೋಟಿ ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಶಾಸಕ ಮಾನೆ, ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ನರೇಗಲ್ ಕೆರೆ ಸಹ ಒಂದಾಗಿದ್ದು, ಕೆರೆ ಏರಿ ರಸ್ತೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿರುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹಾಗಾಗಿ ಆದ್ಯತೆ ಮೇರೆಗೆ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದರು.ನರೇಗಲ್ ಗ್ರಾಪಂ ಅಧ್ಯಕ್ಷ ಜಾಫರ್‌ಸಾಬ ಮುಲ್ಲಾ, ಮಾಜಿ ಅಧ್ಯಕ್ಷ ಬಾಷಾಸಾಬ ಗೌಂಡಿ, ಸದಸ್ಯ ಹುಸೇನಮಿಯಾ ಸವಣೂರ, ಮುಖಂಡರಾದ ಕಲವೀರಪ್ಪ ಪವಾಡಿ, ಸುಲೇಮಾನಸಾಬ ಮುಲ್ಲಾ, ಮೆಹಬೂಬಅಲಿ ನೆಗಳೂರ, ಚಮನಸಾಬ ಪಠಾಣ, ಫಕ್ಕೀರೇಶ ಮಾವಿನಮರದ, ಗುತ್ತೆಪ್ಪ ಹರಿಜನ, ಸೋಮಲಿಂಗಪ್ಪ ಸುಳ್ಳಳ್ಳಿ, ಶಾಂತಪ್ಪ ಶೀಲವಂತರ, ಈರಣ್ಣ ಬೂದಿಹಾಳ, ರಜಾಕ್ ನರೇಗಲ್ ಸೇರಿದಂತೆ ಗ್ರಾಪಂ ಸದಸ್ಯರು, ಸುತ್ತಲಿನ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ತಾಲೂಕಿನ ಸಮ್ಮಸಗಿ ಕ್ರಾಸ್ ಬಳಿ ಲೋಕೋಪಯೋಗಿ ಇಲಾಖೆಯಿಂದ ಹರಿಹರ- ಸಮ್ಮಸಗಿ ರಸ್ತೆಯಿಂದ ಎಕ್ಕಂಬಿ- ಮೊಣಕಾಲ್ಮುರು ರಸ್ತೆ ವಾಯಾ ನೀರಲಗಿ ರಸ್ತೆಯ ಆಯ್ದ ಭಾಗಗಳಲ್ಲಿ ₹60 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.