ನಿತ್ಯ ಜೀವನದಲ್ಲಿ ಗಣಿತ ಪ್ರಮುಖ: ಎಚ್‌.ಇ.ದಿವಾಕರ

| Published : Sep 15 2024, 01:48 AM IST

ಸಾರಾಂಶ

ನರಸಿಂಹರಾಜಪುರ, ನಮ್ಮ ನಿತ್ಯ ಜೀವನದಲ್ಲಿ ಗಣಿತವೂ ಪ್ರಮುಖವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಇ.ದಿವಾಕರ ಹೇಳಿದರು.ತಾಲೂಕಿನ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೀತೂರು ಗ್ರಾಮ ಪಂಚಾಯಿತಿಯ 8 ಶಾಲೆಗಳ ಮಕ್ಕಳಿಗಾಗಿ ಗಣಿತ ಕಲಿಕಾ ಆಂದೋಲನದಡಿ ನಡೆದ ಗಣಿತ ಸ್ಪರ್ಧೆಯಲ್ಲಿ ಮಾತನಾಡಿ, ಗಣಿತ ಎಂಬುದು ಕೇವಲ ಪಾಠವಲ್ಲ, ಕಲಿಕೆಯಲ್ಲ, ಅದು ಜೀವನದ ಒಂದು ಅಂಗ. ಎಲ್ಲಾ ರೀತಿಯ ವ್ಯವಹಾರ ಮಾಡಲು ಗಣಿತ ಜ್ಞಾನ ಹೊಂದಿರಲೇ ಬೇಕು. ಮಕ್ಕಳು ವಿಜ್ಞಾನ -ಗಣಿತದಲ್ಲಿ ಹೆಚ್ಚಿನ ಆಸಕ್ತಿ ತೋರಿದರೆ ಅವರ ಭವಿಷ್ಯ ಉಜ್ವಲವಾಗಲಿದೆ. ನಿಮ್ಮ ಮುಂದಿನ ಜೀವನದಲ್ಲಿ ಆರ್ಥಿಕ ತಜ್ಞ ಅಬ್ದುಲ್ ಕಲಾಂ ರೀತಿ ಬೆಳವಣಿಗೆ ಹೊಂದಬಹುದು ಎಂದರು.

ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತಾ ಕಲಿಕಾ ಆಂದೋಲನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ನಮ್ಮ ನಿತ್ಯ ಜೀವನದಲ್ಲಿ ಗಣಿತವೂ ಪ್ರಮುಖವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಇ.ದಿವಾಕರ ಹೇಳಿದರು.

ತಾಲೂಕಿನ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೀತೂರು ಗ್ರಾಮ ಪಂಚಾಯಿತಿಯ 8 ಶಾಲೆಗಳ ಮಕ್ಕಳಿಗಾಗಿ ಗಣಿತ ಕಲಿಕಾ ಆಂದೋಲನದಡಿ ನಡೆದ ಗಣಿತ ಸ್ಪರ್ಧೆಯಲ್ಲಿ ಮಾತನಾಡಿ, ಗಣಿತ ಎಂಬುದು ಕೇವಲ ಪಾಠವಲ್ಲ, ಕಲಿಕೆಯಲ್ಲ, ಅದು ಜೀವನದ ಒಂದು ಅಂಗ. ಎಲ್ಲಾ ರೀತಿಯ ವ್ಯವಹಾರ ಮಾಡಲು ಗಣಿತ ಜ್ಞಾನ ಹೊಂದಿರಲೇ ಬೇಕು. ಮಕ್ಕಳು ವಿಜ್ಞಾನ -ಗಣಿತದಲ್ಲಿ ಹೆಚ್ಚಿನ ಆಸಕ್ತಿ ತೋರಿದರೆ ಅವರ ಭವಿಷ್ಯ ಉಜ್ವಲವಾಗಲಿದೆ. ನಿಮ್ಮ ಮುಂದಿನ ಜೀವನದಲ್ಲಿ ಆರ್ಥಿಕ ತಜ್ಞ ಅಬ್ದುಲ್ ಕಲಾಂ ರೀತಿ ಬೆಳವಣಿಗೆ ಹೊಂದಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಶಾಲೆಯಲ್ಲಿ ಗಣಿತ ಸ್ಪರ್ಧೆಯನ್ನು ಇಲಾಖೆಯವರು ನಡೆಸುತ್ತಿರುವುದು ನಿಜಕ್ಕೂ ಉತ್ತಮ. ಇದರಿಂದ ಮಕ್ಕಳಲ್ಲಿನ ಗಣಿತ ಜ್ಞಾನ ವೃದ್ಧಿಯಾಗಲಿದೆ ಎಂದರು.ಸೀತೂರು ಗ್ರಾಪಂ ಅಧ್ಯಕ್ಷೆ ರೇಖಾ ಅಶೋಕ್ ಕಾರ್ಯಕ್ರಮ ಉದ್ಘಾಟಿಸಿದರು. ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಶಾಲೆಗಳ 4 ,5 ಹಾಗೂ 6 ನೇ ತರಗತಿ ಮಕ್ಕಳಿಗೆ ಗಣಿತ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ, ಸದಸ್ಯರಾದ ಉಪೇಂದ್ರರಾವ್, ಸುಜಾತ, ವಿಜಯ, ಸಿದ್ದಪ್ಪಗೌಡ, ಸಿ.ಆರ್.ಪಿ. ಓಂಕಾರಪ್ಪ, ಮುಖ್ಯ ಶಿಕ್ಷಕ ಸುರೇಶ್, ಸಹ ಶಿಕ್ಷಕರಾದ ಬಸಪ್ಪ, ಗವಿರಂಗಪ್ಪ ಮತ್ತು ವಿದ್ಯಾರ್ಥಿಗಳಿದ್ದರು.