ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಪ್ರಗತಿಗೆ ಮಠಗಳ ಕೊಡುಗೆ ಅಪಾರ

| Published : Feb 02 2024, 01:02 AM IST

ಸಾರಾಂಶ

ಸಂಸ್ಥೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಕೊಡುಗೆ ನೀಡಿದ ನಾರಾಯಣಪ್ಪ ಬೊಂದಾಡೆ, ನಾಗಭೂಷಣ ಜನಾದ್ರಿ, ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿರೇಶ ಚೂಡಾಮಣಿ, ರಾಜ್ಯಮಟ್ಟದ ಅಡೆತಡೆ ಕ್ರೀಡಾಕೂಟಕ್ಕೆ ಆಯ್ಕೆಯಾದ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.

ಕನಕಗಿರಿ: ಮಠ-ಮಾನ್ಯಗಳಿಂದಾದ ಶಿಕ್ಷಣ ಕ್ರಾಂತಿಯಿಂದ ಕಲ್ಯಾಣ ಕರ್ನಾಟಕ ಪ್ರಗತಿಯಾಗುತ್ತಿದೆ ಎಂದು ಸಿಂಧನೂರಿನ ಜ್ಞಾನ ಜ್ಯೋತಿ ಪಿಯು ಕಾಲೇಜಿನ ಪ್ರಾಚಾರ್ಯ ವಿಷ್ಣುವರ್ಧನ ರೆಡ್ಡಿ ಹೇಳಿದರು.ಪಟ್ಟಣದ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಬುಧವಾರ ಚನ್ನ ಶ್ರೀರುದ್ರ ಕಾಲೇಜು ಗುರುರುದ್ರಸ್ವಾಮಿ ಪ್ರೌಢಶಾಲೆ ಮತ್ತು ಶಿವಯೋಗಿ ಚನ್ನಮಲ್ಲ ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಬುಧವಾರ ಮಾತನಾಡಿದರು.ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮಾತ್ರವಲ್ಲ, ಅವರ ಕಲಿಕೆ, ಬೌದ್ಧಿಕ ಬೆಳವಣಿಗೆ ಕುರಿತು ತಿಳಿಯಬೇಕೆಂದು ತಿಳಿಸಿದರು.ನಂತರ ಉಪನ್ಯಾಸಕ ಶಿವಾನಂದ ಮೇಟಿ ಮಾತನಾಡಿ, ಉತ್ತಮ ಶಿಕ್ಷಣ ಪಡೆಯುವುದರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂದರು.ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಗುಗ್ಗಳಶೆಟ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಪ್ರಭುಶೆಟ್ಟರ್ ವರದಿ ವಾಚಿಸಿದರು.ಸಂಸ್ಥೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಕೊಡುಗೆ ನೀಡಿದ ನಾರಾಯಣಪ್ಪ ಬೊಂದಾಡೆ, ನಾಗಭೂಷಣ ಜನಾದ್ರಿ, ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿರೇಶ ಚೂಡಾಮಣಿ, ರಾಜ್ಯಮಟ್ಟದ ಅಡೆತಡೆ ಕ್ರೀಡಾಕೂಟಕ್ಕೆ ಆಯ್ಕೆಯಾದ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು.ಕಳೆದ ವರ್ಷ ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಗೆ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಇದಕ್ಕೂ ಮೊದಲು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನವೆದವು. ಪ್ರಾಚಾರ್ಯ ಪ್ರಕಾಶ ಬೇವಿನಾಳ, ಮುಖ್ಯಶಿಕ್ಷಕರಾದ ಶಶಿಕಲಾ, ಮಂಗಳ ಸಜ್ಜನ, ಪ್ರಮುಖರಾದ ರುದ್ರಮುನಿ ಪ್ರಭುಶೆಟ್ಟರ, ಸಂಗಪ್ಪ ತೆಂಗಿನಕಾಯಿ, ಮಹಬಳೇಶ ಸಜ್ಜನ, ಕರಡೆಪ್ಪ ತೆಗ್ಗಿನಮನಿ, ಬಸಲಿಂಗಯ್ಯಸ್ವಾಮಿ ಕಲುಬಾಗಿಲಮಠ, ಬಸವರಾಜ ಹಿರೇಮಠ ಸೇರಿದಂತೆ ಶಿಕ್ಷಕರು ಹಾಗೂ ಉಪನ್ಯಾಸಕರು ಇದ್ದರು.