ಸಾರಾಂಶ
ವಿದ್ಯಾರ್ಥಿಗಳು ತಂದೆ- ತಾಯಿ ಮತ್ತು ಹಿರಿಯರನ್ನು ಗೌರವದಿಂದ ಕಾಣಬೇಕು. ಗುರುಗಳು ತೋರಿದ ದಾರಿಯಲ್ಲಿ ನಡೆಯುವಂತಾದಾಗ ಜೀವನದುದ್ದಕ್ಕೂ ಯಶಸ್ಸು ನಿಮ್ಮದಾಗಲಿದೆ
ಮಾಲೂರು: ವಿದ್ಯಾರ್ಥಿಗಳು ತಂದೆ- ತಾಯಿ ಮತ್ತು ಹಿರಿಯರನ್ನು ಗೌರವದಿಂದ ಕಾಣಬೇಕು. ಗುರುಗಳು ತೋರಿದ ದಾರಿಯಲ್ಲಿ ನಡೆಯುವಂತಾದಾಗ ಜೀವನದುದ್ದಕ್ಕೂ ಯಶಸ್ಸು ನಿಮ್ಮದಾಗಲಿದೆ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿಯ ಮಾಲೂರು ತಾಲೂಕು ಅಧ್ಯಕ್ಷ ಮೂರ್ತಿ ಎನ್.ಸಿ ತಿಳಿಸಿದರು. ಮಾಲೂರು ತಾಲೂಕು ನಂಬಿಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತೃವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಯ ಎಲ್ಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ತಮ್ಮ ತಾಯಂದಿರ ಪಾದ ತೊಳೆದು, ತಾಯಿಯ ಪಾದಗಳಿಗೆ ಅರಿಶಿಣ, ಕುಂಕುಮ ಹಚ್ಚಿ, ದೀಪ ಬೆಳಗಿ ಪಾದ ಪೂಜೆ ನಡೆಸಲಾಯಿತು. ತಾಯಿಯಾದವರಿಗೆ ಮಹತ್ತರ ಜವಾಬ್ದಾರಿಯಿದೆ. ತಾಯಿ- ತಂದೆಗಳ ನಡೆಯೇ ಮಕ್ಕಳ ಬೆಳವಣಿಗೆಯ ಹಾದಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಪೋಷಕರು ಮಾದರಿಯಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ವೆಂಕಟರಮಣಪ್ಪ, ಶಿಕ್ಷಕರಾದ ಕವಿತ, ತಾಲೂಕು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಪುಷ್ಪ ಇದ್ದರು.