ಮಾತೃವಂದನಾ ಯೋಜನೆ: ಯಾದಗಿರಿ ಜಿಲ್ಲೆ ಉತ್ತಮ ಸಾಧನೆ

| Published : Aug 07 2024, 01:12 AM IST

ಸಾರಾಂಶ

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ಗರ್ಭಿಣಿಯರು ಸದ್ಬಳಿಕೆ ಮಾಡಿಕೊಂಡಿದೆ. 2024-25ನೇ ಸಾಲಿನ ಮೊದಲ ಪ್ರಸವ ಗರ್ಭಿಣಿ ನೋಂದಣಿ ಸಾಧನೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನ ಹಾಗೂ 2ನೇ ಬಾಣಂತಿಯ ಹೆಣ್ಣು ಮಗು ಜನಿಸಿದ ಫಲಾನುಭವಿಗಳ ನೋಂದಣಿ ಸಾಧನೆಯಲ್ಲಿ ರಾಜ್ಯಕ್ಕೆ 1ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ಗರ್ಭಿಣಿಯರು ಸದ್ಬಳಿಕೆ ಮಾಡಿಕೊಂಡಿದೆ. 2024-25ನೇ ಸಾಲಿನ ಮೊದಲ ಪ್ರಸವ ಗರ್ಭಿಣಿ ನೋಂದಣಿ ಸಾಧನೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನ ಹಾಗೂ 2ನೇ ಬಾಣಂತಿಯ ಹೆಣ್ಣು ಮಗು ಜನಿಸಿದ ಫಲಾನುಭವಿಗಳ ನೋಂದಣಿ ಸಾಧನೆಯಲ್ಲಿ ರಾಜ್ಯಕ್ಕೆ 1ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಅವರು ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.ಮೊದಲ ಪ್ರಸವ ಗರ್ಭಿಣಿ, ಬಾಣಂತಿ ಫಲಾನುಭವಿಗಳ ನೋಂದಣಿಯಲ್ಲಿ 2241 ಫಲಾನುಭವಿಗಳ ಗುರಿ ಇಟ್ಟುಕೊಂಡಿದ್ದು, ಒಟ್ಟು 2615 ಫಲಾನುಭವಿಗಳ ನೋಂದಣಿಯ ಸಾಧನೆ ಮಾಡಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಎರಡನೇ ಬಾಣಂತಿಯ ಮಗು ಹೆಣ್ಣು ಮಗು ಜನಿಸಿದ ಫಲಾನುಭವಿಗಳ ನೋಂದಣಿ ಗುರಿ 475 ಇಟ್ಟುಕೊಂಡಿದ್ದು, 1287 ಫಲಾನುಭವಿಗಳ ನೋಂದಣಿ ಮಾಡಿ ಸಾಧನೆಯಲ್ಲಿ ರಾಜ್ಯಮಟ್ಟದಲ್ಲಿ 1ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಬಾಲ್ಯ ವಿವಾಹ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಿ. ಬಾಲ್ಯ ವಿವಾಹ ಜರಗುವ ಜಿಲ್ಲೆಯ ಎಲ್ಲಾ ದೇವಸ್ಥಾನ, ಕಲ್ಯಾಣ ಮಂಟಪಗಳಲ್ಲಿ ಆಯೋಜಕರಿಗೆ ಬಾಲ್ಯವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ನಾಮಫಲಕ ಹಾಕುವಂತೆ ಕ್ರಮ ಜರುಗಿಸುವಂತೆ ತಿಳಿಸಿದರು.ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಧೀಶ ಮರಿಯಪ್ಪ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ಜಿಲ್ಲಾ ನಿರೂಪಣಾಧಿಕಾರಿ ಪ್ರೇಮಮೂರ್ತಿ, ಡಿಹೆಚ್‌ಓ ಡಾ. ಮಲ್ಲಿಕಾರ್ಜುನ ಎಸ್‌. ಪಾಟೀಲ್, ಆರ್‌ಸಿಹೆಚ್‌ಓ ಡಾ. ಮಲ್ಲಪ್ಪ, ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಾಂಚಾಳ ಸೇರಿದಂತೆ ಇತರರಿದ್ದರು.