ಸಾರಾಂಶ
ಕನಕಪುರ: ನಗರದ ಪೇಟೆ ಬೀದಿಯಲ್ಲಿರುವ ಪುರಾತನ ಗರಡಿಗಳಲ್ಲಿ ಒಂದಾದ ಚಾವಡಿ ಗರಡಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಸಮಿತಿ ವತಿಯಿಂದ ನೂಲು ಹುಣ್ಣಿಮೆ ಪೂಜೆ (ಮಟ್ಟಿ) ಆಚರಿಸಲಾಯಿತು.
ಕನಕಪುರ: ನಗರದ ಪೇಟೆ ಬೀದಿಯಲ್ಲಿರುವ ಪುರಾತನ ಗರಡಿಗಳಲ್ಲಿ ಒಂದಾದ ಚಾವಡಿ ಗರಡಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಸಮಿತಿ ವತಿಯಿಂದ ನೂಲು ಹುಣ್ಣಿಮೆ ಪೂಜೆ (ಮಟ್ಟಿ) ಆಚರಿಸಲಾಯಿತು.
ಕನಕಪುರದ ಎಲ್ಲಾ ಹಳೆಯ ಹಾಗೂ ಯುವ ಪೈಲ್ವಾನರು ಮತ್ತು ಕುಸ್ತಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಟ್ಟಿ ಮಣ್ಣಿಗೆ ವಂದಿಸಿದರು. ಗರಡಿ ಮನೆಯ ಉಸ್ತಾದ್‌ಗಳಾದ ಚನ್ನಕೃಷ್ಣಪ್ಪ, ರಾಜಣ್ಣ, ಕೃಷ್ಣಪ್ಪ ಹಾಗು ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಗರಡಿ ಮನೆ ಗುರುಗಳಾದ ಕೆ.ಎನ್.ವಿಜಯ್ ಕುಮಾರರಿಗೆ ಚಾವಡಿ ಗರಡಿ ಸಮಿತಿಯವರು ಮೈಸೂರು ಪೇಟ ತೊಡಿಸಿ ಗೌರವ ಸಲ್ಲಿಸಿದರು.ಚಾವಡಿ ಗರಡಿಯ ಹಳೆಯ ಪೈಲ್ವಾನ್ ರಾದ ನಾಗಿಯಣ್ಣ, ಶಿವರಾಜು, ಮುತ್ತುರಾಜು, ಮಂಜಣ್ಣ, ಕುಳ್ಳರಾಜು, ನಾಗರಾಜು, ಶಿವು, ಗೌರಿಶಂಕರ್, ಅನಿಲ್ ಕುಮಾರ್, ಮಣಿಕಂಠ, ರವಿ, ದಿಲೀಪ, ಆಟೋ ನಾಗರಾಜ್ ಸೇರಿದಂತೆ ಹಲವು ಪೈಲ್ವಾನರು ಪೂಜೆಯಲ್ಲಿ ಭಾಗಿಯಾಗಿದ್ದರು.
ಕೆ ಕೆ ಪಿ ಸುದ್ದಿ 02:ಕನಕಪುರದ ಚಾವಡಿ ಗರಡಿ ಮನೆಯಲ್ಲಿ ಪೈಲ್ವಾನ್ ಗಳಿಂದ ಮಟ್ಟಿ ಪೂಜೆ ನೇರವೇರಿಸಲಾಯಿತು.