ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿ ಹಾಸಿಗೆ, ಹೊದಿಕೆ ಅಂಗಡಿ ಭಸ್ಮ

| Published : Mar 31 2024, 02:03 AM IST

ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿ ಹಾಸಿಗೆ, ಹೊದಿಕೆ ಅಂಗಡಿ ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ತಿಪಟೂರು ನಗರದ ಬಸ್‌ನಿಲ್ದಾಣದ ಬಳಿಯ ಕೆರೆ ಏರಿ ರಸ್ತೆಯಲ್ಲಿರುವ ಹಾಸಿಗೆ ಅಂಗಡಿಯಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಾಕಷ್ಟು ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರು. ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ.

ತಿಪಟೂರು: ನಗರದ ಬಸ್‌ನಿಲ್ದಾಣದ ಬಳಿಯ ಕೆರೆ ಏರಿ ರಸ್ತೆಯಲ್ಲಿರುವ ಹಾಸಿಗೆ ಅಂಗಡಿಯಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಾಕಷ್ಟು ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರು. ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ.ಎಂಎಎಸ್ ಬೆಡ್ಡಿಂಗ್ ಅಂಡ್ ಫರ್ನಿಚರ್ ಅಂಗಡಿ ಬೆಂಕಿಗೆ ಆಹುತಿಯಾಗಿದ್ದು, ಹಾಸಿಗೆಗಳು ಸೇರಿದಂತೆ ಫರ್ನೀಚರ್‌ಗಳು ಬೆಂಕಿಗೆ ಭಷ್ಮವಾಗಿವೆ. ಇಂದು ಬೆಳಗ್ಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕದಳ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬೆಂಕಿ ಬಿದ್ದ ಅಂಗಡಿ ಹತ್ತಿರವೇ ಗ್ಯಾಸ್ ಅಂಗಡಿ, ಪೆಟ್ರೋಲ್ ಬಂಕ್ ಇದ್ದು ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ೧ ಟನ್ ಹತ್ತಿ, ೧.೫ ಟನ್ ಫೋಮ್, ೫೦ಕಾಯರ್ ಹಾಸಿಗೆಗಗಳು, ೧೦೦ಪಿಲ್ಲೋ, ೫೦೦ಕುಶನ್ ಪೀಸ್‌ಗಳು ಸೇರಿ ಇತರೆ ವಸ್ತುಗಳು ನಾಶವಾಗಿವೆ. ಸ್ಥಳದಲ್ಲಿದ್ದ ತಾಲೂಕು ಅಗ್ನಿಶಾಮಕದಳದ ಮುಖ್ಯಸ್ಥ ನಟರಾಜು ತಮ್ಮ ನೇತೃತ್ವದಲ್ಲಿ ಬೆಂಕಿ ನಂದಿಸಿದ್ದಾರೆ.