ಸಾರಾಂಶ
ಚಾಮರಾಜನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ್, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ್, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಜಯಂತಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಪುಷ್ಷಾರ್ಚನೆ ಮಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಟಿಪ್ಪು ಸುಲ್ತಾನ್ ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ಅವರು ತನ್ನ ಆಡಳಿತದ ಅವಧಿಯಲ್ಲಿ ಹೊಸ ನಾಣ್ಯ ವ್ಯವಸ್ಥೆ ಮತ್ತು ಹೊಸ ಭೂಕಂದಾಯ ವ್ಯವಸ್ಥೆ ಒಳಗೊಂಡಂತೆ ಆಡಳಿತಾತ್ಮಕ ಆವಿಷ್ಕಾರಗಳನ್ನು ಪರಿಚಯಿಸಿದರು. ಮೈಸೂರು ರೇಷ್ಮೆ ಉದ್ಯಮದ ಬೆಳವಣಿಗೆಗೆ ಒತ್ತು ನೀಡಿದ್ದರು ಎಂದರು.ಟಿಪ್ಪು ಮೈಸೂರು ಸಾಮ್ರಾಜ್ಯದ ಭಾರತೀಯ ಆಡಳಿತಗಾರರಾಗಿದ್ದರು. ದಕ್ಷಿಣ ಭಾರತದಲ್ಲಿ ರಾಕೆಟ್ ಫಿರಂಗಿಗಳ ಪ್ರವರ್ತಕರಾಗಿದ್ದರು. ಕಬ್ಬಿಣದ ಹೊದಿಕೆಯ ಮೈಸೂರಿಯನ್ ರಾಕೆಟ್‌ಗಳನ್ನು ವಿಸ್ತರಿಸಿದರು ಮತ್ತು ಮಿಲಿಟರಿ ಕೈಪಿಡಿ ಫತುಲ್ ಮುಜಾಹಿದಿನ್ ಅನ್ನು ನಿಯೋಜಿಸಿದರು ಎಂದರು.
ಮೌಲಾನ ಅಬ್ದುಲ್ ಕಲಾಂ ಆಜಾದ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಮೊದಲ ಬಾರಿಗೆ ಭಾರತ ಸರ್ಕಾರದ ಶಿಕ್ಷಣ ಮಂತ್ರಿಯಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಚೂಡಾಧ್ಯಕ್ಷ ಮಹಮ್ಮದ್, ಮಾಜಿ ಅಧ್ಯಕ್ಷ ಸೈಯದ್ ರಫೀ, ಅಸ್ಗರ್, ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಅಫ್ಜಲ್ ಷರೀಫ್, ಉಪಾಧ್ಯಕ್ಷ ಇನಾಯತ್ ಪಾಷ, ಪ್ರ.ಕಾರ್ಯದರ್ಶಿ ಆಸೀಫ್ ಉಲ್ಲಾ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರ.ಕಾರ್ಯದರ್ಶಿ ಚಿಕ್ಕಮಹದೇವು, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ, ಎಪಿಎಂಸಿ ಅಧ್ಯಕ್ಷ ಮಹದೇವಸ್ವಾಮಿ, ತಾಪಂ ಮಾಜಿ ಸದಸ್ಯರಾದ ಮಹದೇವಶೆಟ್ಟಿ, ಕುಮಾರ್ ನಾಯಕ್, ಕಚೇರಿ ಕಾರ್ಯದರ್ಶಿ ಎಎಚ್ಎನ್ ಖಾನ್, ಇಮ್ರಾನ್, ಅಬ್ಬಾಸ್, ನಗರಸಭಾ ಮಾಜಿ ಸದಸ್ಯ ಚೆಂಗುಮಣಿ, ಸಿದ್ದಿಕ್ ಉಲ್ಲಾ, ಅಫ್ಸರ್ ಷರೀಫ್, ಶಿವಮೂರ್ತಿ, ಕರಿನಂಜನಪುರ ಸ್ವಾಮಿ, ಸೈಯದ್ ಮುಸಾಯಿಬ್, ಗ್ರಾಪಂ ಅಧ್ಯಕ್ಷ ರೂಪೇಶ್, ಮರಿಯಾಲದಹುಂಡಿ ಕುಮಾರ್ ಹಾಜರಿದ್ದರು.