* 4ಕ್ಕೆ. ಮೌನಾನುಷ್ಠಾನ ಮಂಗಲ, ಪುಣ್ಯಾರಾಧನೆ

| Published : Nov 20 2024, 12:33 AM IST

ಸಾರಾಂಶ

ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮಿ ಬೃಹನ್ಮಠದಲ್ಲಿ ಶ್ರೀಗಳ ಮೌನಾನುಷ್ಠಾನ ಮಂಗಲ ಮತ್ತು ಲಿಂ. ಶ್ರೀ ಪೂಜ್ಯತ್ರಿಯರ ಪುಣ್ಯಾರಾಧನೆ, ಧರ್ಮಸಭೆ ನಡೆಯಲಿದೆ ಎಂದು ಶ್ರೀ ಹಾಲಸ್ವಾಮಿ ಸೇವಾ ಸಮಿತಿ ತಿಳಿಸಿದೆ.

ಕನ್ನಡಪ್ರಭ ವಾರ್ತೆ ನ್ಯಾಮತಿ

ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮಿ ಬೃಹನ್ಮಠದಲ್ಲಿ ಶ್ರೀಗಳ ಮೌನಾನುಷ್ಠಾನ ಮಂಗಲ ಮತ್ತು ಲಿಂ. ಶ್ರೀ ಪೂಜ್ಯತ್ರಿಯರ ಪುಣ್ಯಾರಾಧನೆ, ಧರ್ಮಸಭೆ ನಡೆಯಲಿದೆ ಎಂದು ಶ್ರೀ ಹಾಲಸ್ವಾಮಿ ಸೇವಾ ಸಮಿತಿ ತಿಳಿಸಿದೆ.

ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದಲ್ಲಿ ಶ್ರೀ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗಸ್ವಾಮೀಜಿ ನ.1ರಿಂದ ಮೌನಾನುಷ್ಠಾನ ಕೈಗೊಂಡಿದ್ದು, ನ.22ರ ಸಂಜೆ 4 ಗಂಟೆಗೆ ಮೌನಾನುಷ್ಠಾನ ಮಂಗಲವಾಗಲಿದೆ. ಮಹಾರುದ್ರ ಹೋಮ ಪೂಜಾ ಕೈಂಕರ್ಯಗಳ ಬಳಿಕ ಸಂಜೆ 7 ಗಂಟೆಗೆ ಧರ್ಮಸಭೆ ನಡೆಯಲಿದೆ.

ಸಾಗರ ತಾಲೂಕು ವೀರಾಪುರ ಹಿರೇಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯರು, ಅಜ್ಜಂಪುರ ತಾಲೂಕು ನಂದಿಪುರ ಹಿರೇಮಠ ಶ್ರೀ ನಂದೀಶ್ವರ ಶಿವಾಚಾರ್ಯರು, ಕೊಪ್ಪಳ ತಾಲೂಕು ಅಳವಂಡಿ ಸಂಸ್ಥಾನ ಕಟ್ಟಿಮನಿ ಹಿರೇಮಠ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಬೀದರ್‌ ಜಿಲ್ಲೆ ಬಸವಕಲ್ಯಾಣ ಚೌಕಿಮಠ ಶ್ರೀ ಅಭಿನವ ಚನ್ನಬಸವ ಶ್ರೀಗಳ ಸಾನಿಧ್ಯದಲ್ಲಿ ಸಭೆ ಜರುಗಲಿದೆ.

ಪುಣ್ಯಾರಾಧನೆ:

ನ.23ರಂದು ಪುಣ್ಯಾರಾಧನೆ ಕಾರ್ಯಕ್ರಮ ಹೊನ್ನಾಳಿ ಹಿರೇಕಲ್ಮಠದ ಡಾ.ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗಲಿದೆ. ಪುಣ್ಯಾರಾಧನೆ ಅಂಗವಾಗಿ ಶ್ರೀ ಮಠದ ಲಿಂ.ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ, ಲಿಂ.ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗಸ್ವಾಮಿ ಮತ್ತು ಲಿಂ.ಶ್ರೀ ಸದ್ಗುರು ಶಿವಯೋಗಿ ಸಣ್ಣಹಾಲಸ್ವಾಮಿಗಳ ಕರ್ತೃಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಪೂಜಾಕೈಂಕರ್ಯಗಳು ನಡೆಯಲಿವೆ. ಬೆಳಗ್ಗೆ 8 ಗಂಟೆಗೆ ಸಕಲ ಮಂಗಳ ವಾದ್ಯಗಳೊಂದಿಗೆ ಗ್ರಾಮದ ರಾಜಬೀದಿಯಲ್ಲಿ ಲಿಂ.ಶ್ರೀಗಳ ಭಾವಚಿತ್ರಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಲಾಗುವುದು.

ಧರ್ಮಸಭೆ: ಬೆಳಗ್ಗೆ 11 ಘಂಟೆಗೆ ಹೊನ್ನಾಳಿ ಹಿರೇಕಲ್ಮಠದ ಡಾ.ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಕಡೇನಂದಿಹಳ್ಳಿ ಸುಕ್ಷೇತ್ರ ದುಗ್ಗಿ ಮತ್ತು ತಪೋಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಶ್ರೀ, ನಾಗವಂದ ಧರ್ಮಕ್ಷೇತ್ರ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯ ಶ್ರೀ, ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಸಾನಿಧ್ಯದಲ್ಲಿ ಜರುಗಲಿದೆದೆ. ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದ ಸದ್ಗುರು ಶ್ರೀ ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಸ್ವಾಮಿ ನೇತೃತ್ವದಲ್ಲಿ ಧರ್ಮಸಭೆ ಕಾರ್ಯಕ್ರಮ ನಡೆಯಲಿವೆ.

- - - (ಸಾಂದರ್ಭಿಕ ಚಿತ್ರ)