ಸಾರಾಂಶ
ನೈತಿಕತೆಯ ಅಧಃಪತನ ಕಂಡಾಗ ನವಭಾರತದ ಯುಗಪುರುಷರಂತೆ ಉದಯಿಸಿದ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪ್ರೇರಣೆಯಾಗಿಸಿಕೊಂಡು ಸಮಾಜ ಮತ್ತೆ ಕ್ರಿಯಾಶೀಲತೆಯಡೆಗೆ ಸಾಗಬೇಕಿದೆ ನಿವೃತ್ತ ಉಪನ್ಯಾಸಕ ಎ.ವಾಯ್. ನವಲಗುಂದ ಹೇಳಿದರು.
ಗಜೇಂದ್ರಗಡ: ನೈತಿಕತೆಯ ಅಧಃಪತನ ಕಂಡಾಗ ನವಭಾರತದ ಯುಗಪುರುಷರಂತೆ ಉದಯಿಸಿದ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪ್ರೇರಣೆಯಾಗಿಸಿಕೊಂಡು ಸಮಾಜ ಮತ್ತೆ ಕ್ರಿಯಾಶೀಲತೆಯಡೆಗೆ ಸಾಗಬೇಕಿದೆ ನಿವೃತ್ತ ಉಪನ್ಯಾಸಕ ಎ.ವಾಯ್. ನವಲಗುಂದ ಹೇಳಿದರು.
ತಾಲೂಕಾಡಳಿತ, ಗಜೇಂದ್ರಗಡ ತಾಪಂ, ಪುರಸಭೆ, ನರೇಗಲ್ ಪಟ್ಟಣ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ ರೋಣ, ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸ್ಥಳೀಯ ಕೆಕೆ ವೃತ್ತದಲ್ಲಿ ಸೋಮವಾರ ನಡೆದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ೧೩೪ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ೧೧೮ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜಕ್ಕೆ ಕೊಡುಗೆ ನೀಡಿದ ಗಣ್ಯರನ್ಮು ಸ್ಮರಿಸುವ ಕಾರ್ಯವಾಗಬೇಕಿದೆ. ದೇಶಕ್ಕೆ ಸಂವಿಧಾನ ಹಾಗೂ ನೀತಿ ಸಂಹಿತೆಯನ್ನು ನೀಡಿದ ಅಂಬೇಡ್ಕರ್ ಕೊಡುಗೆ ಅನನ್ಯ. ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಸ್ಮರಣೆ ಜತೆಗೆ ಪ್ರೇರಣೆ ಪಡಯಬೇಕಿದೆ ಎಂದ ಅವರು, ಅಂಬೇಡ್ಕರ್ ಹಾಗೂ ಜಗಜೀವನರಾಮ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಇಂತಹ ಜಯಂತ್ಯುತ್ಸವ ಆಚರಣೆಗಳಿಗೆ ಅರ್ಥ ಬರಲಿದೆ ಎಂದರು. ಮುಖಂಡ ಶರಣಪ್ಪ ಪೂಜಾರ ಮಾತನಾಡಿ, ಯುವ ಸಮೂಹಕ್ಕೆ ಅಮಲಿನ ಅಂಬೇಡ್ಕರವಾಗುವ ಬದಲು ಅರಿವಿನ ಅಂಬೇಡ್ಕರ ಆಗಬೇಕು ಎಂದರು. ನಿವೃತ್ತ ಶಿಕ್ಷಕ ಎಚ್.ಎಸ್. ಜೋಗಣ್ಣವರ, ಉಮೇಶ ರಾಠೋಡ ಮಾತನಾಡಿದರು. ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ಸದಸ್ಯರಾದ ಮುರ್ತುಜಾ ಡಾಲಾಯತ, ವೆಂಕಟೇಶ ಮುದಗಲ್, ರಾಜು ಸಾಂಗ್ಲೀಕರ, ಕನಕಪ್ಪ ಅರಳಿಗಿಡದ ತಾಪಂ ಇಒ ಮಂಜುಳಾ ಹಕಾರಿ, ಬಸವರಾಜ ಬಂಕದ, ಡಿ.ಜಿ. ಕಟ್ಟಿಮನಿ, ರವಿ ಗಡೇದವರ, ಸಿದ್ದಪ್ಪ ಚೋಳಿನ, ಭರತ ಹಾದಿಮನಿ, ಮಂಜು ಬುರಡಿ, ಯಲ್ಲಪ್ಪ ಹರಿಜನ, ರವಿ ಮಾದರ, ಸುರೇಶ ಚಲವಾದಿ, ಅಂದಪ್ಪ ರಾಠೋಡ, ನೀಲಪ್ಪ ಗುಡಿಮನಿ, ಹನಮಂತ ಮೂಲಿಮನಿ, ಮರಿಯಪ್ಪ ದ್ಯಾಮುಣಸಿ, ಪರಶು ಕಡಬಿನ, ಫಕೀರಪ್ಪ ಮಾದರ, ಈಶ್ವರ ದೊಡ್ಡಮನಿ, ಹನಮಂತ ದೊಡ್ಡಮನಿ ಸೇರಿ ಇತರರು ಇದ್ದರು.ಬಿಜೆಪಿ ಕಾರ್ಯಾಲಯ; ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ೧೩೪ನೇ ಜಯಂತ್ಯುತ್ಸವ ನಿಮಿತ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುರಸಭೆ ಮಾಜಿ ಉಪಾಧ್ಯಕ್ಷ ಬುಡ್ಡಪ್ಪ ಮೂಲಿಮನಿ ಪುಷ್ಪಾರ್ಚನೆ ಸಲ್ಲಿಸಿದರು. ಪುರಸಭೆ ವಿಪಕ್ಷ ನಾಯಕ ಮೂಕಪ್ಪ ನಿಡಗುಂದಿ, ಸದಸ್ಯರಾದ ಕನಕಪ್ಪ ಅರಳಿಗಿಡದ, ರೂಪೇಶ ರಾಠೋಡ ಹಾಗೂ ಬಾಳು ಭೋಸಲೆ, ಶಿವಕುಮಾರ ಜಾಧವ ಇದ್ದರು.ದುರ್ಗಾ ವೃತ್ತ; ಪಟ್ಟಣದ ದುರ್ಗಾ ವೃತ್ತದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯಿಂದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಸಮಿತಿ ಅಧ್ಯಕ್ಷ ಬಸವರಾಜ ಬಂಕದ, ಮುಖಂಡರಾದ ಚಂದ್ರು ಚಳಗೇರಿ, ರವಿ ಗಡೇದವರ, ರೂಪೇಶ ರಾಠೋಡ, ಅಶೋಕ ಹೊಸಮನಿ, ಮಹೇಶ ಗಡೇದವರ, ಎಚ್.ಎಸ್. ಜೋಗಣ್ಣವರ, ಶಿವಪ್ಪ ಚಲವಾದಿ, ಮಲ್ಲೇಶಪ್ಪ ಇಟಗಿ, ಶೇಖಪ್ಪ ಸವಣೂರ, ಮಾರುತಿ ಹಾದಿಮನಿ ಸೇರಿ ಅನೇಕ ಮುಖಂಡರು ಇದ್ದರು.