ಶರಣರ ವಚನಗಳು ಸಾರುವ ಸಮಾನತೆ, ಮಾನವೀಯತೆ, ಕಾಯಕ, ದಾಸೋಹ ಹಾಗೂ ಸ್ತ್ರೀ ಸಮಾನತೆಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಮಹಿಳೆಯರ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಇಂತಹ ಸಮ್ಮೇಳನಗಳು ಪ್ರೇರಣೆಯಾಗಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಅಕ್ಕ ಮಹಾದೇವಿ ಪ್ರಧಾನ ವೇದಿಕೆ

ಶರಣರ ವಚನಗಳು ಸಾರುವ ಸಮಾನತೆ, ಮಾನವೀಯತೆ, ಕಾಯಕ, ದಾಸೋಹ ಹಾಗೂ ಸ್ತ್ರೀ ಸಮಾನತೆಯ ಮೌಲ್ಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಮಹಿಳೆಯರ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಇಂತಹ ಸಮ್ಮೇಳನಗಳು ಪ್ರೇರಣೆಯಾಗಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಆಶಯ ವ್ಯಕ್ತಪಡಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಇಂಡಿ ತಾಲೂಕು ಮಹಿಳಾ ಕದಳಿ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಗುರುಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಥಮ ಕದಳಿ ಮಹಿಳಾ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ವಚನ ಸಾಹಿತ್ಯ ಪ್ರತಿಯೊಬ್ಬರ ಜೀವನಕ್ಕೆ ದಾರಿದೀಪ. ಕಾರಣ ಪಾಲಕರು ತಮ್ಮ ಮಕ್ಕಳಿಗೆ ವಚನಗಳ ಬಗ್ಗೆ ತಿಳುವಳಿಕೆ ನೀಡಬೇಕು. ಆ ಮಾರ್ಗದಲ್ಲಿ ಬೆಳೆಸಬೇಕು. ಆಗ ಮಾತ್ರ ಸಮಾಜ ಶ್ರೀಮಂತವಾಗುತ್ತದೆ. ಮಹಿಳೆ ಅಡುಗೆ ಮನೆಯಿಂದ ಸಾಹಿತ್ಯ ಕಲಿಯುತ್ತಾಳೆ, ತಮ್ಮ ಕುಟುಂಬದ ಜೀವನ ನಿರ್ವಹಣೆ ಕರ್ತವ್ಯ ನಿಬಾಯಿಸಿ ಮಹಿಳೆ ಸಾಹಿತ್ಯದಲ್ಲಿ ತೊಡಗಿ ಸಬಲೀಕರಣ ಮಾಡಿ ಮಹಿಳೆ ಅಬಲೆ ಅಲ್ಲ ಸಬಲೆ ಎಂದು ತೋರಿಸುತ್ತಿದ್ದಾಳೆ ಎಂದರು.

ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಆಯೋಜಕರು, ಪದಾಧಿಕಾರಿಗಳು ಹಾಗೂ ಭಾಗವಹಿಸಿದ ಮಹಿಳಾ ಪ್ರತಿನಿಧಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಮಹಿಳೆಗೆ ಘನತೆ, ಗೌರವ, ಪಾವಿತ್ರ್ಯತೆ ಜವಾಬ್ದಾರಿ ಇದೆ. ತಾಯಂದಿರು ತಮ್ಮ ಮಕ್ಕಳ ಧಾರ್ಮಿಕ ಸಾಂಸ್ಕೃತಿಕ ರಾಯಭಾರಿಗಳು. ಅಣ್ಣ ಬಸವಣ್ಣನವರು ಮಹಿಳೆಯರಿಗೆ ಸಮಾನತೆ ಸಾರಿ ಸಂಸ್ಕಾರ ನೀಡಿದಂತೆ ಇಂದು ಮಹಿಳೆಯರು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಸಾಹಿತ್ಯ ಬದುಕಿನ ಭಾಗವಾದರೆ ಬದುಕಿನಲ್ಲಿ ಆಯುಷ್ಯ ಕಾಣುತ್ತೇವೆ ಎಂದರು.

ಸಾಲೋಟಗಿ ಗುರುದೇವಾಶ್ರಮದ ಸಂಗಮೇಶ್ವರ ಶ್ರೀಗಳು ಆಶೀರ್ವಚನ ನೀಡಿ, ಕದಳಿ ಎಂದರೆ ಕೇವಲ ಬಾಳೆಯಲ್ಲ ಅದು ತನು, ಮನ, ಸರ್ವ ವಿಷಯಗಳ ಘೋರ ತಪಸ್ಸು. ಸತ್ಸಂಗ, ಸಮಾನತೆ, ಕಾಯಕ ದಾಸೋಹ ಅದರ ಪ್ರಮುಖ ಅಂಶಗಳು. ಮಹಿಳೆಯರಿದ್ದರೆ ಮನೆ ಸುಂದರವಾಗಿರುತ್ತದೆ. ಅದರಂತೆ ಮಹಿಳೆ ಮಗುವಿನ ಬೆಳವಣೆಗೆಗೆ ಪ್ರಮುಖ ಪಾತ್ರ ವಹಿಸುತ್ತಾಳೆ. ಈ ದಿಸೆಯಲ್ಲಿ ಇಂಡಿಯಲ್ಲಿ ಮಹಿಳೆಯರು ಕದಳಿ ವೇದಿಕೆ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವದು ಶ್ರೇಷ್ಠ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಕಟ ಪೂರ್ವ ಶಸಾಪ ರಾಜ್ಯಾಧ್ಯಕ್ಷ ಅಪ್ಪಾರಾಯ ಅಕ್ಕೋಣಿ, ಕದಳಿ ವೇದಿಕೆಯ ಸಂಚಾಲಕಿ ಸುಶೀಲಾ ಸೋಮಶೇಖರ, ದಾಸೋಹ ಸೇವೆ ನೀಡಿದ ಶಂಕರಗೌಡ ಪಾಟೀಲ, ವಿಜಯಪುರದ ವಿ.ಸಿ.ನಾಗಠಾಣ, ಜಂಬುನಾಥ ಕಲ್ಯಾಣಿ, ಗಂಗಾ ಗಲಗಲಿ, ವೈ.ಜಿ.ಬಿರಾದಾರ, ಭವಾನಿ ಗುಳೇದಗುಡ್ಡ, ರಾಜೇಶ್ವರ ಕ್ಷತ್ರಿ, ಅಂಬಣ್ಣ ಸುಣಗಾರ ಮಾತನಾಡಿದರು.

ವೇದಿಕೆಯ ಮೇಲೆ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಜಯಶ್ರೀ ದಂಡೆ, ಭಾರತಿ ಶಂಕರಗೌಡ ಪಾಟೀಲ, ತಾಲೂಕಾಧ್ಯಕ್ಷ ಬಿ.ಎಸ್.ಪಾಟೀಲ, ಶರಣು ಕುಮಸಗಿ, ದಯಾಸಾಗರ ಪಾಟೀಲ ಮತ್ತಿತರಿದ್ದರು.

ಸಮಾರಂಭದಲ್ಲಿ ಎಸ್.ಐ.ಸುಗುರ, ಎಸ್.ಎಸ್.ಈರನಕೇರಿ, ಪಾರ್ವತಿ ಸೊನ್ನದ, ದಾನಮ್ಮ ಹಿರೇಮಠ, ಸರೋಜಿನಿ ಮಾವಿನಮರ, ಪಾರ್ವತಿ ದಳವಾಯಿ, ರೇಣುಕಾ ಸಂಖ, ಶಶಿಕಲಾ ಬೆಟಗೇರಿ, ಶಾರದಾ ಸುರಪುರ, ಬಿ.ಈ.ಹಿರೇಮಠ, ಶಾಮಲಾ ಬಗಲಿ ಮತ್ತಿತರಿದ್ದರು. ಇದೇ ವೇಳೆ ಕದಳಿ ವೇದಿಕೆಯ ಸಹೋದರಿಯರು ರಚಿಸಿದ ಮಧುರ ಸಂಗಮ ಮತ್ತು ಗಲಗಲಿ ರಚಿಸಿದ ವಚನ ಕುಸುಮ ಗ್ರಂಥಗಳನ್ನು ಶಾಸಕ ಯಶವಂತರಾಯಗೌಡ ಪಾಟೀಲ ಬಿಡುಗಡೆ ಮಾಡಿದರು.

ಪೊಟೊ: ಜಿಲ್ಲಾ ಪ್ರಥಮ ಕದಳಿ ಮಹಿಳಾ ಶರಣ ಸಾಹಿತ್ಯ ಸಮ್ಮೇಳನವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು

ಫೋಟೋ- ಕದಳಿಯ ವೇದಿಕೆಯ ಜಿಲ್ಲಾ ಸಮ್ಮೇಳನದಲ್ಲಿ ಶಾಸಕರು ಗ್ರಂಥ ಬಿಡುಗಡೆ ಮಾಡಿದರು-------

---------

ಬಾಕ್ಸ್‌

ನಾಡಿಗೆ ಶರಣರನ್ನು ನೀಡಿದ್ದು ವಿಜಯಪುರ ಜಿಲ್ಲೆ: ಡಾ.ಜಯಶ್ರೀಇಂಡಿ: ಇಡೀ ಜಗತ್ತಿಗೆ ಸಾಮಾಜಿಕ ಕ್ರಾಂತಿ, ಮಹಿಳೆಯರಿಗೆ ಸಮಾನ ಹಕ್ಕು ದೊರಕಿಸಿದ್ದು ವಿಜಯಪುರದ ಗಟ್ಟಿ ನೆಲ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಜಯಶ್ರೀ ದಂಡೆ ಹೇಳಿದರು.

ನಗರದ ಗುರುಭವನದಲ್ಲಿ ನಡೆದ ಜಿಲ್ಲಾ ಪ್ರಥಮ ಕದಳಿ ಮಹಿಳಾ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿ, ಶರಣ ಸಂಗಮವೇ ವಿಜಯಪುರ ಜಿಲ್ಲೆ. ಈ ಜಿಲ್ಲೆಯಲ್ಲಿ ನೂರಾರು ಜನ ಶರಣ, ಶರಣೆಯರು ಜನಿಸಿ ಪಾವನ ಮಾಡಿದ್ದಾರೆ. ಇಂಡಿಯಿಂದ ಬಸವಣ್ಣನವರ ಪೂಜೆಗೆ ಹೂ ದಂಡಿ ಹೋಗುತ್ತಿತ್ತು. ಇಂಡಿಯ ಶಾಂತಯ್ಯನವರಿಂದ ಭಕ್ತಿಸೇವೆ ನಡೆಯುತ್ತಿತ್ತು. ಮಲ್ಲಿಕಮ್ಮ, ನಿಲಾಂಬಿಕೆಯಂತ ಮಹಾನ್ ಶರಣ, ಶರಣೆಯರು ಈ ಮಣ್ಣಿನವರು.

ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದವರು ಬಸವಣ್ಣನವರು. ದೈವಿ ಸಂಸ್ಕಾರ ನೀಡಿದ್ದು ವಿಜಯಪುರ ಜಿಲ್ಲೆ. ಜಾನಪದ ಸಾಹಿತ್ಯ ನಾಡಿಗೆ ಪರಿಚಯಿಸಿದ್ದು ಇಂಡಿ ತಾಲೂಕಿನ ಹಲಸಂಗಿ ನೆಲ. ಬಸವಣ್ಣನವರನ್ನು ನೀಡಿದ ವಿಜಯಪುರ ಜಿಲ್ಲೆ ಭಾಗ್ಯವಂತ ಭೂಮಿ. ಇಂಡಿಯನ್ನು ಭೂಕೈಲಾಸ ಮಾಡಿದ್ದು ಇಂಡಿಯ ಶಾಂತಯ್ಯ. ಕನ್ನಡ ನಾಡಿಗೆ ಬಸವಣ್ಣನವರು ನೀಡಿದ ಕೊಡುಗೆ ವಚನ ಸಾಹಿತ್ಯ. ಬಸವಣ್ಣನವರ ದಾಸೋಹಕ್ಕೆ ಪ್ರೇರೆಪಿತರಾದವರು ಹಲವು ಜನರು. ಕಲಿಕೆ ಇಲ್ಲದ ದಿನದಲ್ಲಿ ಅನುಭವ ಮಂಟಪದ ಮೂಲಕ ಎಲ್ಲರಿಗೂ ಅವಕಾಶ ನೀಡಿ ಮುಕ್ತವಾಗಿ ವಚನ ರಚನೆಗೆ ಅವಕಾಶ ನೀಡಿದರು. ಇದರಲ್ಲಿ ಮಹಿಳೆಯರಿಗೂ ಹೆಚ್ಚು ಪ್ರಾಶಸ್ತ್ಯ ನೀಡಿದವರು ಬಸವಣ್ಣನವರು ಎಂದು ಹೇಳಿದರು.ಬಿ.ಎನ್.ಪಾಟೀಲ ಮಾತನಾಡಿದರು. ಗಂಗಾ ಗಲಗಲಿ, ಎಸ್.ವಿ.ಹರಳಯ್ಯ,ಎಸ್.ಬಿ.ಸಾಲೋಟಗಿ, ಅಂಬಣ್ಣ ಸುಣಗಾರ, ಬಿ.ಎಸ್.ಪಾಟೀಲ, ಎಸ್.ಐ.ಸುಗೂರು, ಸುರೇಖಾ ಲಬ್ಬಾ, ನಿರ್ಮಲಾ ಹಿರೇಮಠ, ಸುನೀತಾ ಕುಲಕರ್ಣಿ, ಧಾನಮ್ಮ ಹಿರೇಮಠ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತಪ್ಪ ದಶವಂತ, ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪಡೆದ ಖಾಜು ಸಿಂಗೆಗೋಳ, ಆರ್.ವಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಶಶಿಕಲಾ ಬೆಟಗೇರಿ ಸ್ವಾಗತಿಸಿದರು. ಬಿ.ಐ.ಗೊರನಾಳ, ಪೂಜಾ ಕನ್ನೊಳ್ಳಿ ನಿರೂಪಿಸಿದರು. ಮಂಜುಳಾ ದಳವಾಯಿ ವಂದಿಸಿದರು.

------ಬಾಕ್ಸ್‌

ಸಮ್ಮೇಳನದ ಸರ್ವಾಧ್ಯಕ್ಷೆಯ ಭವ್ಯ ಮೆರವಣಿಗೆಕನ್ನಡಪ್ರಭ ವಾರ್ತೆ ಇಂಡಿ: ನಗರದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಥಮ ಕದಳಿ ಮಹಿಳಾ ಶರಣ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ.ಜಯಶ್ರೀ ವೀರಣ್ಣ ದಂಡೆ ಅವರನ್ನು ಸಾರೋಟದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಭಾಜಾ ಭಜಂತ್ರಿ, ಚಿಟ್ಟ ಹಲಗೆ ಮೂಲಕ ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಮಹಾವೀರ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ ರಸ್ತೆಯ ಮೂಲಕ ಗುರುಭವನಕ್ಕೆ ಕರೆತರಲಾಯಿತು.ಮೆರವಣಿಗೆಯಲ್ಲಿ ನಗರದ ವಿವಿಧ ಶಾಲಾ ಮಕ್ಕಳು 12ನೇ ಶತಮಾನದ ವಿವಿಧ ಶರಣ, ಶರಣಿಯರ ವೇಷಗಳನ್ನು ಧರಿಸಿ ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಮಕ್ಕಳು ಕೋಲಾಟ, ನೃತ್ಯ, ಲೇಜಿಮ್ ಮುಂತಾದ ತಮ್ಮ ಕಲಾ ಪ್ರದರ್ಶನ ನೀಡಿದರು.ಮೆರವಣಿಗೆಯಲ್ಲಿ ಕದಳಿ ವೇದಿಕೆ ಅಧ್ಯಕ್ಷೆ ಗಂಗಾ ಗಲಗಲಿ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್.ಕೌಲಗಿ, ಜಿಲ್ಲಾ ಶ.ಸಾ.ಪ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ತಾಲೂಕಾಧ್ಯಕ್ಷ ಬಿ.ಎಸ್.ಪಾಟೀಲ, ಕದಳಿ ವೇದಿಕೆಯ ಸದಸ್ಯರಾದ ಸಂಗೀತಾ ಕರೀಕಟ್ಟಿ, ಜ್ಯೋತಿ ವಂದಾಲ, ದ್ರಾಕ್ಷಾಯಿಣಿ ಮೈದರಗಿ, ಜಗದೇವಿ ಬಿರಾದಾರ, ಛಾಯಾ ಪಾಟೀಲ, ವಿಜಯಲಕ್ಷ್ಮೀ ಮಾರದುಟ್ಟ, ಸುಜಾತಾ ಕುಲಕರ್ಣಿ, ಸುನೀತಾ ಕುಲಕರ್ಣಿ, ಆರ್.ಬಿ.ಹೂಗಾರ, ಮಾಯಾ ಸಾತಿಹಾಳ, ವಿದ್ಯಾ ಪಾಟೀಲ, ಎಸ್.ಟಿ.ಸಂಗಾ, ಶಾಂತಾ ನಾಯಕ, ಭೌರಮ್ಮ ಸುಣಗಾರ, ಶಿಲ್ಪಾ ಮೇತ್ರಿ, ಕೆ.ಎಚ್.ಮನಗೂಳಿ ಮುಂತಾದವರು ಭಾಗವಹಿಸಿದ್ದರು.