ಸಹಕಾರಿ ಸಂಘಗಳು ರೈತರು ಹಾಗೂ ಸಣ್ಣ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಆರ್ಥಿಕ ಸಂಕಷ್ಟದಲ್ಲಿರುವವರನ್ನು ಸ್ವಾವಲಂಬಿ ಜೀವನದತ್ತ ಕೊಂಡೊಯ್ಯುವ ಜವಾಬ್ದಾರಿ ಸಹಕಾರಿ ಸಂಸ್ಥೆಗಳ ಮೇಲಿದೆ ಎಂದು ಕಮತಗಿ-ಕೊಟೇಕಲ್ಲ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸಹಕಾರಿ ಸಂಘಗಳು ರೈತರು ಹಾಗೂ ಸಣ್ಣ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಆರ್ಥಿಕ ಸಂಕಷ್ಟದಲ್ಲಿರುವವರನ್ನು ಸ್ವಾವಲಂಬಿ ಜೀವನದತ್ತ ಕೊಂಡೊಯ್ಯುವ ಜವಾಬ್ದಾರಿ ಸಹಕಾರಿ ಸಂಸ್ಥೆಗಳ ಮೇಲಿದೆ ಎಂದು ಕಮತಗಿ-ಕೊಟೇಕಲ್ಲ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಮಹಾಸ್ವಾಮಿಗಳು ನುಡಿದರು.ಹುನಗುಂದ ತಾಲೂಕಿನ ಕಮತಗಿಯ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ತಾಳಿಕೋಟೆಯ ನೂತನ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಹಕಾರಿ ಕ್ಷೇತ್ರವು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಶಕ್ತಿ ತುಂಬುವ ಪ್ರಮುಖ ವ್ಯವಸ್ಥೆ. ವಿಶೇಷವಾಗಿ ರೈತರು, ಸಣ್ಣ ವ್ಯಾಪಾರಿಗಳು ಹಾಗೂ ದುರ್ಬಲ ಆರ್ಥಿಕ ವರ್ಗದ ಜನರಿಗೆ ಅಗತ್ಯ ಸಂದರ್ಭದಲ್ಲಿ ಆರ್ಥಿಕ ನೆರವು ದೊರೆತರೆ ಅವರು ತಮ್ಮ ಉದ್ಯೋಗ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ತಾಳಿಕೋಟೆಯ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ಆಶೀರ್ವಚನ ನೀಡಿದರು. ಕಮತಗಿ ಶಾಖೆಯ ಮುಖ್ಯ ಅಧ್ಯಕ್ಷ ಬಸವರಾಜ ನರಗುಂದ ಅಧ್ಯಕ್ಷತೆ ವಹಿಸಿದ್ದರು. ಶಾಖಾ ಅಧ್ಯಕ್ಷ ಸಂಗನಗೌಡ ಗುಡಗುಂಟಿ ಪ್ರಾಸ್ತಾವಿಕ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ), ಮಾಜಿ ಶಾಸಕ ಎ.ಎಸ್.ಪಾಟೀಲ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಸಜ್ಜನ, ಕಾಶಿನಾಥ ಹಿರೇಮಠ, ಕಾಶಿನಾಥ ಮುರಾಳ, ಮುದ್ದೇಬಿಹಾಳ ಕೆಯುಸಿ ಬ್ಯಾಂಕ್ ನಿರ್ದೇಶಕ ಗುರಲಿಂಗಪ್ಪಗೌಡ ಪಾಟೀಲ, ರಾಜೇಂದ್ರ ಬಿಜಾಪೂರ, ಸಿದ್ದಣ್ಣ ಶರಣರ, ಶಂಕರಯ್ಯ ಹಿರೇಮಠ, ಅರವಿಂದ ಸಜ್ಜನ, ಶಾಖೆ ಉಪಾಧ್ಯಕ್ಷ ಈರಪ್ಪ ಕಲಬುರ್ಗಿ, ಸದಸ್ಯರಾದ ಚನ್ನಬಸ್ಸು ದೇಸಾಯಿ, ಜಿ.ಎಸ್.ಜಮ್ಮಲದಿನ್ನಿ, ಪರಪ್ಪ ಸಜ್ಜನ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪ್ರಕಾಶ ಸಜ್ಜನ, ಸಂಗಪ್ಪ ಬಬಲೇಶ್ವರ, ಶಂಕರಯ್ಯ ಹಿರೇಮಠ, ಪ್ರಭುಗೌಡ ಪಾಟೀಲ, ಅಂಬಾಜಿ ಘೋರ್ಪಡೆ, ಶಿವಾನಂದಗೌಡ ಪಾಟೀಲ, ಶಿವಮ್ಮ ಬಿರಾದಾರ, ಅನೀತಾ ಪಾಟೀಲ, ರಾಜಣ್ಣ ಸೊಂಡೂರ, ಪ್ರಲ್ಹಾದ ಹಜೇರಿ, ಆಡಳಿತ ಮಂಡಳಿ ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.