ಸಾರಾಂಶ
ಹೇಮರಡ್ಡಿ ಮಲ್ಲಮ್ಮನವರು 14ನೇ ಶತಮಾನದಲ್ಲಿ ಮಹಿಳಾ ಸಂತರಾಗಿದ್ದರು. ಅವರು ಒಬ್ಬ ಶ್ರೇಷ್ಠ ಮಹಿಳೆಯಾಗಿ ಕುಟುಂಬ ನಿರ್ವಹಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
ಮುಂಡರಗಿ:ಹೇಮರಡ್ಡಿ ಮಲ್ಲಮ್ಮನವರು 14ನೇ ಶತಮಾನದಲ್ಲಿ ಮಹಿಳಾ ಸಂತರಾಗಿದ್ದರು. ಅವರು ಒಬ್ಬ ಶ್ರೇಷ್ಠ ಮಹಿಳೆಯಾಗಿ ಕುಟುಂಬ ನಿರ್ವಹಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
ಅವರು ಶನಿವಾರ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಜರುಗಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ಡಾ.ಬಿ.ಎಸ್. ಮೇಟಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಸೇರಿದಂತೆ ಎಲ್ಲ ಶಿವಶರಣ-ಶಿವಶರಣೆಯರ ತತ್ವಾದರ್ಶಗಳು ಒಂದೇ ಆಗಿದ್ದು, ಎಲ್ಲರೂ ಎಲ್ಲ ಶರಣ, ಶರಣೆಯರನ್ನು ಗೌರವಿಸಬೇಕು ಎಂದರು.
ವೀರಣ್ಣ ಮೇಟಿ, ಮಂಜುನಾಥ ಮುಧೋಳ ಸೇರಿದಂತೆ ಅನೇಕರು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್.ಆರ್. ಬಸಾಪೂರ, ವಿಶ್ವನಾಥಗೌಡ ಪಾಟೀಲ, ಬಸವರಾಜ ನವಲಗುಂದ, ವಿ.ಎಸ್. ಯರಾಸಿ, ಮೂಗನೂರ, ನಾಗರಾಜ ಹಳ್ಳಿಕೇರಿ, ಪಿಎಸ್ಐ ವಿ.ಜೆ. ಪವಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.