ಸಾರ್ಥಕ ಜೀವನ ನಡೆಸುವ ಸಂಕಲ್ಪ ಎಲ್ಲರದಾಗಲಿ: ಸಿದ್ದಲಿಂಗಣ್ಣ ಕಮಡೊಳ್ಳಿ

| Published : Aug 16 2025, 12:00 AM IST

ಸಾರಾಂಶ

ದುರ್ಬಲರಿಗೆ ಸಹಾಯಹಸ್ತ ಚಾಚುವ, ಶಿಕ್ಷಣಕ್ಕೆ ಆದ್ಯತೆ ನೀಡುವ, ಕೃಷಿಕ ಸಮಾವನ್ನು ಬೆಂಬಲಿಸುವ, ಬಡವರ ಹಿತಕ್ಕೆ ನಿಲ್ಲುವ ಸ್ವಚ್ಛ ಮನಸ್ಸು ನಮ್ಮದಾಗಬೇಕು.

ಹಾನಗಲ್ಲ: ಸನಾತನ ಧರ್ಮ ಸಮನ್ವಯದ ನಮ್ಮ ದೇಶದಲ್ಲಿ, ಸಂಸ್ಕಾರಗಳೊಂದಿಗೆ ದೇಶಭಕ್ತಿಯನ್ನೊಳಗೊಂಡು ಸಾರ್ಥಕ ಜೀವನ ನಡೆಸುವ ಸಂಕಲ್ಪ ನಮ್ಮದಾಗಬೇಕಾಗಿದ್ದು, ಇದಕ್ಕಾಗಿ ದೇಶಭಕ್ತರೆಲ್ಲ ಒಟ್ಟಾಗಿ ಶ್ರಮಿಸುವ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಮತಿ ರುದ್ರಮ್ಮ ಕೋಂ. ಗುರುಪಾದಪ್ಪ ಕಮಡೊಳ್ಳಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ತಿಳಿಸಿದರು.ಶುಕ್ರವಾರ ಶ್ರಾವಣ ಮಾಸ ಹಾಗೂ ತಮ್ಮ ಜನ್ಮದಿನದ ಸಂದರ್ಭದಲ್ಲಿ ಸಿದ್ದಲಿಂಗಣ್ಣ ಕಮಡೊಳ್ಳಿ ಅಭಿಮಾನಿಗಳ ಬಳಗ ಹಾಗೂ ಶ್ರೀಮತಿ ರುದ್ರಮ್ಮ ಕೋಂ. ಗುರುಪಾದಪ್ಪ ಕಮಡೊಳ್ಳಿ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ, ಧರ್ಮಾ ನದಿಯ ಕಂಚಿನೆಗಳೂರು ಜಲಾಶಯ, ಬೆಳಗಾಲಪೇಟೆಯ ದೊಡ್ಡಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.

ಸನಾತನ ಧರ್ಮದಲ್ಲಿ ಸಾತ್ವಿಕ ಬದುಕು, ಸಹಬಾಳ್ವೆಯ ಪರಿಪೂರ್ಣ ಸಂದೇಶಗಳಿವೆ. ಅವುಗಳ ಆಚರಣೆಯ ಮೂಲಕ ಉತ್ತಮ ಸಮಾಜ ನಿರ್ಮಾಣದ ಶುದ್ಧ ಶಕ್ತಿ ಇದೆ. ಇದರೊಂದಿಗೆ ದುರ್ಬಲರಿಗೆ ಸಹಾಯಹಸ್ತ ಚಾಚುವ, ಶಿಕ್ಷಣಕ್ಕೆ ಆದ್ಯತೆ ನೀಡುವ, ಕೃಷಿಕ ಸಮಾವನ್ನು ಬೆಂಬಲಿಸುವ, ಬಡವರ ಹಿತಕ್ಕೆ ನಿಲ್ಲುವ ಸ್ವಚ್ಛ ಮನಸ್ಸು ನಮ್ಮದಾಗಬೇಕು. ಇದೇ ನಿಜವಾದ ಧರ್ಮ. ಈಗ ಭಾರತ ಇಡೀ ಜಗತ್ತಿನ ಗಮನ ಸೆಳೆಯುತ್ತಿದ್ದು, ಅದರಲ್ಲಿ ನಮ್ಮ ಪ್ರಾಮಾಣಿಕ ಪಾಲು ಇರಬೇಕು. ದೇಶದ ಹಿತಕ್ಕಾಗಿ ದೇಶಾಭಿಮಾನದೊಂದಿಗೆ ನಾವು ಕಂಕಣಬದ್ಧರಾಗಬೇಕು. ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಂಕಲ್ಪ ನನ್ನದಾಗಿದೆ ಎಂದರು.ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಕರಬಸಪ್ಪ ಶಿವೂರ ಮಾತನಾಡಿ, ಶ್ರೀಮತಿ ರುದ್ರಮ್ಮ ಕೋಂ. ಗುರುಪಾದಪ್ಪ ಕಮಡೊಳ್ಳಿ ಪ್ರತಿಷ್ಠಾನದ ಮೂಲಕ ಧರ್ಮ ಸಂಸ್ಕೃತಿಯ ಸಂರಕ್ಷಣೆ ಹಾಗೂ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಸೇವಾ ಸಂಕಲ್ಪವನ್ನು ಸಾಕಾರ ಮಾಡುತ್ತಿರುವುದು ಅಭಿನಂದನೀಯ. ಬಡವರ ಸಂಕಷ್ಟಕ್ಕೆ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿರುವ ಈ ಟ್ರಸ್ಟ್ ಭವಿಷ್ಯದಲ್ಲಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಕಂಕಣಬದ್ಧವಾಗಿದೆ ಎಂದರು.ಪರಶುರಾಮ ಬಾರ್ಕಿ, ಸಿದ್ದಲಿಂಗಪ್ಪ ತುಪ್ಪದ, ವಿಶ್ವನಾಥ ಭಿಕ್ಷಾವರ್ತಿಮಠ, ಮಹೇಶ ಹಿರೇಮಠ, ಗುರುಸಿದ್ದಣ್ಣ ಹಿರೇಮಠ, ಶಾಂತವೀರ ನೆಲೋಗಲ್ಲ, ಜಯಲಿಂಗಪ್ಪ ಹಳಕೊಪ್ಪ, ಮೌನೇಶ ಮೆಳ್ಳಾಗಟ್ಟಿ, ಪಂಚಪ್ಪ ಮೆಣಸಿನಕಾಯಿ, ರಾಮು ಯಳ್ಳೂರ, ಪ್ರವೀಣ ಬ್ಯಾಲಾಳ, ಬಸವರಾಜ ಹಾದಿಮನಿ, ಪರಸಪ್ಪ ಮೌವೂರ, ಅಮಿತ ನೆಲೋಗಲ್ಲ, ಕೆ.ಬಿ. ಪಾಟೀಲ, ಯಲ್ಲಪ್ಪ ನಾಗಪ್ಪನವರ, ನಾಗಪ್ಪ ಶಿವಣ್ಣನವರ, ಪಂಚನಗೌಡ ದಂಡಿನ, ಮಹೇಶ ಬ್ಯಾಲಾಳ, ಶಂಭಣ್ಣ ಮೌಲಿ ಮೊದಲಾದವರು ಈ ಸಂದರ್ಭದಲ್ಲಿದ್ದರು.