ಮಾಜಿ ಸಿಎಂ ಎಚ್‌ಡಿಕೆ ಶೀಘ್ರವೇ ಗುಣಮುಖರಾಗಿ ಜನಸೇವೆಗೆ ಹಿಂದಿರುಗಲಿ

| Published : Mar 23 2024, 01:00 AM IST

ಮಾಜಿ ಸಿಎಂ ಎಚ್‌ಡಿಕೆ ಶೀಘ್ರವೇ ಗುಣಮುಖರಾಗಿ ಜನಸೇವೆಗೆ ಹಿಂದಿರುಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್‌ಡಿಕೆ ಕೇವಲ ಜೆಡಿಎಸ್ ಪಕ್ಷದ ಆಸ್ತಿಯಲ್ಲ, ರಾಜ್ಯದ ಸಮಸ್ತ ಜನರ ಆಸ್ತಿ. ರೈತ ಸಮುದಾಯದ ಬಗ್ಗೆ ಸದಾ ಚಿಂತಿಸುವ ಎಚ್‌ಡಿಕೆ ರಾಜ್ಯದ ರೈತರ ನಾಯಕ. ಎಲ್ಲರ ಪ್ರತಿರೋಧದ ನಡುವೆಯೂ ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಎಚ್‌ಡಿಕೆ. ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳಬೇಕು. ರಾಜ್ಯದ ಜನ ಕುಮಾರಣ್ಣನ ಸೇವೆಯನ್ನು ಬಯಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬೇಗ ಗುಣಮುಖರಾಗಿ ಮತ್ತೆ ಜನ ಸೇವೆಗೆ ಹಿಂತಿರುಗಲಿ ಎಂದು ಪ್ರಾರ್ಥಿಸಿ ತಾಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಮತ್ತು ಶಾಸಕ ಎಚ್.ಟಿ.ಮಂಜು ಸಹೋದರ ಎಚ್.ಟಿ.ಲೋಕೆಶ್ ನೇತೃತ್ವದಲ್ಲಿ ದೇಗುಲಕ್ಕೆ ಆಗಮಿಸಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯರ್ತರು ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಗ್ಯ ಮತ್ತು ದೀರ್ಘಾಯಸ್ಸು ಕೋರಿ ವಿಶೇಷ ಅಭಿಷೇಕ ನಡೆಸಿದರು.

ಈ ವೇಳೆ ಎ.ಎನ್. ಜಾನಕೀರಾಂ ಮಾತನಾಡಿ, ಎಚ್‌ಡಿಕೆ ಕೇವಲ ಜೆಡಿಎಸ್ ಪಕ್ಷದ ಆಸ್ತಿಯಲ್ಲ. ರಾಜ್ಯದ ಸಮಸ್ತ ಜನರ ಆಸ್ತಿ. ರೈತ ಸಮುದಾಯದ ಬಗ್ಗೆ ಸದಾ ಚಿಂತಿಸುವ ಎಚ್‌ಡಿಕೆ ರಾಜ್ಯದ ರೈತರ ನಾಯಕ. ಎಲ್ಲರ ಪ್ರತಿರೋಧದ ನಡುವೆಯೂ ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಎಚ್‌ಡಿಕೆ. ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳಬೇಕು. ರಾಜ್ಯದ ಜನ ಕುಮಾರಣ್ಣನ ಸೇವೆಯನ್ನು ಬಯಸುತ್ತಿದ್ದಾರೆ ಎಂದರು.

ಶಾಸಕರ ಸಹೋದರ ಎಚ್.ಟಿ.ಲೋಕೇಶ್ ಮಾತನಾಡಿ, ಶಾಸಕರಾದ ಎಚ್.ಟಿ.ಮಂಜು ಅವರು ಕುಮಾರಣ್ಣ ಅವರ ಆರೋಗ್ಯ ವಿಚಾರಿಸಲು ಚೆನ್ನೈ ನಗರಕ್ಕೆ ಹೋಗಿದ್ದಾರೆ. ಇಲ್ಲಿನ ಎಲ್ಲಾ ಕಾರ್ಯಕರ್ತರು ಕುಮಾರಣ್ಣ ಅವರ ಆರೋಗ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇವೆ ಎಂದರು.

ಕೆ.ಆರ್ ಪೇಟೆಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿರುವ ಕುಮಾರಣ್ಣ ಅವರಿಗೆ ಆರೋಗ್ಯ ಮತ್ತು ಆಯಸ್ಸು ನೀಡುವಂತೆ ನಾವೆಲ್ಲರೂ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ, ಟಿಎಪಿಸಿಎಂಎಸ್ ನಿರ್ದೇಶಕರಾದ ಟಿ.ಬಲದೇವ್, ಬೊಮ್ಮೇನಹಳ್ಳಿ ಮಂಜುನಾತ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಬೂಕನಕೆರೆ ಹುಲ್ಲೇಗೌಡ, ಪುರಸಭೆ ಮಾಜಿ ಸದಸ್ಯ ಹೊಸಹೊಳಲು ರಾಜು, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್, ತಾಲೂಕು ವೀರಶೈವ ಮಹಾ ಸಭಾ ಘಟಕದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯ, ಮುಖಂಡರಾದ ಮಾಕವಳ್ಳಿ ವಸಂತ ಕುಮಾರ್, ಸಂತೇಬಾಚಹಳ್ಳಿ ರವಿ ಕುಮಾರ್, ಹೆಗ್ಗಡಹಳ್ಳಿ ಅಲೋಕ್, ಸೊಳ್ಳೇಪುರ ಬಾಲಕೃಷ್ಣ, ಜೆಡಿಎಸ್ ಯುವ ಘಟಕದ ಸಚಿನ್ ಕೃಷ್ಣ, ಪಟ್ಟಣದ ನಾಗರೀಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬೊಪ್ಪನಹಳ್ಳಿ ಬಸವೇಗೌಡ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.