ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸಾಗಲಿ: ಎಚ್. ಕೆ.ಎಸ್ ಸ್ವಾಮಿ

| Published : Aug 18 2024, 01:56 AM IST

ಸಾರಾಂಶ

ಗಾಂಧಿಜಿಯವರ ಕಂಡ ಕನಸು ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಜನರಲ್ಲಿ ಯಾವಾಗ ಮೂಡುತ್ತದೋ ಆಗ ಭಾರತ ಮತ್ತೊಂದು ಅಭಿವೃದ್ಧಿಯ ಮೈಲಿಗಲ್ಲು ಇಡಲು ಸಾಧ್ಯ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ಎಚ್. ಕೆ.ಎಸ್ ಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಗಾಂಧಿಜಿಯವರ ಕಂಡ ಕನಸು ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಜನರಲ್ಲಿ ಯಾವಾಗ ಮೂಡುತ್ತದೋ ಆಗ ಭಾರತ ಮತ್ತೊಂದು ಅಭಿವೃದ್ಧಿಯ ಮೈಲಿಗಲ್ಲು ಇಡಲು ಸಾಧ್ಯ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ಎಚ್. ಕೆ.ಎಸ್ ಸ್ವಾಮಿ ತಿಳಿಸಿದರು.ಸಿರಿಗೆರೆ ಸಮೀಪದ ವಡ್ಡರ ಸಿದ್ದವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪರಿಸರ ಹಾಗೂ ಗಾಂಧಿ ತತ್ವ ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವತಂತ್ರ ಪೂರ್ವದಲ್ಲಿ ಗಾಂಧೀಜಿಯವರು ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರು. ಗಾಂಧೀಜಿಯವರು ಸ್ವಾತಂತ್ರದ ಜತೆ ಜತೆಗೆ ದೇಶದ ಸ್ವಚ್ಛತೆಗೆ ಕರೆ ಕೊಟ್ಟಿದ್ದರು. ಶಾಂತಿಯುತವಾಗಿ ದೇಶದ ಸಂರಕ್ಷಣೆ ಮಾರ್ಗವನ್ನು ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅದೇ ರೀತಿ ಪರಿಸರದ ಮೇಲೆ ಸಾಕಷ್ಟು ಅಪಾರವಾದ ಪ್ರೀತಿಯನ್ನು ಹೊಂದಿದ್ದ ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳನ್ನ ನಾವೆಲ್ಲರೂ ಅನುಸರಿಸಲೇಬೇಕಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ರದ್ದು ಮಾಡಿದ್ದರು ಸಹ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಎಗ್ಗಿಲದೇ ನಡೆಯುತ್ತಿದೆ. ಸರ್ಕಾರಗಳು ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿವೆ. ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದಾಗಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿದೆ ಎಂದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಬರೀ ಓದುವುದರ ಕಡೆಗೆ ಗಮನ ಹರಿಸುವುದರ ಜತೆಗೆ ಪರಿಸರ ಸಂರಕ್ಷಣೆ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕಾಗಿದೆ. ಮಾನವನ ಜನ್ಮಕ್ಕೆ ಪರಿಸರ ತುಂಬಾ ಅವಶ್ಯಕವಾಗಿ ಬೇಕಾಗಿದೆ ಪರಿಸರ ಸಮೃದ್ಧಿಯಾಗಿದ್ದರೆ ದೇಶವು ಸುಭದ್ರವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಆಲಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಲ್ ಬಸವರಾಜ್ ಮಾತನಾಡಿ ಮನೆಗಳಲ್ಲಿ ದೇವರ ಮನೆ ಇಲ್ಲದಿದ್ದರೂ ಪರವಾಗಿಲ್ಲ ಮನೆಗೆ ಒಂದು ಶೌಚಾಲಯ ಇರಲೇಬೇಕು ಎಂದು ತಿಳಿಸಿದರು.

ವಡ್ಡರ ಸಿದ್ದವನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ. ತಿಮ್ಮಯ್ಯ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮನೆಗೊಂದು ಮರ ಊರಿಗೊಂದು ವನ ಎನ್ನುವ ಗಾದೆ ಮಾತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ದೊಡ್ಡರಸಿದ್ದವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಗೀತಾ, ಓಬಣ್ಣ, ತಿಮ್ಮರೆಡ್ಡಿ, ಸಭಾತ್ ನಜಿನಿ, ವಸಂತ್ ಕುಮಾರಿ, ಕಾಡಪ್ಪ ಸ್ವಾಮಿ, ಸುಮಾ, ಮಡಿಲು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಆನಂದಪ್ಪ, ಸದಸ್ಯರುಗಳಾದ ದರ್ಶನ್, ಪ್ರವೀಣ್, ಅಭಿಷೇಕ್, ತಿಪ್ಪೇಸ್ವಾಮಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.