ಸಾರಾಂಶ
ಅಹಿಂಸೆ ತತ್ವ ಆಧಾರದ ಮೇಲೆ ಬ್ರೀಟಿಷರ್ ವಿರುದ್ಧ ಹೋರಾಟ ಮಾಡಿ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರು ಹಿಂಸೆಯಿಂದಲೇ ಸಾವನ್ನಪ್ಪಬೇಕಾಯಿತು. ಇದು ವಿಪರ್ಯಾಸವಲ್ಲವೇ ಎಂದು ಅರಸಿಕೇರಿ ಕೋಡಿಮಠ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಬಿ.ಡಿ.ಕುಮಾರ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಅಹಿಂಸೆ ತತ್ವ ಆಧಾರದ ಮೇಲೆ ಬ್ರೀಟಿಷರ್ ವಿರುದ್ಧ ಹೋರಾಟ ಮಾಡಿ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರು ಹಿಂಸೆಯಿಂದಲೇ ಸಾವನ್ನಪ್ಪಬೇಕಾಯಿತು. ಇದು ವಿಪರ್ಯಾಸವಲ್ಲವೇ ಎಂದು ಅರಸಿಕೇರಿ ಕೋಡಿಮಠ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಬಿ.ಡಿ.ಕುಮಾರ ಹೇಳಿದರು.ಸ್ಥಳೀಯ ಕಸಾಪ ಭವನದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ದಿ.ಸೀತಾಬಾಯಿ ಬಸಪ್ಪ ತಿಮಸಾನಿ ದಂಪತಿ ಸ್ಮರಣಾರ್ಥ 22ನೇ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಆದರ್ಶಗಳು, ತತ್ವಗಳು, ಮೌಲ್ಯಗಳು, ವಿಚಾರ ಧಾರೆಗಳು ಇಂದಿನ ಯುವ ಜನಾಂಗಕ್ಕೆ ತಲುಪಿಸುವುದು ಅತೀ ಅವಶ್ಯಕವಾಗಿದೆ ಎಂದರು.ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ, ಕಸಾಪ ಅಧ್ಯಕ್ಷ ಆನಂದ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕಾಪೂರದ ಮಂಜುಳಾ ಸಂಬಾಳದ ಹಾಗೂ ಸಂಗಡಿಗರು ಗಾಂಧಿ ಭಜನ ನಡೆಸಿಕೊಟ್ಟರು. ಚಂದ್ರಶೇಖರ ದೇಸಾಯಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ವೆಂಕಟೇಶ ಗುಡೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿಗಳಾದ ದಯಾನಂದ ಎಸ್.ಪಾಟೀಲ ದಂಪತಿ ಸೇರಿದಂತೆ ಕಾನಿಪ, ಕಸಾಪ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಕನ್ನಡಪರ ಸಂಘಟನೆಯ ಸದಸ್ಯರು, ಹಿರಿಯ-ಕಿರಿಯ ನಾಗರಿಕರು ಉಪಸ್ಥಿತರಿದ್ದರು.