ಸಾರಾಂಶ
May Ganesha Mahotsav be good for everyone: Sharaniah Swami
ಕನ್ನಡಪ್ರಭ ವಾರ್ತೆ ಶಹಾಪುರ
ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವ ಸಾರುವ ಗಣೇಶ ಮಹೋತ್ಸವ ಸರ್ವರಿಗೂ ಒಳ್ಳೆಯದನ್ನು ಮಾಡಲಿ ಎಂದು ಶಿವಾ ದೇವಾಲಯದ ಶರಣಯ್ಯಸ್ವಾಮಿ ಹೇಳಿದರು. ಭೀಮರಾಯನಗುಡಿಯ ಶಿವ ದೇವಾಲಯದಲ್ಲಿ ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.ದೇಶದ ಸಂಸ್ಕೃತಿಯಲ್ಲಿ ಗಣೇಶನ ಆಚರಣೆಯು ವೈವಿಧ್ಯತೆಯಿಂದ, ಸಂಭ್ರಮದಿಂದ ಆಚರಿಸಲಾಗುತ್ತದೆ. ಅಷ್ಟ ದಿಕ್ಕುಗಳ ಅಧಿಪತಿಯಾದ, ಸಿದ್ಧಿದಾತ, ವಿಘ್ನನಿವಾರಕ, ಗಣೇಶನನ್ನು ಭಾವಪೂರ್ಣವಾಗಿ ಪೂಜಿಸಲಾಗುತ್ತದೆ ಎಂದರು.
ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಇಂಜಿನೀಯರ್ ಪ್ರೇಮಸಿಂಗ್ ಅವರು ಪರಿಸರ ಸ್ನೇಹಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು.ಡಿ.ಬಿ. ಕುಲಕರ್ಣಿ, ಮಾನಪ್ಪಗೌಡ ಕಮತರಡ್ಡಿ ಜಾಲಿಬೆಂಚಿ, ಪರ್ವತರೆಡ್ಡಿ, ಪ್ರಕಾಶ ಸಜ್ಜನ್, ಗೋವಿಂದರಾಜ ಸತ್ಯಂಪೇಟ, ರಾಯಪ್ಪ ನಾಟೇಕಾರ, ಮಲ್ಲಯ್ಯಸ್ವಾಮಿ, ಶಿವಯ್ಯಸ್ವಾಮಿ, ವಿರುಪಾಕ್ಷಯ್ಯ ಹಿರೇಮಠ, ಮಹಾಂತೇಶ ಇದ್ದರು.
------10ವೈಡಿಆರ್6 : ಶಹಾಪುರ ತಾಲೂಕಿನ ಭೀಮರಾಯನಗುಡಿಯ ಶಿವಾ ದೇವಾಲಯದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮವು ಹಲವು ಪೂಜಾ ವಿಧಾನಗಳ ಮೂಲಕ ನಡೆಯಿತು.