ಹೊಂಗನೂರು ಗ್ರಾಮ ದೊಂಬಕಾಳೇಶ್ವರಸ್ವಾಮಿ, ಗೂಳೇಶ್ವರ, ಮತ್ತು ವೀರಮಾಸ್ತಿ ಕೆಂಪಮ್ಮ ಭಕ್ತರು ರಾಜ್ಯದಲ್ಲಿ ಅಲ್ಲದೇ ಹೊರ ರಾಜ್ಯಗಳಲ್ಲಿಯೂ ಲಕ್ಷಾಂತರ ಭಕ್ತರನ್ನು ಹೊಂದಿದೆ. ಎಲ್ಲರ ಶ್ರದ್ಧೆ ಮತ್ತು ಸಮುದಾಯದ ಒಗ್ಗಟ್ಟಿನಿಂದ ದೇವಸ್ಥಾನ ನಿರ್ಮಾಣದ ಪವಿತ್ರ ಕಾರ್ಯ ಯಶಸ್ವಿ ಕಂಡಿದೆ. ದೇವಸ್ಥಾನ ನಿರ್ಮಾಣದ ಕಾರ್ಯದಲ್ಲಿ ತೋರಿದ ನಿಸ್ವಾರ್ಥ ಸೇವೆ, ಧಾರ್ಮಿಕ ಶ್ರದ್ಧೆ ಮುಂದಿನ ಪೀಳಿಗೆಗೆ ಮಾದರಿಯಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ದೇವಸ್ಥಾನ ನಿರ್ಮಾಣದ ಸಂಕಲ್ಪ ಹೊತ್ತ ಸಂದರ್ಭದಲ್ಲಿ ಫಲಾಪೇಕ್ಷೆಯಿಲ್ಲದೇ ತನು, ಮನ, ಧನ ಅರ್ಪಿಸಿದ ಭಕ್ತರಿಗೆ ಭಗವಂತನು ಮತ್ತಷ್ಟು ಶಕ್ತಿಯನ್ನು ಕೊಟ್ಟು ಉದ್ಧರಿಸಲಿ ಎಂದು ಟ್ರಸ್ಟ್ ಅಧ್ಯಕ್ಷ ಕೀಲಾರ ಚಂದ್ರಶೇಖರ್ ಆಶಿಸಿದರು.ಪಟ್ಟಣದ ಪೇಟೆ ಬೀದಿಯ ದೊಂಬಕಾಳೇಶ್ವರ ಟ್ರಸ್ಟ್ ಆವರಣದಲ್ಲಿ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕ್ಷೇತ್ರ ದೊಂಬಕಾಳೇಶ್ವರಸ್ವಾಮಿ, ಗೂಳೇಶ್ವರ ಮತ್ತು ವೀರಮಾಸ್ತಿ ಕೆಂಪಮ್ಮ ನೂತನ ದೇವಸ್ಥಾನ ನಿರ್ಮಾಣಕ್ಕೆ ಸಹಾಯ ನೀಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಂಗನೂರು ಗ್ರಾಮ ದೊಂಬಕಾಳೇಶ್ವರಸ್ವಾಮಿ, ಗೂಳೇಶ್ವರ, ಮತ್ತು ವೀರಮಾಸ್ತಿ ಕೆಂಪಮ್ಮ ಭಕ್ತರು ರಾಜ್ಯದಲ್ಲಿ ಅಲ್ಲದೇ ಹೊರ ರಾಜ್ಯಗಳಲ್ಲಿಯೂ ಲಕ್ಷಾಂತರ ಭಕ್ತರನ್ನು ಹೊಂದಿದೆ. ಎಲ್ಲರ ಶ್ರದ್ಧೆ ಮತ್ತು ಸಮುದಾಯದ ಒಗ್ಗಟ್ಟಿನಿಂದ ದೇವಸ್ಥಾನ ನಿರ್ಮಾಣದ ಪವಿತ್ರ ಕಾರ್ಯ ಯಶಸ್ವಿ ಕಂಡಿದೆ. ದೇವಸ್ಥಾನ ನಿರ್ಮಾಣದ ಕಾರ್ಯದಲ್ಲಿ ತೋರಿದ ನಿಸ್ವಾರ್ಥ ಸೇವೆ, ಧಾರ್ಮಿಕ ಶ್ರದ್ಧೆ ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.ಸಮಾಜದ ಹಿತದೃಷ್ಟಿಯಿಂದ ಧರ್ಮದ ಉಳಿವಿಗಾಗಿ ನೀಡಿದ ಸಮಯ, ಶ್ರಮ ಮತ್ತು ಮಾರ್ಗದರ್ಶನಕ್ಕೆ ಬೆಲೆಕಟ್ಟಲಾಗದು. ದೇವಸ್ಥಾನ ನಿರ್ಮಾಣದ ಸಂಕಲ್ಪವನ್ನು ಹೊತ್ತು ಸಾಕಾರಗೊಳಿಸುವ ಹಾದಿಯಲ್ಲಿ ತೋರಿದ ಬದ್ಧತೆ ಶ್ಲಾಘನೀಯ, ದೇವಸ್ಥಾನದ ಪರಂಪರೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಟ್ರಸ್ಟ್ ನಿರ್ವಹಿಸಲಿದೆ ಎಂದರು.
ಪುರಸಭೆ ಮಾಜಿ ಸದಸ್ಯ ರಮೇಶ್ ಮಾತನಾಡಿ, ದೇವಸ್ಥಾನಗಳ ನಿರ್ಮಾಣಕ್ಕೆ ಸಾವಿರಾರು ಮಂದಿ ದೇಣಿಗೆ ನೀಡಿದ್ದು, ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಶ್ರಮಿಸಿದ ಭಕ್ತರನ್ನು ಅಭಿನಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಯಾ ಸ್ಥಳಕ್ಕೆ ಹೋಗಿ ಟ್ರಸ್ಟ್‌ನಿಂದ ಗೌರವ ಅರ್ಪಿಸಲಾಗುತ್ತಿದೆ. ಮಳವಳ್ಳಿಯಲ್ಲಿ ವಿಶೇಷ ಪೂಜಾ ಕೈಂಕರ್ಯ ಹಾಗೂ ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಮಳವಳ್ಳಿ ಶಾಖಾ ಅಧ್ಯಕ್ಷ ಸುಬ್ಬಣ್ಣ, ಖಜಾಂಚಿ ಶಿವಲಿಂಗಯ್ಯ, ಕಾಮಗೆರೆರವಿ, ಕೆಂಪೇಗೌಡ, ಪುಟ್ಟರಾಜು, ಕೆ.ಸಿ ನಾಗೇಗೌಡ, ಮುತ್ತುರಾಜು, ಚಿಕ್ಕಣ್ಣ ಸೇರಿದಂತೆ ಇತರರು ಇದ್ದರು.