ಸರ್ಕಾರಗಳ ಅನುದಾನಗಳು ಸಕಾಲದಲ್ಲಿ ಸದ್ಬಳಕೆಯಾಗಲಿ

| Published : Apr 24 2025, 11:46 PM IST

ಸಾರಾಂಶ

ಗ್ರಾಮಗಳು ಅಭಿವೃದ್ಧಿಯಾದರೇ ದೇಶವು ಅಭಿವೃದ್ಧಿಯಾಗುತ್ತದೆ ಎಂದು ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.

ಕನ್ನಡಪ್ರಭ ವಾರ್ತೆ ಪಾಲಬಾವಿ

ಗ್ರಾಮಗಳು ಅಭಿವೃದ್ಧಿಯಾದರೇ ದೇಶವು ಅಭಿವೃದ್ಧಿಯಾಗುತ್ತದೆ ಎಂದು ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.

ಗ್ರಾಮದಲ್ಲಿ ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ವಿಭಾಗ ರಾಯಬಾಗ, ಗ್ರಾಮ ಪಂಚಾಯತಿ ಪಾಲಬಾವಿ ಆಶ್ರಯದಲ್ಲಿ ಬೂದು ನೀರು ನಿರ್ವಹಣೆ ಚರಂಡಿ ನಿರ್ಮಾಣ ಕಾಮಗಾರಿಗೆ ಅಂದಾಜು ₹37 ಲಕ್ಷಗಳ ವೆಚ್ಚದಲ್ಲಿ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನಗಳು ಸಕಾಲದಲ್ಲಿ ಸದ್ಬಳಕೆ ಆಗಬೇಕು. ಗ್ರಾಮದಲ್ಲಿ ಗ್ರಾಮದಲ್ಲಿ ಚರಂಡಿ ಕಾಮಗಾರಿಯು ಬೇಗನೆ ಮುಗಿಯಬೇಕು ಎಂದು ಸೂಚಿಸಿದರು.

ಬೂದಾನಿಗಳಾದ ತಾತಾಸಾಬ ಪಾಟೀಲ ಶಾಸಕ ಮಹೇಂದ್ರ ತಮ್ಮಣ್ಣವರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಪರಪ್ಪ ಕರೋಶಿ, ಬಸಪ್ಪ ತೇಗೂರ, ಶಿರಿಯಾಳ ಮಾದರ, ಗುರುನಾಥ ಜುಂಜರವಾಡ, ತಾತಾಸಾಬ್‌ ಪಾಟೀಲ, ಪಿಡಿಒ ಶ್ರೀಕಾಂತ ಪಾಟೀಲ, ಕಾಂಗ್ರೆಸ್ ಪಕ್ಷದ ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಶಂಭುಲಿಂಗ ಪಾಟೀಲ, ರಾಯಬಾಗ ತಾಲೂಕು ಸೇವಾದಳದ ಅಧ್ಯಕ್ಷ ಮಹಾಲಿಂಗ ಜನವಾಡ, ಸಾಗರ ಕುರುಬೆಟ್ಟಿ, ಅಸ್ಲಾಂ ಬಿರಾದಾರ, ಇಲಾಹಿ ಕಾಗವಾಡ, ಗಿರಪ್ಪ ಬಳಗಾರ, ಕಿರಣ ತೇಗೂರ, ಷಣ್ಮುಖ ಕಾಡಶೆಟ್ಟಿ, ಮಹಾಲಿಂಗ ಬಳಗಾರ, ಲಕ್ಷ್ಮಣ ಮೇತ್ರಿ, ಮುತ್ತಪ್ಪ ಶಿವಾಪುರ, ಮಲ್ಲಪ್ಪ ಕಮತಗಿ, ಬರಮಪ್ಪ ತೇಗೂರ, ಶ್ರೀಶೈಲ ಮಲ್ಲಣ್ಣವರ, ಚಿದಾನಂದ ಗೋಡಿ, ಸರ್ದಾರ್ ಕಾಗವಾಡ, ಫಾರೂಕ್ ಮಿರ್ಜಿ, ಹನುಮಂತ ತಳ್ಳಿ, ಪುಟ್ಟು ಕಾಸರ, ಗುತ್ತಿಗೆದಾರ ಸಂಜಯ ಪಟ್ಟಣಶೆಟ್ಟಿ, ರಾಮಪ್ಪ ಮಾದರ, ಬರಮಪ್ಪ ನಿಸ್ಪತನಾಯಿಕ, ಮಹಾದೇವ ಪಟ್ಟಣಶೆಟ್ಟಿ, ಶ್ರೀಶೈಲ ಕೆಸರಕೊಪ್ಪ, ಲಕ್ಷ್ಮಣ ಬಳಗಾರ ಇತರರು ಇದ್ದರು.