ಸಾರಾಂಶ
ಬಕ್ರೀದ್ ತ್ಯಾಗ,ಬಲಿದಾನಗಳ ಸಂಕೇತ. ಮುಸ್ಲಿಂ ಭಾಧವರು ದುಶ್ಚಟಗಳನ್ನು ವರ್ಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಅಮೀನಗಡ
ಬಕ್ರೀದ್ ತ್ಯಾಗ,ಬಲಿದಾನಗಳ ಸಂಕೇತ. ಮುಸ್ಲಿಂ ಭಾಧವರು ದುಶ್ಚಟಗಳನ್ನು ವರ್ಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.ಸಮೀಪದ ಸೂಳೇಬಾವಿಯ ಈದ್ಗಾ ಮೈದಾನದಲ್ಲಿ ಬಕ್ರೀದ್ ನಿಮಿತ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ ಮನುಷ್ಯ ಚಟಗಳಿಗೆ ದಾಸನಾಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಮುಸ್ಲಿಂ ಸಮಾಜದವರು ಚಟವನ್ನು ದೂರವಿರಿಸಿ ಕಾಲಕಾಲಕ್ಕೆ ನಮಾಜ್, ಪ್ರಾರ್ಥನೆ ಸಲ್ಲಿಸಿ, ಪ್ರವಾದಿ ಪೈಗಂಬರರು ಹಾಕಿಕೊಟ್ಟ ಧರ್ಮಮಾರ್ಗ ಅನುಸರಿಸಬೇಕು. ಸೂಳೇಬಾವಿಯಲ್ಲಿ ಹಿರಿಯರು ಬಹು ಹಿಂದಿನಿಂದಲೂ ಹಾಕಿಕೊಟ್ಟ ಸೌಹಾರ್ದ ಜೀವನವನ್ನು ಇಂದಿನ ಯುವಪೀಳಿಗೆ ಮುಂದುವರೆಸಿಕೊಂಡು ಹೋಗುವುದರ ಮೂಲಕ, ಶಾಂತಿ, ಸೌಹಾರ್ದತೆಗೆ ಒತ್ತು ನೀಡಬೇಕು ಎಂದರು.
ಸೂಳೇಬಾವಿ ಅಂಜುಮನ್ ಇಸ್ಲಾಂ ಕಮಿಟಿ ಉಪಾಧ್ಯಕ್ಷ ಅದಿಲ್‌ಸಾಬ ತಂಗಡಗಿ, ಕಾರ್ಯದರ್ಶಿ ರೆಹಮಾನಸಾಬ ಮುಲ್ಲಾ, ನಬಿಸಾಬ ಮಾಗಿ, ರಾಜಮಹಮ್ಮದ ಮುಲ್ಲಾ, ಕಾಶಿಂಸಾಬ ಬೂದಿಹಾಳ, ಮಲಿಕಸಾಬ ಬುವಾಜಿ ಹಾಗೂ ಮುಸ್ಲಿಂ ಸಮಾಜದ ಹಿರಿಯರು,ಯುವಕರು ಪಾಲ್ಗೊಂಡಿದ್ದರು.