May HD Kumaraswamy get good health: Chandrasekhar

ನರಸಿಂಹರಾಜಪುರ: 65 ನೇ ಹುಟ್ಟುಹಬ್ಬ ಆಚರಿಸುತ್ತಿರುವ ಕೇಂದ್ರ ಸಚಿವ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ದೇವರು ಆರೋಗ್ಯ ದಯಪಾಲಿಸಬೇಕು. ಅವರಿಂದ ನಾಡಿಗೆ ಇನ್ನಷ್ಟು ಸೇವೆ ಸಿಗಬೇಕು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

ಅವರು ಜೆಡಿಎಸ್ ಕಚೇರಿಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ 65 ನೇ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಮಾತನಾಡಿದರು. ಕುಮಾರಸ್ವಾಮಿಗೆ ರಾಜಕೀಯದಲ್ಲಿ ಇನ್ನಷ್ಟು ಉತ್ತಮ ಸ್ಥಾನಗಳು ಲಭಿಸಲಿ ಎಂದು ತಾಲೂಕು ಜೆಡಿಎಸ್ ಪಕ್ಷವು ಪ್ರಾರ್ಥನೆ ಸಲ್ಲಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಬಿ.ಟಿ.ರವಿ, ಸುಬಾನ್, ಸತೀಶ್, ಈ.ಸಿ.ಶೇವಿಯಾರ್, ಉಪೇಂದ್ರ, ಹೂವಪ್ಪ, ಕೆ.ಟಿ.ಚಂದ್ರಶೇಖರ್, ವಿಜಯನ್, ತಂಗಚ್ಚನ್, ನವೀನ್, ಪಿಕಪ್ ಚಂದ್ರು, ಬಿಜೆಪಿ ಮುಖಂಡ ಪರ್ವೀಜ್ ಇದ್ದರು.