ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಭಗವಂತನ ಅಸಾದೃಶ ಅವತಾರವಾದ ಶ್ರೀಕೃಷ್ಣ ನಿತ್ಯವೂ ನಮ್ಮೆಲ್ಲರ ಹೃದಯದಲ್ಲಿ ನೆಲೆ ನಿಂತು ಉತ್ತಮೋತ್ತಮ ಕಾರ್ಯಗಳಿಗೆ ಪ್ರೇರಣೆ ನೀಡಲಿ ಎಂದು ಸೋಸಲೆ ಶ್ರೀ ವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.ಸೋಸಲೆ ಗ್ರಾಮದಲ್ಲಿ 8ನೇ ಚಾತುರ್ಮಾಸ್ಯ ವ್ರತದಲ್ಲಿರುವ ಅವರು ಜನ್ಮಾಷ್ಟಮಿ ಸಂದರ್ಭದಲ್ಲಿ ಸೋಮವಾರ ಅವರು ವಿಶೇಷ ಅನುಗ್ರಹ ಸಂದೇಶ ನೀಡಿದರು.ದಶಾವತಾರಗಳಲ್ಲಿ ಶ್ರೀ ಕೃಷ್ಣಾವತಾರ ಬಹು ವಿಶೇಷ. ಅವನನ್ನು ಸಂಪೂರ್ಣ ಅರಿತವರು ಯಾರೂ ಇಲ್ಲ. ಆತನನ್ನು ಸೆರೆ ಹಿಡಿಯುವ ಸಾಮರ್ಥ್ಯ ಯಾರಿಗೂ ಬರಲೇ ಇಲ್ಲ. ಹಾಗಾಗಿ ಕೃಷ್ಣನನ್ನು ನಮ್ಮ ನಮ್ಮ ಜ್ಞಾನ, ಅರಿವು ಮತ್ತು ಅಧ್ಯಯನದ ಯೋಗ್ಯತಾನುಸಾರ ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ಅಲ್ಲಿ ನಮ್ಮ ನಮ್ಮ ಜವಾಬ್ದಾರಿ, ಕರ್ತವ್ಯ ಮತ್ತು ನಾಡಿಗೆ ಸೇವೆ ಸಲ್ಲಿಸಲು ಕಂಕಣಬದ್ಧರಾಗಬೇಕು. ಈ ಪ್ರವೃತ್ತಿಗಳೇ ಇಂದು ಸಮಾಜಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವುದು ಎಂದು ಶ್ರೀಗಳು ಹೇಳಿದರು.ಸಂಸ್ಥಾನ ಪ್ರತಿಮೆಗಳಿಗೆ ಮತ್ತು ಮೂಲ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ, ಮಂಗಳಾರತಿ ಸಮರ್ಪಣೆ ಮಾಡಿದರು. ಕೃಷ್ಣನಿಗೆ ಅರ್ಘ್ಯ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.ಇಂದು ಅಂತರ ಶಾಲಾ, ಕಾಲೇಜು ಸ್ಪರ್ಧೆ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋಸಲೆ ಶ್ರೀ ವ್ಯಾಸರಾಜರ ಮಠದ ವತಿಯಿಂದ ಆ. 27ರಂದು ಅಂತರ ಶಾಲಾ, ಕಾಲೇಜು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10kdkz ಸ್ಪರ್ಧೆಗಳು ಚಾಲನೆಗೊಳ್ಳಲಿವೆ. ವಿವರಗಳಿಗೆ ಮೊ. 98454 50219 ಅಥವಾ 94811 88054 ಸಂಪರ್ಕಿಸಿ.