ಕನ್ನಡಪ್ರಭ ವಾರ್ತೆ,ಕೊಳ್ಳೇಗಾಲ

ಕೊಳ್ಳೇಗಾಲ ಪಟ್ಟಣದ ಸೇವಾ ಕೈಂಕರ್ಯಗಳಿಗೆ ಹೆಸರಾದ ರೋಟರಿ ಮಿಡ್ ಟೌನ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಉದ್ಯಮಿ ಬಿ.ಚೇತನ್, ಕಾರ್ಯದರ್ಶಿಗಳಾಗಿ ಸ್ಮರಣ್, ನಿಯೋಜಿತ ಜಿಲ್ಲಾ ಗವರ್ನರ್‌ ಯಶಸ್ವಿ ಎಸ್ .ಸೋಮಶೇಖರ್, ವಲಯ 9ರ ಸಹಾಯಕ ಗವರ್ನರ್ ಹನುಂತೇಗೌಡ ಅವರ ಸಮ್ಮುಖದಲ್ಲಿ ಭಾನುವಾರ ಪದಗ್ರಹಣ ಮಾಡಿದರು.

ವೆಂಕಟೇಶ್ವರ ಮಹಲ್‌ನಲ್ಲಿ ಅಯೋಜಿಸಲಾಗಿದ್ದ ಸಮಾರಂಭದಲ್ಲಿ ಚೇತನ್- ಸ್ಮರಣ್ ಅವರಿಗೆ ನಿರ್ಗಮಿತ ಅಧ್ಯಕ್ಷರಾದ ಶೇಖರ್ ಅವರ ಅನುಮತಿ ಮೇರೆಗೆ ಸೋಮಶೇಖರ್ ಅಧಿಕಾರ ಹಸ್ತಾಂತರಿದರು. ಈ ವೇಳೆ ಮಿಡ್ ಟೌನ್ ನೂತನ ಪದಾಧಿಕಾರಿಗಳಾಗಿ ಖಜಾಂಚಿ ರಾಮ್ ಮೋಹನ್, ಉಪಾಧ್ಯಕ್ಷರಾಗಿ ಪ್ರಶಾಂತ್, ಕ್ಲಬ್ ನಿರ್ದೇಶಕರಾಗಿ ಶಿವಾನಂದ ಎಂ., ವೖತ್ತಿಪರ ನಿರ್ದೇಶಕರಾಗಿ ವಿನಯ್, ಸಮುದಾಯ ನಿರ್ದೇಶಕರಾಗಿ ಪ್ರವೀಣ್ ಕುಮಾರ್, ಅರುಣ್, ಡೇವಿಡ್ ಫರ್ನಾಂಡಿಸ್, ಸತೀಶ್ ಬಾಬು, ಡಾ. ಮಧುಸೂಧನ್, ಗಿರೀಶ್, ಜೆ.ಸಂಪತ್, ಮಹೇಶ್ ಎಸ್., ಡಾ. ಉಮಾಶಂಕರ್, ಡಾ. ಸತೀಶ್, ಎಚ್.ಪಿ. ಅನಂತ್, ಲೋಕೇಶ್, ನಟರಾಜು, ತಮ್ಮಣ್ಣ, ಪ್ರಸನ್ನರಾಜು ಇನ್ನಿತರರು ಸದಸ್ಯರ ಸಮಕ್ಷಮದಲ್ಲಿ ಪದಗ್ರಹಣ ಮಾಡಿದರು.ಈ ವೇಳೆ ಮೈಸೂರಿನ ಖ್ಯಾತ ಹೃದಯ ರೋಗ ತಜ್ಞ, ನಾರಾಯಣ ಹೃದಯಾಲಯದ ವೈದ್ಯ ಡಾ. ಕೇಶಮೂರ್ತಿ, ಕನ್ನಡಪ್ರಭ ವರದಿಗಾರ ಎನ್‌. ನಾಗೇಂದ್ರಸ್ವಾಮಿ, ಹೋಲಿಕ್ರಾಸ್ ಆಸ್ಪತ್ರೆ ಸಿಸ್ಟರ್ ಗ್ಲೋರಿನಾ, ಕಾರ್ನರ್ ಸ್ಟೋನ್ ಆಸ್ಪತ್ರೆಯ ಡಾ.ರೂಬನ್ ಮೋಸಸ್, ಎಚ್ ಕೆ ಟ್ರಸ್ಟ್ ಸಂಸ್ದಾಪಕಿ ಪ್ರೇಮಲತಾ ಕೖಷ್ಣಸ್ವಾಮಿ ಸೇರಿದಂತೆ ಹಲವು ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸಿದ್ದಯ್ಯನಪುರ ರಾಚಯ್ಯ ಅವರನ್ನು ನೂತನ ಸದಸ್ಯರಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಮರೂರು ಸರ್ಕಾರಿ ಶಾಲೆ, ಕೆಂಪನಪಾಳ್ಯ ಶಾಲೆ, ಗ್ರಾಮಂತರ ಪಾಳ್ಯ ಶಾಲೆ, ಕಣ್ಣೂರು ಮಹದೇಶ್ವರ ಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಕ್ರೀಡಾಪರಿಕರ, ಬಿ ಆರ್ ಟಿ ವನ್ಯಜೀವಿ ವಲಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ದೊಡ್ಡ ಬುಟ್ಟಿಗಳನ್ನು ನೀಡಲಾಯಿತು. ಮತ್ತು ಅತ್ಯುನ್ನತ ಅಂಕಗಳಿಸಿದ ಹಲವು ವಿದ್ಯಾರ್ಥಿಗಳಿಗೆ ಗೌರವಿಸಿ ಆರ್ಥಿಕ ನೆರವು ವಿತರಿಸಲಾಯಿತು.

ಈ ವೇಳೆ ನಿಯೋಜಿತ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್ ಮಾತನಾಡಿ, ಕಳೆದ ಅವಧಿಯ ಪದಾಧಿಕಾರಿಗಳ ಸೇವೆ ಪ್ರಶಂಶನೀಯವಾದುದು. ಈ ಬಾರಿಯೂ ಸಹಾ ನೂತನ ಪದಾಧಿಕಾರಿಗಳು ಅನೇಕ ಸೇವಾ ಚಟುವಟಿಕೆಗಳನ್ನು ನಡೆಸುವಂತಾಗಬೇಕು. ಇಂದಿನ ಸೇವಾ ಕಾರ್ಯಗಳು ಮನಸ್ಸಿಗೆ ತೃಪ್ತಿ ನೀಡಿವೆ. ವಿದ್ಯಾರ್ಥಿ ಓದಿಗೆ ಮಾಡಿದ ಸಹಾಯ ಮುಂದಿನ ಬದುಕಿಗೆ ಭದ್ರಬುನಾದಿಯಾಗಲಿದೆ. ಇಂದು ಗಿಡನೆಟ್ಟು ಪೋಷಿಸಿದರೆ ಮುಂದೆ ಅದು ಮುಂದಿನ ಪೀಳಿಗೆಗೆಗೂ ಸಹಕಾರಿಯಾಗಲಿದೆ. ಅದೇ ರೀತಿ ಒಬ್ಬ ಸಮಾಜಮುಖಿ ನಾಯಕನನ್ನು ಬೆಳಸಿದರೆ ಆತನಿಂದ ಸಮಾಜದ ಕಡು ಬಡವರಿಗೆ ಹೆಚ್ಚು ಸಹಕಾರಿಯಾಗಲಿದೆ, ಸೇವಾ ಕೈಂಕರ್ಯಗಳು ಮನಸ್ಸಿಗೆ ಆತ್ಮ ತೖಪ್ತಿ ತಂದುಕೊಡಲಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಲಯ ಸೇನಾನಿ ಆರ್. ದಕ್ಷಿಣಾಮೂರ್ತಿ, ಲಯನ್ಸ್ ಅಧ್ಯಕ್ಷ ಪುಟ್ಟಮಾದಪ್ಪ, ನಿವೖತ್ತ ಪ್ರಾಂಶುಪಾಲ ಸಿದ್ದರಾಜು, ಸಂಪತ್, ಪಳನಿಸ್ವಾಮಿ, ಸರ್ವೇಶ್, ಪುಟ್ಟರಸಶೆಟ್ಟ, ಶಿಕ್ಷಕರ ಸಂಘದ ಕಾರ್ಯದರ್ಶಿ ಮಾದೇಶ್, ಮುಡಿಗುಂಡ ಸುಂದ್ರಪ್ಪ, ರೋಟರಿ ಅಧ್ಯಕ್ಷ ಬಿ.ಮಹದೇವ, ಚಿನ್ನದ ವ್ಯಾಪಾರಿ ದೊರೆಸ್ವಾಮಿ, ರಾಜಮಲ್ಲು, ಬಿ.ಕೆ. ಪ್ರಕಾಶ ಇನ್ನಿತರಿದ್ದರು.