ಸಾರಾಂಶ
ಬಾಳೆಹೊನ್ನೂರುಸಮಾಜದಲ್ಲಿ ನಡೆಸುವ ಸೇವಾ ಕಾರ್ಯಗಳು ಇತರರಿಗೆ ಪ್ರೇರಣೆಯಾಗಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.
ಪಟ್ಟಣದ ಬಿಇಎಸ್ ವಿದ್ಯಾಸಂಸ್ಥೆಗೆ ರೋಟರಿಯಿಂದ 100 ಕುರ್ಚಿಗಳ ಹಸ್ತಾಂತರ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಸಮಾಜದಲ್ಲಿ ನಡೆಸುವ ಸೇವಾ ಕಾರ್ಯಗಳು ಇತರರಿಗೆ ಪ್ರೇರಣೆಯಾಗಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಹೇಳಿದರು.ಪಟ್ಟಣದ ಬಿಇಎಸ್ ವಿದ್ಯಾಸಂಸ್ಥೆಗೆ ರೋಟರಿ ಕ್ಲಬ್ ನಿಂದ ಕೊಡುಗೆ ನೀಡಿದ 100 ಕುರ್ಚಿಗಳನ್ನು ಹಸ್ತಾಂತರಿಸಿ ಮಾತನಾಡಿದರು. ರೋಟರಿ ಸಂಸ್ಥೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡುತ್ತಿದೆ. ಶಿಕ್ಷಣ ಸಮಾಜದಲ್ಲಿ ಪ್ರಮುಖ ಸಾಧನವಾಗಿದ್ದು, ವಿದ್ಯಾರ್ಥಿಗಳಿಂದ ದೇಶ, ಸಮಾಜ ಅಭಿವೃದ್ಧಿಯಾಗಲಿದೆ ಈ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಸಮಾಜಕ್ಕೆ ತಮ್ಮಿಂದ ಏನಾದರೂ ಕೊಡುಗೆ ನೀಡಬೇಕು ಎಂದರು.ಬಿಇಎಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಸಿ.ಗೀತಾ ಮಾತನಾಡಿ, ರೋಟರಿ ಸಂಸ್ಥೆ ನಮ್ಮ ಸಂಸ್ಥೆಗೆ ಕುರ್ಚಿಗಳನ್ನು ಕೊಡುಗೆ ಯಾಗಿ ನೀಡುತ್ತಿರುವುದು ಶ್ಲಾಘನೀಯ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ರೋಟರಿ ಸಂಸ್ಥೆ ಸಾಕಷ್ಟು ಯೋಜನೆ ರೂಪಿಸಿದ್ದು, ಹಲವು ತರಬೇತಿಗಳನ್ನು ನೀಡಿದೆ. ರೋಟರಿ ಸಂಸ್ಥೆಯ ಸೇವಾ ಕಾರ್ಯ ಇನ್ನು ಹೆಚ್ಚಿನದಾಗಿ ಮುಂದುವರಿಯಲಿ ಎಂದು ಆಶಿಸಿದರು.ರೋಟರಿ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ ಜೋಷಿ, ವಲಯಾಧಿಕಾರಿ ಎಂ.ಸಿ.ಯೋಗೀಶ್, ರೋಟರಿ ಅಧ್ಯಕ್ಷ ಎಂ.ವಿ. ತಿಮ್ಮಯ್ಯಗೌಡ, ಕಾರ್ಯದರ್ಶಿ ಸೈಯ್ಯದ್ ಫಾಜಿಲ್ ಹುಸೇನ್, ಪ್ರಾಚಾರ್ಯ ಕೆ.ಆರ್.ಭೂದೇಶ, ರೋಟರಿ ಸದಸ್ಯ ಸಿ.ವಿ.ಸುನೀಲ್ ಮತ್ತಿತರರು ಹಾಜರಿದ್ದರು.೧೦ಬಿಹೆಚ್‌ಆರ್ ೨:ಬಾಳೆಹೊನ್ನೂರಿನ ರೋಟರಿ ಕ್ಲಬ್ ನಿಂದ ಬಿಇಎಸ್ ವಿದ್ಯಾಸಂಸ್ಥೆಗೆ 100 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಕೆ.ಪಾಲಾಕ್ಷ, ಬಿ.ಸಿ.ಗೀತಾ, ರಾಜಗೋಪಾಲ ಜೋಷಿ, ಎಂ.ಸಿಯೋಗೀಶ್, ಎಂ.ವಿ.ತಿಮ್ಮಯ್ಯ, ಸೈಯ್ಯದ್ ಫಾಜಿಲ್ ಇದ್ದರು.