ಸದೃಢ ರಾಷ್ಟ್ರಕ್ಕೆ ಮಕ್ಕಳ ಭವಿಷ್ಯ ಸುಭದ್ರವಾಗಲಿ: ರಮೇಶ್

| Published : Dec 11 2023, 01:15 AM IST

ಸದೃಢ ರಾಷ್ಟ್ರಕ್ಕೆ ಮಕ್ಕಳ ಭವಿಷ್ಯ ಸುಭದ್ರವಾಗಲಿ: ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸದೃಢ ರಾಷ್ಟ್ರಕ್ಕೆ ಮಕ್ಕಳ ಭವಿಷ್ಯ ಸುಭದ್ರವಾಗಲಿ: ರಮೇಶ್

ಕಸವನಹಳ್ಳಿ ಶಾಲಾ ಮಕ್ಕಳಿಗೆ ಪರಿವರ್ತನ್ ಇಂಡಿಯಾ ಸಂಸ್ಥೆಯಿಂದ ಪರಿಕರ ವಿತರಣೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಸದೃಢ ರಾಷ್ಟ್ರ ನಿರ್ಮಾಣವಾಗಲು ಮಕ್ಕಳ ಭವಿಷ್ಯವನ್ನು ಸುಭದ್ರವಾಗಿ ರೂಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಹೇಳಿದರು. ತಾಲೂಕಿನ ಕಸವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪರಿವರ್ತನ್ ಇಂಡಿಯಾ ಸಂಸ್ಥೆಯವರು ಶೈಕ್ಷಣಿಕ ಪರಿಕರಗಳನ್ನು ವಿತರಣೆ ಮಾಡಿದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಖಾಸಗಿ ಶಾಲೆಗಳು ಕೊಡುವ ಮಾಹಿತಿಗಿಂತ ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಸಿಗುವ ಸಾಮಾನ್ಯ ಜ್ಞಾನ ಮಕ್ಕಳನ್ನು ಸದೃಢವಾಗು ರೂಪಿಸುತ್ತದೆ. ಸುಸಂಸ್ಕೃತ ಸಮಾಜ, ಸುಭದ್ರ ದೇಶವನ್ನು ನಿರ್ಮಾಣ ಮಾಡಬೇಕು. ಮಕ್ಕಳಿಗಾಗಿ ಆಸ್ತಿ ಕೂಡಿಡುವ ಬದಲು ಶಿಕ್ಷಣ, ಸಂಸ್ಕಾರ, ಸಾಮಾನ್ಯ ಜ್ಞಾನ, ದಾನ-ಧರ್ಮ ಮಾಡುವಂಥ ಮನಸ್ಥಿತಿಯನ್ನು ಮಕ್ಕಳಲ್ಲಿ ಗಟ್ಟಿಗೊಳಿಸಬೇಕು. ಇಲ್ಲವಾದಲ್ಲಿ ರೋಗಗ್ರಸ್ತ , ವ್ಯಸನ ಪೀಡಿತ ಮನಸ್ಥಿತಿಯ ಮಕ್ಕಳು ಬೆಳೆಯುತ್ತಾರೆ ಎಂದರು. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಶಾಲೆಯ ಮಕ್ಕಳಿಗೆ ಪರಿವರ್ತನಾ ಇಂಡಿಯಾ ಫೌಂಡೇಶನ್‌ನ ರಶ್ಮಿಯವರು ಶೈಕ್ಷಣಿಕ ಪರಿಕರಗಳನ್ನು ಕೊಡುವುದು ಶ್ಲಾಘನೀಯ ಕೆಲಸವಾಗಿದೆ. ಹೀಗೆ ಸರ್ಕಾರಿ ಶಾಲೆಗೆ ಸಹಾಯ ಮಾಡುವವರ ಸಂಖ್ಯೆ ಹೆಚ್ಚಾಗಬೇಕು ಎಂದರು.ಪರಿವರ್ತನ್ ಇಂಡಿಯಾ ಫೌಂಡೇಶನ್‌ನ ಶ್ರೀಮತಿ ರಶ್ಮಿ ಮಾತನಾಡಿ, ನಮ್ಮ ಸಂಸ್ಥೆಯಿಂದ ಸೌಲಭ್ಯ ವಂಚಿತ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿವರ್ಷ ಶೈಕ್ಷಣಿಕ ಪರಿಕರಗಳನ್ನು ಕೊಡುವಂತಹ ಕೆಲಸ ನಡೆಯುತ್ತಿದೆ. ನಾವು ಓದುವಾಗ ಇಂತಹ ಎಲ್ಲಾ ಸೌಲಭ್ಯಗಳು ನಮಗೆ ಸಿಗದಿದ್ದರಿಂದ ಅನೇಕರು ಶಿಕ್ಷಣ ವಂಚಿತರಾಗಿದ್ದಾರೆ. ಇವತ್ತಿನ ಮಕ್ಕಳಿಗಾದರೂ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸೋಣ ಎಂಬ ಸದುದ್ದೇಶ ನಮ್ಮದು. ಶಿಕ್ಷಣದ ಮಹತ್ವವನ್ನು ಪೋಷಕರು ಅರಿತು ಮಕ್ಕಳನ್ನು ಬೆಳೆಸಬೇಕು. ಸೌಲಭ್ಯ ವಂಚಿತ ಮಕ್ಕಳನ್ನು ಗುರುತಿಸಿ ಸಾಧ್ಯವಾದ ನೆರವು ನೀಡುವುದು ಎಲ್ಲರ ಆದ್ಯತೆಯಾದರೆ ಒಳ್ಳೆಯದು ಎಂದರು.ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಶಶಿಧರ್, ಬಿಆರ್‌ಪಿ ಪ್ರಸನ್ನ, ಶಿಕ್ಷಕ ರಂಗನಾಥ್, ಸಹ ಶಿಕ್ಷಕ ಬಸವರಾಜ್, ಕಲ್ಪನಾ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಆರ್‌. ಪ್ರಕಾಶ್, ರಾಮಚಂದ್ರ, ಆರ್.ರಾಘವೇಂದ್ರ, ಎ.ಶ್ರೀನಿವಾಸ್, ಅಂಗನವಾಡಿ ಶಿಕ್ಷಕಿ ಮಹಾಲಕ್ಷ್ಮಿ, ನಂದಿನಿ ಮುಂತಾದವರು ಹಾಜರಿದ್ದರು.- - -1&2 ತಾಲೂಕಿನ ಕಸವನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪರಿವರ್ತನ್ ಇಂಡಿಯಾ ಫೌಂಡೇಷನ್‌ನ ವತಿಯಿಂದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಈ ವೇಳೆ ಶ್ರೀಮತಿ ರಶ್ಮಿ, ಕಲ್ಪನಾ, ಕಸವನಹಳ್ಳಿ ರಮೇಶ್ ಮುಂತಾದವರು ಹಾಜರಿದ್ದರು.