ಭಾರತೀಯ ಸಂಸ್ಕೃತಿಯ ವೈಭವ ಮರುಸ್ಥಾಪನೆಯಾಗಲಿ

| Published : Dec 22 2023, 01:30 AM IST

ಭಾರತೀಯ ಸಂಸ್ಕೃತಿಯ ವೈಭವ ಮರುಸ್ಥಾಪನೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

1947ಕ್ಕೂ ಪೂರ್ವದಲ್ಲಿ ಭಾರತದಲ್ಲಿದ್ದ ಆಚಾರ-ವಿಚಾರಗಳು, ಆಹಾರ ಪದ್ಧತಿ ಇಂದು ಉಳಿದಿಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಂಸ್ಕೃತಿ ನಿರ್ಲಕ್ಷ್ಯ ಮಾಡುತ್ತಿದ್ದೇವೆ ಎಂದು ರಾಷ್ಟ್ರೋತ್ಥಾನ ಪರಿಷತ್ ಕಾರ್ಯಕರ್ತ ಶ್ರೀನಿವಾಸ ಪಾಟೀಲ ಹೇಳಿದರು. ಅವರು, ಸ್ಥಳೀಯ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಸಾಂಸ್ಕೃತಿಕ ಘಟಕ, ಇತಿಹಾಸ ವಿಭಾಗ ಹಾಗೂ ಅಭ್ಯುದಯ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ’ಸಂಕಲ್ಪನಾ-2047 ರ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಪ್ರಭ ವಾರ್ತೆ, ಮುಧೋಳ

1947ಕ್ಕೂ ಪೂರ್ವದಲ್ಲಿ ಭಾರತದಲ್ಲಿದ್ದ ಆಚಾರ-ವಿಚಾರಗಳು, ಆಹಾರ ಪದ್ಧತಿ ಇಂದು ಉಳಿದಿಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಂಸ್ಕೃತಿ ನಿರ್ಲಕ್ಷ್ಯ ಮಾಡುತ್ತಿದ್ದೇವೆ ಎಂದು ರಾಷ್ಟ್ರೋತ್ಥಾನ ಪರಿಷತ್ ಕಾರ್ಯಕರ್ತ ಶ್ರೀನಿವಾಸ ಪಾಟೀಲ ಹೇಳಿದರು.

ಸ್ಥಳೀಯ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಸಾಂಸ್ಕೃತಿಕ ಘಟಕ, ಇತಿಹಾಸ ವಿಭಾಗ ಹಾಗೂ ಅಭ್ಯುದಯ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ’ಸಂಕಲ್ಪನಾ-2047 ರ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಮೇಲೆ ಆಕ್ರಮಣ ಮಾಡಿದ ವಿದೇಶಿಗರು ಸ್ವಹಿತಾಸಕ್ತಿ ಈಡೇರಿಸಿಕೊಳ್ಳಲು ಭಾರತದಲ್ಲಿ ಹಲವಾರು ಯೋಜನೆ ರೂಪಿಸಿ ದೇಶದ ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ, 2047ಕ್ಕೆ ಭಾರತ ಸ್ವಾತಂತ್ರ್ಯಗೊಂಡು 100 ವರ್ಷ ಸಲ್ಲುತ್ತವೆ. ಈ ಹಿನ್ನೆಲೆಯಲ್ಲಿ ಆಹಾರ, ಉಡುಗೆ-ತೊಡುಗೆ, ಭಾಷೆ, ಶಿಕ್ಷಣ, ಉದ್ಯೋಗದಲ್ಲಿ ದೇಸಿ ಸಂಸ್ಕೃತಿ ಅಳವಡಿಸಿಕೊಳ್ಳಬೇಕಿದೆ. ಬೀದಿಬದಿಯಲ್ಲಿ ಮುತ್ತುರತ್ನ ವ್ಯಾಪಾರ ಮಾಡುತ್ತಿದ್ದ ವಿಜನಗರದ ಸಾಮ್ರಾಜ್ಯದ ವೈಭೋಗ ಮತ್ತೆ ಮರುಸ್ಥಾಪಿಸಲು ನಾವೆಲ್ಲ ದೃಢಸಂಕಲ್ಪ ಮಾಡೋಣ ಎಂದರು.

ಮಹಾವಿದ್ಯಾಯದ ಪ್ರಾಚಾರ್ಯ ಪ್ರೊ.ಎಂ.ಎಂ. ಹೀರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿ ಸನಾತನ ಸಂಸ್ಕೃತಿಯಾಗಿದ್ದು,

ಅದರದೇ ಆದ ವೈಶಿಷ್ಟ್ಯವಿದೆ. ಪ್ರತಿ ಆಚರಣೆ, ಸಂಪ್ರದಾಯ ವೈಜ್ಞಾನಿಕ ನೆಲೆ ಹೊಂದಿವೆ. ಭಾರತೀಯ ಸಂಸ್ಕೃತಿಯಲ್ಲಿ ಜೀವನದ ತತ್ವ ಅಡಗಿದೆ ಎಂದರು.

ಸುರೇಖಾ ದಳವಾಯಿ ಪ್ರಾರ್ಥಿಸಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಚ್. ಪಾಟೀಲ ಸ್ವಾಗತಿಸಿದರು, ಪ್ರೊ.ಕೆ.ಎಲ್. ಗುಡಿಮನಿ ಪರಿಚಯಿಸಿದರು, ಇತಿಹಾಸ ವಿಭಾಗದ ಉಪನ್ಯಾಸಕ ಪ್ರೊ.ಪಿ.ವಿ. ಮನಗೂಳಿ ವಂದಿಸಿದರು, ಪ್ರೊ.ಎಸ್.ಕೆ.ಸಾರವಾಡ ನಿರೂಪಿಸಿದರು.