ಸಾರಾಂಶ
- ಎಲ್ಲರೂ ಸಹಕರಿಸಲು ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಸಲಹೆ
- - -ಕನ್ನಡಪ್ರಭ ವಾರ್ತೆ ಹರಿಹರ
ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲ ಜಾತಿ ಜನಾಂಗಗಳನ್ನು ಒಗ್ಗೂಡಿಸುತ್ತಿರುವ ಹಿಂದೂ ಮಹಾಗಣಪತಿ ಉತ್ಸವವನ್ನು ಈ ಬಾರಿ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ಆಚರಿಸಬೇಕು ಎಂದು ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ನುಡಿದರು.ನಗರದ ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ 6ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವ-2025ರ ಆಹ್ವಾನ ಪತ್ರಿಕೆ ಮತ್ತು ದೇಣಿಗೆ ಸಂಗ್ರಹಕ್ಕೆ ಗುರುವಾರ ಸಂಜೆ ಕ್ಷೇತ್ರನಾಥ ಶ್ರೀ ಹರಿಹರೇಶ್ವರ ಸ್ವಾಮಿಗೆ ಶಾಸಕ ಬಿ.ಪಿ. ಹರೀಶ್ ಅವರೊಂದಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಅದ್ಧೂರಿ ಗಣಪತಿ ಉತ್ಸವ ಹಾಗೂ ಮೆರವಣಿಗೆ ನೋಡಲು ಮಹಾರಾಷ್ಟ್ರ ಹಾಗೂ ಹುಬ್ಬಳ್ಳಿ ಭಾಗಗಳಿಗೆ ತೆರಳಬೇಕಿತ್ತು. ಆದರೆ, ಕಳೆದ ಐದು ವರ್ಷಗಳಿಂದ ರಾಜ್ಯದ ವಿವಿಧ ಭಾಗದ ಜನತೆ ಹರಿಹರಕ್ಕೆ ಆಗಮಿಸಿ, ಉತ್ಸವ ವೀಕ್ಷಿಸುವಂತೆ ಸಂಘಟನೆ ಭಕ್ತಿಸಾಧನೆ ಮೆರೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಯಾವುದೇ ಕಾರ್ಯಕ್ರಮಕ್ಕೂ ಮನಿ ಪವರ್ ಅವಶ್ಯ. ನಗರದ ಎಲ್ಲ ಸಾರ್ವಜನಿಕರು ಈ ಬಾರಿ ಹೆಚ್ಚಿನ ದೇಣಿಗೆ ನೀಡಿ ರಾಜ್ಯದಲ್ಲಿಯೇ ಅತ್ಯಂತ ವೈಭವಯುತ ಹಿಂದೂ ಮಹಾಗಣಪತಿ ಉತ್ಸವ ಮಾಡಲು ಸಹಕಾರ ಕೊಡಬೇಕು. ಈ ಬಾರಿ ಪೈಲ್ವಾನ್ ಸುರೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರೊಂದಿಗೆ ಕೈ ಜೋಡಿಸಿ ಉತ್ಸವ ಆಚರಿಸಿ ಎಂದರು.
ಸಮಾಜ ಸೇವಕ ಎನ್.ಎಚ್. ಶ್ರೀನಿವಾಸ್ ನಂದಿಗಾವಿ ಮಾತನಾಡಿ, ಉತ್ಸವಕ್ಕೆ ಶುಭ ಹಾರೈಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಶೇಖರ ಗೌಡ, ಸ್ವಾಗತಿಸಿ, ಆ.27ರಿಂದ ಸೆ.14ರವರೆಗೆ 19 ದಿನಗಳ ಕಾಲ ಮಹೋತ್ಸವ ಆಚರಿಸಲಾಗುವುದು. ಇದೇ ಜು.31ರಂದು ಬೆಳಗ್ಗೆ 11.38 ಗಂಟೆಗೆ ಸಲ್ಲುವ ಚಿತ್ತ ನಕ್ಷತ್ರ ಸಪ್ತಮಿ ತಿಥಿಯಲ್ಲಿ ಹಂದರಗಂಬ ಪೂಜೆ, ನಡೆಯಲಿದೆ. ಭಕ್ತರು ಆಗಮಿಸುವಂತೆ ತಿಳಿಸಿದರು.ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್ ಚಂದಾಪುರ್, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಟ್ರಸ್ಟ್ ಅಧ್ಯಕ್ಷ ಬಸವನಗೌಡ, ಉಪಾಧ್ಯಕ್ಷ ಸ್ವಾತಿ ಹನುಮಂತ, ಪ್ರಸನ್ನಕುಮಾರ್, ಕಾರ್ಯದರ್ಶಿ ದಿನೇಶ್, ಖಜಾಂಚಿ ಮಂಜುನಾಥ ರಟ್ಟಿಹಳ್ಳಿ, ಚಂದ್ರಕಾಂತ್‍ಗೌಡ, ರಾಜೇಶ್ ವರ್ಣೇಕರ್, ಕಾರ್ತೀಕ್ ಟಿಕಾರೆ, ಮಹೇಶ್, ಉತ್ಸವ ಸಮಿತಿ ಸದಸ್ಯರಾದ ಪ್ರಕಾಶ್ ವಡ್ನಾಳ್, ಜಗದೀಶ್ ಚೂರಿ, ಶಿವು ಪೈ, ಪಾಲಾಕ್ಷಿ ಪೈ, ವಿಜಯ್, ಎಂ. ತಿಪ್ಪೇಶ್, ವಿಷ್ಣುರತ್ನಂ, ಹರ್ಷ.ಡಿ., ಸಂಜಯ್‍ಗೌಡ, ರವಿ ರಾಯ್ಕರ್, ಎಂ.ಸಿ ಆನಂದ್, ರವಿಕುಮಾರ್ ಎಂ.ಪಿ., ಪ್ರಕಾರ್ ಪೈ, ವಿಜಯ್ ಎ.ಟಿ.ಎಂ. ರಘು ಚೌಗಲಿ, ಪ್ರಚಾರ ಸಮಿತಿ ಸದಸ್ಯರಾದ ಸಂತೋಷ ಗುಡಿಮನಿ, ಜಿ.ಕೆ. ವಿನಾಯಕ, ಭರತ್ ಶೆಟ್ಟಿ ಇತರರು ಉಪಸ್ಥಿತರಿದ್ದರು
- - -(ಕೋಟ್) ಹರಿಹರ ನಗರದ ಹಿಂದೂ ಗಣಪತಿ ಉತ್ಸವ ಕೆಲವೇ ವರ್ಷಗಳಲ್ಲಿ ರಾಜ್ಯದಲ್ಲಿ ತನ್ನ ಛಾಪು ಮೂಡಿಸಿದೆ. ಅಂತೆಯೇ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ. ಇದಕ್ಕೆ ನನ್ನ ಸಹಕಾರ ಯಾವತ್ತೂ ಇರುತ್ತದೆ.
- ಬಿ.ಪಿ.ಹರೀಶ್, ಶಾಸಕ, ಗೌರವಾಧ್ಯಕ್ಷ- - -
-11ಎಚ್‍ಆರ್‍ಆರ್01:ಹಿಂದೂ ಮಹಾಗಣಪತಿ ಮಹೋತ್ಸವ ಆಹ್ವಾನ ಪತ್ರಿಕೆ ಮತ್ತು ದೇಣಿಗೆ ಸಂಗ್ರಹಕ್ಕೆ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ, ಶಾಸಕ ಬಿ.ಪಿ. ಹರೀಶ್ ಚಾಲನೆ ನೀಡಿದರು.