ಮಾಗಡಿ: ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಶೀಘ್ರವಾಗಿ ಪೂರ್ಣಗೊಂಡು, ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಲಿ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು

ಮಾಗಡಿ: ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಶೀಘ್ರವಾಗಿ ಪೂರ್ಣಗೊಂಡು, ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಲಿ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

ಪಟ್ಟಣದ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸದ್ಯ ನೀರಾವರಿ ಯೋಜನೆಗಳು ಆಶಾದಾಯಕವಾಗಿಲ್ಲ. ಹೇಮಾವತಿ ಯೋಜನೆಯ ಕಾಮಗಾರಿಗಳು ಕುಂಠಿತವಾಗಿ ಸಾಗುತ್ತಿವೆ. ಮಾಗಡಿ ರಂಗನಾಥಸ್ವಾಮಿ ಕೃಪೆಯಿಂದ ಯೋಜನೆಗಳೆಲ್ಲವೂ ಶೀಘ್ರವಾಗಿ ಪೂರ್ಣಗೊಂಡು, ಪ್ರತಿ ಕೆರೆಗೂ ನೀರು ತುಂಬುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ತಾವು ಶಾಸಕರಾಗಿದ್ದ ಅವಧಿಯಲ್ಲಿ, ಎಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನೀರಾವರಿ ಯೋಜನೆ ಮೂಲಕ ವೈ.ಜಿ.ಗುಡ್ಡ ಹಾಗೂ ಮಂಚನಬೆಲೆ ಜಲಾಶಯಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿರುವುದಕ್ಕೆ ಪ್ರಸ್ತುತ ಜನಪ್ರತಿನಿಧಿಗಳ ದಕ್ಷತೆಯ ಕೊರತೆಯೇ ಕಾರಣ. ಯಾವ ಇಲಾಖೆಯಿಂದ ಹೇಗೆ ಅನುದಾನ ತರಬೇಕೆಂಬ ಚಾಕಚಕ್ಯತೆ ಇರಬೇಕು. ಮುಂಬರುವ 2028ರ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಮತ್ತೊಮ್ಮೆ ತಮಗೆ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡುವ ಸಂಪೂರ್ಣ ವಿಶ್ವಾಸವಿದೆ. ಕಾರ್ಯಕರ್ತರು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ಅವರ ಆಶಯದಂತೆಯೇ ಜೆಡಿಎಸ್ ಭವನದಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದೇನೆ ಎಂದು ಮಾಜಿ ಶಾಸಕರು ಹೇಳಿದರು.ಉಚಿತ ನೇತ್ರ ತಪಾಸಣಾ ಶಿಬಿರ:

ಎ.ಮಂಜು ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರವನ್ನು ಯಶಸ್ವಿಯಾಗಿ ನಡೆಯಿತು.

ಪೌರಾಣಿಕ ನಾಟಕ: ಬಿಡದಿಯ ಪ್ರಸಿದ್ಧ ಆಂಜನೇಯ ಕೃಪೋಷಿತ ನಾಟಕ ಮಂಡಳಿಯ ಕಲಾವಿದರಿಂದ ಪಟ್ಟಣದ ಜೆಡಿಎಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ''''''''ದಕ್ಷಯಜ್ಞ'''''''' ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕರ ಜನ್ಮದಿನವನ್ನು ಸಡಗರದಿಂದ ಆಚರಿಸಿದರು. ಕಲ್ಯಾಗೇಟ್‌ನ ವಿನಾಯಕ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಎ.ಮಂಜುನಾಥ್ ಅವರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶುಭಾಶಯ ಕೋರಿದರು.

ಈ ವೇಳೆ ಎಂಎಲ್ಸಿ ಜವರಾಯಿಗೌಡ, ಲಕ್ಷ್ಮೀ ಎ.ಮಂಜುನಾಥ್, ಜೆಡಿಎಸ್ ಪ್ರಮುಖ ಮುಖಂಡರಾದ ಪ್ರತಾಪ್, ವಿಜಯಕುಮಾರ್, ಕೆ.ವಿ.ಬಾಲು, ಎಂ.ಎ.ಮಂಜು, ಶಬಾಷ್ ಖಾನ್, ರಂಗಣಿ, ಕುಮಾರ್, ಅನೀಲ್, ಪೂಜಾರಿಪಾಳ್ಯ ರವಿ, ಎಂ.ಎಚ್.ಸುನೀಲ್, ರಾಜಣ್ಣ, ಸಾಗರ್, ಕಾರ್ತೀಕ್, ಸುರೇಶ್, ವೆಂಕಟೇಶ್, ನಟೇಶ್, ಬಾಲಕೃಷ್ಣ, ಪುರುಷೋತ್ತಮ್, ಸೋಲೂರು ರಾಘವೇಂದ್ರ, ಬಿಡದಿ ದೇವರಾಜ್, ಕನಕಪುರ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರ, ಜಯಮ್ಮ, ರತ್ನಮ್ಮ, ಸುಮಾ, ಮಂಜುಳ ನೂರಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

(ಫೋಟೋ ಕ್ಯಾಪ್ಞನ್‌)

ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಬೃಹತ್‌ ಸೇಬಿನ ಹಾರ ಹಾಕಿ ಶುಭಾಶಯ ಕೋರಿದರು.