ಕನ್ನಡಪ್ರಭ ವಾರ್ತೆ ವಿಜಯಪುರ ನೀವು ಯಾರಿಗೆ ಮಾತು ಕೊಟ್ಟಿದ್ದೀರಿ ಅದನ್ನು ಉಳಿಸಿಕೊಳ್ಳಿ, ಅಂದಾಗ ನಿಮಗೂ, ಪಕ್ಷಕ್ಕೂ ಬೆಲೆ ಇರುತ್ತದೆ ಎಂದು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ. ನಮಗೆ ಕೊಟ್ಟ ಮಾತಿನ ಪ್ರಕಾರ ಇದೀಗ ರಚನೆಯಾಗಿರುವ ಸಚಿವ ಸಂಪುಟದ ಮೊದಲ ಹಂಚಿಕೆಯಲ್ಲೇ ಆಗಬೇಕಿತ್ತು. ಆದರೂ, ಕಾಲ ಮಿಂಚಿಲ್ಲ ಶೀಘ್ರದಲ್ಲೆ ಇನ್ನಷ್ಟು ಜನರಿಗೆ ಸಚಿವ ಸ್ಥಾನ ಕೊಡುವಾಗ ಆ ಸಮಯದಲ್ಲಾದರೂ ಸಚಿವಸ್ಥಾನ ಕೊಡಬಹುದು ಎಂಬ ನಿರೀಕ್ಷೆಯಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನೀವು ಯಾರಿಗೆ ಮಾತು ಕೊಟ್ಟಿದ್ದೀರಿ ಅದನ್ನು ಉಳಿಸಿಕೊಳ್ಳಿ, ಅಂದಾಗ ನಿಮಗೂ, ಪಕ್ಷಕ್ಕೂ ಬೆಲೆ ಇರುತ್ತದೆ ಎಂದು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ. ನಮಗೆ ಕೊಟ್ಟ ಮಾತಿನ ಪ್ರಕಾರ ಇದೀಗ ರಚನೆಯಾಗಿರುವ ಸಚಿವ ಸಂಪುಟದ ಮೊದಲ ಹಂಚಿಕೆಯಲ್ಲೇ ಆಗಬೇಕಿತ್ತು. ಆದರೂ, ಕಾಲ ಮಿಂಚಿಲ್ಲ ಶೀಘ್ರದಲ್ಲೆ ಇನ್ನಷ್ಟು ಜನರಿಗೆ ಸಚಿವ ಸ್ಥಾನ ಕೊಡುವಾಗ ಆ ಸಮಯದಲ್ಲಾದರೂ ಸಚಿವಸ್ಥಾನ ಕೊಡಬಹುದು ಎಂಬ ನಿರೀಕ್ಷೆಯಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯನವರು ಕೊಟ್ಟ ಮಾತಿನಂತೆ ನಡೆದ ಕೀರ್ತಿಗೆ ಅವರು ಇಡೀ ದೇಶದಲ್ಲಿ ಪಾತ್ರರಾಗಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಮೂರೇ ದಿನದಲ್ಲಿ ರಾಜೀನಾಮೆ ನೀಡಿ ದೊಡ್ಡತನ ಮೆರೆದಿದ್ದಾರೆ. ರಾಜ್ಯದ ಪ್ರಗತಿಗೆ ಕಾಂಗ್ರೆಸ್ ಯಾವಾಗಲೂ ಕೆಲಸ ಮಾಡುತ್ತಿದೆ. ಆದರೆ, 2023 ಫೆಬ್ರುವರಿಯಲ್ಲಿ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಅವರು, ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ ಅವರು, ಚುನಾವಣಾ ಚೇರಮನ್ ಮೋಹನ ವಿಜಯಪುರದ ಆಗಿನ ಮೂವರು ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ನನ್ನನ್ನು ಕರೆದು ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡಿ, ಒಗ್ಗಟ್ಟಾಗಿ ಚುನಾವಣೆ ಮಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮಗೆ ಉತ್ತಮ ಅವಕಾಶ ಕೊಡುತ್ತೇವೆ ಎಂದು ಒನ್ ಟು ಒನ್ ನಮ್ಮ ಮೂವರನ್ನೂ ಕರೆದು ಎಲ್ಲರಿಗೂ ಮಾತನಾಡಿದ್ದರು. ನಾವು ಏನೂ ಕೇಳಿರದಿದ್ದರೂ ಆಗ ಅವರೇ ನಮಗೆ ಸಂಪುಟದಲ್ಲಿ ಅವಕಾಶ ಕೊಡುವುದಾಗಿ ಅವರೇ ಮಾತು ಮಾತು ಕೊಟ್ಟಿದ್ದರು. ಆದರೆ, ಇದೀಗ ಅಂದು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಅಸಮಾಧಾನ ಹೊರಹಾಕಿದರು.
ಜಿಲ್ಲೆಗೆ ಇನ್ನೊಂದು ಸಚಿವಸ್ಥಾನ ಕೊಡಿ ಎಂದು ಎಂ.ಬಿ.ಪಾಟೀಲರು ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ನನಗೆ ಕೃಪಾ ಕಟಾಕ್ಷದಿಂದಲೂ ಮಂತ್ರಿಯಾಗುವ ಅವಶ್ಯಕತೆ ನನಗಿಲ್ಲ. ಯಾರು ಹೇಳಿದ್ದಾರೋ ಬಿಟ್ಟಿದ್ದಾರೋ ಅದು ಅವರಿಗೆ ಬಿಟ್ಟಿದ್ದು. ಆದರೆ ನನಗೆ ಮಾತು ಕೊಟ್ಟಂತೆ ಸಚಿವ ಸ್ಥಾನ ನೀಡಬೇಕು, ಕಳೆದ 40 ವರ್ಷಗಳಿಂದ ನಾವು, ನಮ್ಮ ಕುಟುಂಬದವರು ಪಕ್ಷಕ್ಕಾಗಿ ದುಡಿದಿದ್ದೇವೆ. ರಾಹುಲ ಗಾಂಧಿಯವರು ಸೇರಿದಂತೆ ಎಲ್ಲ ನಾಯಕರು ಈ ಬಾರಿ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಎಂದು ನಿರ್ಧರಿಸಿದ್ದರು. ಆದರೆ ಈಗಾಗಲೇ ಸಚಿವರಾಗಿರುವವರಿಗೆ ಮತ್ತೆ ಅವರಿಗೆ ಕೊಟ್ಟರೆ ಏನು ಪ್ರಯೋಜನ?. ಅವಕಾಶ ವಂಚಿತರಿಗೆ ರಾಜಕಾರಣದಲ್ಲಿ ಅವಕಾಶ ಸಿಗಬೇಕು. ಈಗಾಗಲೇ ಹೈಕಮಾಂಡ್ ನಿರ್ಧರಿಸಿರುವ ಕುರಿತು ಇನ್ನೊಮ್ಮೆ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.30 ರಿಂದ 40 ಅವಕಾಶ ವಂಚಿತರು
ಈಗಾಗಲೇ ಮೊನ್ನೆ ನಾನು ಸೇರಿದಂತೆ ಕೆಲವರು ದೆಹಲಿಗೆ ಹೋಗಿ ಬಂದಿದ್ದೇವೆ, ಅವಶ್ಯಕತೆ ಇದ್ದರೆ ಮತ್ತೊಮ್ಮೆ ಹೋಗಲಿದ್ದೇವೆ. ನಮ್ಮ ಸಾಲಿಗೆ (ಅವಕಾಶ ವಂಚಿತರು) ಸೇರುವ 30 ರಿಂದ 40 ಶಾಸಕರಿದ್ದೇವೆ. ಅವರೊಂದಿಗೆ ಸೇರಿ ಮತ್ತೊಮ್ಮೆ ಹೋಗಲಿದ್ದೇವೆ ಎಂದರು.ರಾಜ್ಯದಲ್ಲಿ ಅತಿಹೆಚ್ಚು ಬರಪೀಡಿತ ತಾಲೂಕುಗಳಲ್ಲಿ ಮೊದಲಸ್ಥಾನದಲ್ಲಿರುವ ಇಂಡಿ ತಾಲೂಕಿನಲ್ಲಿ ಮಳೆಯ ಕೊರತೆಯಲ್ಲೂ ಕುಡಿಯುವ ನೀರು, ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. ಇದೇ ರೀತಿ ಬರ ಮುಂದುವರೆದರೆ ಸರ್ಕಾರ ವಿಶೇಷ ನಿಯೋಜನೆಗಳನ್ನು ಮಾಡಬೇಕಾಗುತ್ತದೆ. ಈ ಬಾರಿ ಚಳಿಗಾಲದ ಅಧಿವೇಶನದ ಬದಲು ಮಳೆಗಾಲದ ಅಧಿವೇಶನವನ್ನೇ ಜುಲೈನಲ್ಲಿ ಬೆಳಗಾವಿಯಲ್ಲೇ ಮಾಡಬೇಕು ಎಂದು ನಿರ್ಧಾರವಾಗಿದೆ. ಈ ವೇಳೆ ಉತ್ತರ ಕರ್ನಾಟಕದ ನೀರಾವರಿಗೆ, ಅಭಿವೃದ್ಧಿಗೆ, ಬೆಳವಣಿಗೆಗೆ ಪೂರಕವಾದ ನಿರ್ಣಯ ಅಧಿವೇಶನದಲ್ಲಿ ಆಗಬೇಕಿದೆ ಎಂದು ಒತ್ತಾಯಿಸಿದರು.
--------ಕೋಟ್
ಸಿದ್ಧರಾಮಯ್ಯನವರು ಹೈಕಮಾಂಡ್ ಸೂಚನೆಯಂತೆ ಮೂರೇ ದಿನದಲ್ಲಿ ರಾಜೀನಾಮೆ ನೀಡಿ ದೊಡ್ಡತನ ಮೆರೆದಿದ್ದಾರೆ. ಆದರೆ, 2023 ಫೆಬ್ರುವರಿಯಲ್ಲಿ ರಾಜ್ಯ ಉಸ್ತುವಾರಿ ಸುರ್ಜೆವಾಲಾ, ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ ಅವರು, ಚುನಾವಣಾ ಚೇರಮನ್ ಮೋಹನ ವಿಜಯಪುರದ ಆಗಿನ ಮೂವರು ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ನನ್ನನ್ನು ಕರೆದು ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮಗೆ ಉತ್ತಮ ಅವಕಾಶ ಕೊಡುತ್ತೇವೆ ಭರವಸೆ ನೀಡಿದ್ದರು. ಒನ್ ಟು ಒನ್ ನಮ್ಮ ಮೂವರನ್ನೂ ಕರೆದು ಎಲ್ಲರೊಂದಿಗೂ ಮಾತನಾಡಿದ್ದರು. ನಾವು ಏನೂ ಕೇಳಿರದಿದ್ದರೂ ಆಗ ಅವರೇ ನಮಗೆ ಸಂಪುಟದಲ್ಲಿ ಅವಕಾಶ ಕೊಡುವುದಾಗಿ ಮಾತು ಕೊಟ್ಟಿದ್ದರು. ಆದರೆ, ಇದೀಗ ಅಂದು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟಿದ್ದು.