ಸಾರಾಂಶ
ಕಡೂರು, ಪಟ್ಟಣದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರ 46ನೇ ಹುಟ್ಟು ಹಬ್ಬವನ್ನು ಕಾಂಗ್ರೆಸ್ ಕಾರ್ಯಕರ್ತರು ಸಡಗರ ಸಂಭ್ರಮದಿಂದ ಆಚರಿಸಿದರು.
ಕೆ.ಎಸ್.ಆನಂದ್ ಅವರ 46ನೇ ಹುಟ್ಟು ಹಬ್ಬ ಆಚರಣೆ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರ 46ನೇ ಹುಟ್ಟು ಹಬ್ಬವನ್ನು ಕಾಂಗ್ರೆಸ್ ಕಾರ್ಯಕರ್ತರು ಸಡಗರ ಸಂಭ್ರಮದಿಂದ ಆಚರಿಸಿದರು.
ಶುಕ್ರವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಬೃಹತ್ ಕೇಕ್ ಕತ್ತರಿಸಿ ಜನರಿಗೆ ಸಿಹಿ ಹಂಚುವ ಮೂಲಕ ಶಾಸಕರಿಗೆ ಶುಭ ಕೋರಿದರು. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ತೇಜಸ್ ನೇತೃತ್ವದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ತೇಜಸ್ ಮಾತನಾಡಿ, ನಮ್ಮ ನಾಯಕ ಕೆ.ಎಸ್.ಆನಂದ್ ಅವರು ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದವರಾಗಿದ್ದಾರೆ. ಈಗಾಗಲೇ ನಾಲ್ಕೈದು ಬಾರಿ ಗೆದ್ದಿರುವ ಶಾಸಕರಂತೆ ಅವರ ಅಭಿವೃದ್ಧಿ ಪರ ಕಾರ್ಯವನ್ನು ಕ್ಷೇತ್ರದ ಜನತೆ ಕಂಡಿದ್ದಾರೆ. ಇಂತಹ ಜನಪರ ಕಾಳಜಿ ಇರುವ ಶಾಸಕ ಆನಂದ್ ಅವರಿಗೆ ಮಂತ್ರಿ ಪದವಿ ಸಿಗಲಿ ಎಂಬುದು ಕ್ಷೇತ್ರದ ಕಾರ್ಯಕರ್ತರು ಹಾಗೂ ನನ್ನ ವೈಯುಕ್ತಿಕ ಅಭಿಪ್ರಾಯ ಎಂದರು.
ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿಯುತ್ತಿರುವ ನಮ್ಮ ಶಾಸಕರಿಗೆ ಪಕ್ಷ ಮತ್ತು ಮುಖ್ಯಮಂತ್ರಿಗಳು ಗುರುತಿಸಿ ಸಚಿವ ಸ್ಥಾನ ನೀಡಲಿ ಎಂದು ಎಲ್ಲ ಕಾರ್ಯಕರ್ತರ ಪರವಾಗಿ ಪಕ್ಷದ ಮುಖಂಡರಿಗೆ ಒತ್ತಾಯಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಸಂದಿ ಟಿ.ಕಲ್ಲೇಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಂ.ಎಚ್.ಚಂದ್ರಪ್ಪ, ಬೀರೂರಿನ ವಿನಾಯಕ, ಪುರಸಭಾ ಸದಸ್ಯರಾದ ಬಿ.ಕೆ.ಶಶಿಧರ್, ಮುಬಾರಕ್, ನಾಗೇಂದ್ರ, ಉಮೇಶ್, ಕಡೂರಿನ ಇಮ್ರಾನ್, ವಸಂತ್, ಧರ್ಮಣ್ಣ, ಹಬೀದ್, ಶ್ರೀನಿವಾಸ ನಾಯ್ಕ, ಪಂಗ್ಲಿ ಮಂಜು,ಯರದಕೆರೆ ಓಂಕಾರ್,ಶ್ರೀಕಾಂತ್ , ಸಂಜಯ್, ಹೊಸೂರು ಕುಮಾರ್, ಪ್ರಮೋದ್, ಆಸ್ತಿಕ್,ಮಂಜುನಾಥ್, ಗೋವಿಂದ ಹಾಗೂ ಯುವ ಕಾಂಗ್ರೆಸಿನ ಮುಖಂಡರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಕಡೂರು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.4ಕೆಕೆಡಿಯು2. ಕಡೂರು ಶಾಸಕ ಕೆ.ಎಸ್.ಆನಂದ್ ಹುಟ್ಟುಹಬ್ಬವನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ತೇಜಸ್ ನೇತೃತ್ವದಲ್ಲಿ ಕಾರ್ಯಕರ್ತರು ಮುಖಂಡರು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಚರಿಸಿದರು.