ಸಂವಿಧಾನದ ಸಂದೇಶಗಳು ಎಲ್ಲರ ಮನೆ ಮನ ತಲುಪಲಿ: ಡಾ. ಇಸಬೆಲ್ಲಾ ಕ್ಸೇವಿಯರ್

| Published : Jul 02 2025, 11:49 PM IST

ಸಂವಿಧಾನದ ಸಂದೇಶಗಳು ಎಲ್ಲರ ಮನೆ ಮನ ತಲುಪಲಿ: ಡಾ. ಇಸಬೆಲ್ಲಾ ಕ್ಸೇವಿಯರ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಹಕ್ಕುಗಳನ್ನು ಅನುಭವಿಸಲು ಎಷ್ಟು ಹಕ್ಕುದಾರರೋ, ಅಷ್ಟೇ ನಮ್ಮ ಕರ್ತವ್ಯದ ಬಗೆಗೆ ಕಾಳಜಿ ಇರಬೇಕು.

ಹಾನಗಲ್ಲ: ಭಾರತೀಯರೆಲ್ಲ ವಿವಿಧತೆಯಲ್ಲಿ ಏಕತೆ, ಜಾತ್ಯತೀತವಾಗಿ ಒಂದಾಗಿ ಕೂಡಿ ಬದುಕುವ ಸಂದೇಶ, ನಮ್ಮ ಹಕ್ಕು ಕರ್ತವ್ಯಗಳನ್ನು ಪಾಲಿಸುವ ನೀತಿ ನಿಯಮಗಳನ್ನು ದೇಶದ ಹಿತಕ್ಕಾಗಿ ಹೇಳಿದ ಸಂವಿಧಾನದ ಸಂದೇಶಗಳು ಎಲ್ಲರ ಮನೆ- ಮನ ತಲುಪಬೇಕು ಎಂದು ಡಾ. ಇಸಬೆಲ್ಲಾ ಕ್ಸೇವಿಯರ್ ತಿಳಿಸಿದರು.

ಇಲ್ಲಿಯ ಲೋಯಲಾ ವಿಕಾಸ ಕೇಂದ್ರದಲ್ಲಿ ಸಂವಿಧಾನ ಸಂರಕ್ಷಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಹಕ್ಕುಗಳನ್ನು ಅನುಭವಿಸಲು ಎಷ್ಟು ಹಕ್ಕುದಾರರೋ, ಅಷ್ಟೇ ನಮ್ಮ ಕರ್ತವ್ಯದ ಬಗೆಗೆ ಕಾಳಜಿ ಇರಬೇಕು. ನಮ್ಮ ಸಂವಿಧಾನ ಇಡೀ ದೇಶವೇ ಪೂಜಿಸುವಂತಹ ಮಹಾನ್‌ ಗ್ರಂಥ. ಸಂವಿಧಾನ ರಕ್ಷಿಸುವುದೆಂದರೆ ಸಂವಿಧಾನದಂತೆ ನಡೆಯುವುದೇ ಆಗಿದೆ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಂವಿಧಾನ ರಕ್ಷಣಾ ಪಡೆಗಳನ್ನು ಕಟ್ಟಿ ಜಾಗೃತಿ ಮೂಡಿಸಲು ಮುಂದಾಗೋಣ ಎಂದರು.

ಆಶಯ ನುಡಿಗಳನ್ನಾಡಿದ ಲೊಯೋಲಾ ಸಂಸ್ಥೆಯ ಸಹ ನಿರ್ದೇಶಕ ಫಾದರ್‌ ಜೆಸನ ಪಾಯಸ್, ನಾವೆಲ್ಲರೂ ಸಂವಿಧಾನದ ಇತಿಹಾಸ ಅರಿತು, ಇಂದಿನ ಕಾಲಘಟ್ಟದಲ್ಲಿ ಅದರ ಮೌಲ್ಯಗಳನ್ನು ಕಾಪಾಡಬೇಕು ಎಂದರು.

ಫೈರೋಜ ಅಹಮದ್ ಶಿರಬಡಗಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ ಅವರ ವಿಚಾರಧಾರೆಗಳು ಬರಿ ಆಡಂಬರಕ್ಕೆ ಸೀಮಿತವಾಗಬಾರದು. ಅವುಗಳನ್ನು ಆಚರಣೆಗೆ ತರಬೇಕು. ಅವರ ಚಿಂತನೆಗಳು, ವಿಚಾರಧಾರೆಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು. ಲೊಯೋಲ ಸಂಸ್ಥೆ ಈ ಅಧ್ಯಯನ ಕೇಂದ್ರದಿಂದ ತಾಲೂಕಿನ ಜನತೆಗೆ ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮಂಜುನಾಥ ಕರ್ಜಗಿ, ಮುಕ್ತಾನಂದ ಹಿರೇಮಠ, ದೇವರಾಜ ಹರಿಜನ ಇದ್ದರು.ಇಂದು ಶರೀಫ ಶಿವಯೋಗಿಗಳ ೨೦೬ನೇ ಜಯಂತಿ

ಶಿಗ್ಗಾಂವಿ: ತಾಲೂಕಿನ ಶಿಶುವಿನಹಾಳ ಗ್ರಾಮದ ಶರೀಫಗಿರಿ ಭಾವೈಕ್ಯ ಮಂದಿರದಲ್ಲಿ ಶರೀಫ ಶಿವಯೋಗಿ ಮತ್ತು ಗುರುಗೋವಿಂದ ಶಿವಯೋಗಿಗಳ ಪಂಚಾಗ್ನಿಮಠ ಟ್ರಸ್ಟ್ ವತಿಯಿಂದ ಶರೀಫ ಶಿವಯೋಗಿಗಳ ೨೦೬ನೇ ಜಯಂತ್ಯುತ್ಸವ ಹಾಗೂ ೧೩೬ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜು. ೩ರಂದು ಜರುಗಲಿದೆ.ಕಾರ್ಯಕ್ರಮದ ಸಾನ್ನಿಧ್ಯವನ್ನು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ವಹಿಸುವರು. ಟ್ರಸ್ಟ್ ಉಪಾಧ್ಯಕ್ಷ ಎಸ್.ಎಲ್. ಪಾಟೀಲ ಅಧ್ಯಕ್ಷತೆ ವಹಿಸುವರು.

ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಯಾಸೀರ ಅಹ್ಮದಖಾನ್ ಪಠಾಣ, ಶಿಗ್ಗಾವಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಎ.ಸಿ. ವಾಲಿ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.