ವಿಶ್ವ ಹೃದಯ ದಿನ ನಡಿಗೆ ನಿತ್ಯ ನಿರಂತರವಾಗಿರಲಿ

| Published : Sep 30 2024, 01:27 AM IST

ಸಾರಾಂಶ

ವಿಶ್ವ ಹೃದಯ ದಿನದ ನಡಿ ಒಂದು ದಿನ ಆಚರಣೆ ಮಾತ್ರವೇ ಸೀಮಿತವಾಗಿರುವುದು ಬೇಡ. ಈ ನಡಿಗೆ ನಿರಂತರವಾಗಿರಲಿ. ನಿಮಗೆ ಇಷ್ಟವಾದ ಚಿತ್ರಕಲೆ, ಹಾಡು, ನೃತ್ಯ ಇರಲಿ. ನಿಮ್ಮ ಮನಸ್ಸಿನ್ನು ಉಲ್ಲಾಸಭರಿತವಾಗಿ ಇಟ್ಟುಕೊಳ್ಳಲು ಏನು ಕಲಿಯಬೇಕೋ ಅದೆಲ್ಲವನ್ನೂ ಕಲಿತು ಖುಷಿಯಾಗಿರಿ ಎಂದು ಚಲನಚಿತ್ರ ನಟಿ, ದಾವಣಗೆರೆಯ ಅಧಿತಿ ಪ್ರಭುದೇವ ದಾವಣಗೆರೆಯಲ್ಲಿ ಹೇಳಿದ್ದಾರೆ.

- ವಿಶ್ವ ಹೃದಯ ದಿನ ಕಾರ್ಯಕ್ರಮ ಉದ್ಘಾಟಿಸಿ ಚಿತ್ರನಟಿ ಅಧಿತಿ ಪ್ರಭುದೇವ ಸಲಹೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ವಿಶ್ವ ಹೃದಯ ದಿನದ ನಡಿ ಒಂದು ದಿನ ಆಚರಣೆ ಮಾತ್ರವೇ ಸೀಮಿತವಾಗಿರುವುದು ಬೇಡ. ಈ ನಡಿಗೆ ನಿರಂತರವಾಗಿರಲಿ. ನಿಮಗೆ ಇಷ್ಟವಾದ ಚಿತ್ರಕಲೆ, ಹಾಡು, ನೃತ್ಯ ಇರಲಿ. ನಿಮ್ಮ ಮನಸ್ಸಿನ್ನು ಉಲ್ಲಾಸಭರಿತವಾಗಿ ಇಟ್ಟುಕೊಳ್ಳಲು ಏನು ಕಲಿಯಬೇಕೋ ಅದೆಲ್ಲವನ್ನೂ ಕಲಿತು ಖುಷಿಯಾಗಿರಿ ಎಂದು ಚಲನಚಿತ್ರ ನಟಿ, ದಾವಣಗೆರೆಯ ಅಧಿತಿ ಪ್ರಭುದೇವ ಹೇಳಿದರು.

ನಗರದ ಮೋತಿ ವೀರಪ್ಪ ಕಾಲೇಜು ಸಮೀಪ ಇರುವ ಎಸ್‌ಎಸ್‌ಐಎಂಎಸ್ ಅಂಡ್ ರೀಸರ್ಚ್ ಸೆಂಟರ್ ಆವರಣದಲ್ಲಿ ಭಾನುವಾರ ಬೆಳಗ್ಗೆ ಎಸ್‌ಎಸ್ ನಾರಾಯಣ ಹೃದಯಾಲಯದಿಂದ ಯೂಸ್ ಆಕ್ಷನ್ ಫಾರ್ ಹಾರ್ಟ್ ಧ್ಯೇಯವಾಕ್ಯದೊಂದಿಗೆ ಆಯೋಜಿಸಿದ ವಿಶ್ವ ಹೃದಯ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಸ್ಯಹಾರಕ್ಕೆ ನಾವು ಹೊಂದಿಕೊಳ್ಳುವುದರಿಂದ ಬಹಳಷ್ಟು ಬದಲಾವಣೆಗಳನ್ನು ದೇಹದಲ್ಲಿ ಕಾಣಬಹುದು. ಏನೇ ತಿಂದರೂ ಮಿತವಾಗಿ ತಿನ್ನಿರಿ. ಸದೃಢ ದೇಹಕ್ಕೋಸ್ಕರ ಸದೃಢ ಹೃದಯ ಇರಬೇಕು. ಅದು ಇರಬೇಕೆಂದರೆ ಸದೃಢವಾದ ಮನಸ್ಸು ಇರಬೇಕು. ನಮ್ಮ ದೇಹದ, ನಮ್ಮ ಆಲೋಚನೆಗಳ ಬಗ್ಗೆ ಕಂಟ್ರೋಲ್ ಇರಬೇಕು. ಆಗ ಮಾತ್ರ ನಮ್ಮ ಬಾಡಿ, ನಮ್ಮ ಜೀವನ ಹತೋಟಿಗೆ ಬರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿ, ವೈದ್ಯರು ಎಂದರೆ ದೇವರು ಎಂಬ ಭಾವನೆ ಇದೆ. ಹೃದಯ ಮಾನವದ ಒಂದು ಮುಖ್ಯ ಭಾಗವಾಗಿದೆ. ಹೃದಯಾಘಾತ ಆಗದಂತೆ ಇರುವ ರೀತಿಯ ಜೀವನಶೈಲಿ ನಮ್ಮನ್ನು ಬದಲಾಯಿಸಿಕೊಳ್ಳಬೇಕು. ಈ ಉದ್ದೇಶದಿಂದ ಜಾಗೃತಿ ಮೂಡಿಸಲು ವಾಕಥಾನ್ ಹಮ್ಮಿಕೊಳ್ಳಲಾಗಿದೆ. ಪೌಷ್ಠಿಕಾಂಶಯುಕ್ತ ಆಹಾರ ಸೇವನೆ, ನಿತ್ಯ ಯೋಗ, ಧ್ಯಾನ, ದೈಹಿಕ ವ್ಯಾಯಾಮದಿಂದ ಹೃದಯ ಕಾಯಿಲೆಗಳನ್ನು ತಡೆಯಲು ಸಾಧ್ಯ ಎಂದರು.

ಹಿರಿಯ ವೈದ್ಯ ಡಾ. ಜಿ.ಬಿ. ಶಿವಲಿಂಗಪ್ಪ ಮಾತನಾಡಿ, ಜೀವನಶೈಲಿ ಬದಲಾವಣೆ ಮಾಡಿಕೊಂಡರೆ ಎಂಥ ಕಾಯಿಲೆಗಳನ್ನೂ ತಡೆಗಟ್ಟಬಹುದು. ಊಟ ಬಹಳ ಮುಖ್ಯವಾಗಿದ್ದು, ಹಣ್ಣು, ತರಕಾರಿಗಳನ್ನು ತಿನ್ನಬೇಕು ಎಂದರು.

ಎಸ್.ಎಸ್. ನಾರಾಯಣ ಹೃದಯಾಲಯ ವ್ಯವಸ್ಥಾಪಕ ಸುನೀಲ್ ಭಂಡಾರಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖ, ಜಿಲ್ಲಾ ಶಸ್ತ್ರಚಿಕಿತ್ಸಾ ತಜ್ಞ ಡಾ.ನಾಗರಾಜ, ಡಾ.ಧನಂಜಯ, ಡಾ.ಮಲ್ಲೇಶ, ಸುನೀಲ್ ಭಂಡಾರಿ, ಪ್ರಶಾಂತ್, ವಿವಿಧ ವಿಭಾಗಗಳ ವೈದ್ಯರು, ವಿದ್ಯಾರ್ಥಿಗಳು, ರೆಡ್‌ಕ್ರಾಸ್, ಲೈಫ್‌ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹ, ಜಿಲ್ಲಾ ಯೋಗ ಒಕ್ಕೂಟ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ದಾವಣಗೆರೆ ತಾಲೂಕು ಫೋಟೋ ಮತ್ತು ವೀಡಿಯೋಗ್ರಾಫರ್ಸ್‌ ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

- - - (-ಫೋಟೋ ಇದೆ.)