ಕಳೆದ ೨೫ವರ್ಷಗಳಿಂದ ಯಾವುದೇ ತೊಂದರೆ ಇಲ್ಲದಂತೆ ಈ ಸೊಸೈಟಿಯನ್ನು ನಡೆಸಿಕೊಂಡು ಬಂದಿದ್ದಾರೆ. ಯಾರಿಗೆ ಸಹಕಾರ ಕ್ಷೇತ್ರದಲ್ಲಿ ಬದ್ದತೆ ಇದೆ ಅವರು ಮಾತ್ರ ಇಷ್ಟು ಅಭಿವೃದ್ಧಿಪಡಿಸಲು ಸಾಧ್ಯ. ಶೀಘ್ರವೇ ಉದಯರವಿ ಬ್ಯಾಂಕ್ ಆಗಿ ಪರಿವರ್ತನೆಯಾಗಿ ಜನರಿಗೆ ಹೆಚ್ಚಿನ ಸೇವೆ ನೀಡಲಿ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಕಳೆದ ೨೫ವರ್ಷಗಳಿಂದ ಯಾವುದೇ ತೊಂದರೆ ಇಲ್ಲದಂತೆ ಈ ಸೊಸೈಟಿಯನ್ನು ನಡೆಸಿಕೊಂಡು ಬಂದಿದ್ದಾರೆ. ಯಾರಿಗೆ ಸಹಕಾರ ಕ್ಷೇತ್ರದಲ್ಲಿ ಬದ್ದತೆ ಇದೆ ಅವರು ಮಾತ್ರ ಇಷ್ಟು ಅಭಿವೃದ್ಧಿಪಡಿಸಲು ಸಾಧ್ಯ. ಶೀಘ್ರವೇ ಉದಯರವಿ ಬ್ಯಾಂಕ್ ಆಗಿ ಪರಿವರ್ತನೆಯಾಗಿ ಜನರಿಗೆ ಹೆಚ್ಚಿನ ಸೇವೆ ನೀಡಲಿ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರದ ಉದಯರವಿ ಸಹಕಾರಿ ಸಂಸ್ಥೆಯ ೨೫ನೇ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ರಜತಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಬೆಳೆದರೆ ಜನರಿಗೆ ಸಮಾನತೆ ಸಿಗುತ್ತದೆ. ಸಾಮಾಜಿಕ, ಶೈಕ್ಷಣಿಕವಾಗಿ ಸಹಕಾರಿಗಳಿಂದ ಸಮಾಜದ ಎಲ್ಲ ವರ್ಗದವರಿಗೂ ಸಹಾಯವಾಗುತ್ತದೆ. ಒಂದು ಕಾಲದಲ್ಲಿ ರೈತನಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಬಹಳ ಕಷ್ಟವಾಗಿತ್ತು. ಆದ ಅವನ ನೆರವಿಗೆ ಬಂದಿದ್ದು ಸಹಕಾರಿ ಕ್ಷೇತ್ರ. ನಾನು ಕಳೆದ ೪೦ ವರ್ಷಗಳಿಂದಲೂ ನಾನು ಸಹಕಾರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಬೆಳೆಯುತ್ತಾ ಮೇಲೆ ಬಂದವನು. ಸಹಕಾರಿ ಕ್ಷೇತ್ರದಲ್ಲಿ ನನಗೆ ಸಿಕ್ಕಿರುವ ತೃಪ್ತಿ ಶಾಸಕನಾಗಿ ಸಿಕ್ಕಿಲ್ಲ ಎಂದರು.
ನಿವೃತ್ತ ಎಸಿಪಿ ಲೋಕೇಶ್ವರ ಮಾತನಾಡಿ, ಅನೇಕರಿಗೆ ಸಹಕಾರಿ ಕ್ಷೇತ್ರ ರಾಜಕೀಯ ಕೇಂದ್ರವಾಗಿದೆ. ರಾಜಕಾರಣಿಗಳು ಸಹಕಾರ ಕ್ಷೇತ್ರದಲ್ಲಿ ತಮ್ಮ ಸ್ವಹಿತಾಸಕ್ತಿಗೆ ಹಸ್ತಕ್ಷಾಪ ಮಾಡುತ್ತಾರೆಯೋ ಅಲ್ಲಿ ಸಹಕಾರಿಯು ಅಭಿವೃದ್ಧಿ ಹೊಂದುವುದಿಲ್ಲ. ಸೋಮಣ್ಣನವರು ಕಠಿಣ ಶ್ರಮದಿಂದ ಯಾವುದೇ ಅವ್ಯವಸ್ಥೆಗೆ ಆಸ್ಪದ ನೀಡದೇ ಸಹಕಾರಿಯನ್ನು ಉತ್ತಮವಾಗಿ ಬೆಳೆಸಿದ್ದಾರೆ ಎಂದರು. ಸಂಯುಕ್ತ ಸಹಕಾರಿಯ ರಾಜ್ಯಾಧ್ಯಕ್ಷ ಜಿ.ನಂಜನಗೌಡ ಮಾತನಾಡಿ ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ಅತಿದೊಡ್ಡ ಸೌಹಾರ್ದವಾಗಿ ಸಂಸ್ಥೆಯಾಗಿ ಬೆಳದಿರುವ ಉದಯರವಿ ಸಹಕಾರಿಯಲ್ಲಿರುವ ಸುಮಾರಿ ೬೫೦೦ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದ್ದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಂ.ರಾಜಣ್ಣ ಸಂಘವು ೦೫ ಮಾರ್ಚ್ ೨೦೦೦ರಲ್ಲಿ ಕೇವಲ ೧೬೫ ಷೇರುದಾರರು ಹಾಗೂ ರುಪಾಯಿ ೨ ಲಕ್ಷ ಷೇರು ಬಂಡವಾಳದೊಂದಿಗೆ ಸ್ಥಾಪನೆಯಾಗಿದ್ದು, ಇಂದು ೬,೬೪೨ ಸದಸ್ಯರೊಂದಿಗೆ ರು. ೭.೫೯ ಕೋಟಿ ಷೇರು ಬಂಡವಾಳವನ್ನು ಹೊಂದಿದ್ದು, ಪ್ರಸ್ತುತ ರೂಪಾಯಿ ೪೩೬ ಕೋಟಿ ದುಡಿಯುವ ಬಂಡವಾಳ ಹಾಗೂ ರುಪಾಯಿ ೪೦೮ ಕೋಟಿ ಠೇವಣಿಗಳನ್ನು ಹೊಂದಿದ್ದು, ಒಟ್ಟು ನಿವಳ ಲಾಭವು ರೂಪಾಯಿ ೪.೩೫ ಕೋಟಿಯಿದ್ದು ಆರಂಭದಲ್ಲಿ ಕೇವಲ ಇಬ್ಬರು ನೌಕರರಿಂದ ಆರಂಭಗೊಂಡ ಸಂಘವು ಈಗ ೩೪ ಸಿಬ್ಬಂದಿಗಳೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಸಂಯುಕ್ತ ಸಹಕಾರಿ ಸಂಘದ ನಿರ್ಧೇಶಕ ಕೃಷ್ಣಾರೆಡ್ಡಿ ಮಾತನಾಡಿದರು. ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ಸಂಯುಕ್ತ ಸಹಕಾರಿಯ ನಿರ್ದೇಶಕ ಸಿ.ಪಿ.ವಿಜಯ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎಸ್.ಹರೀಶ್‌ಕುಮಾರ್, ಲೆಕ್ಕಪರಿಶೋಧಕ ಎಸ್,ಧನ್ಯಕುಮಾರ್. ಉಪಾಧ್ಯಕ್ಷ ಎಚ್.ಸೋಮಶೇಖರಯ್ಯ, ವ್ಯವಸ್ಥಾಪಕ ಟಿ.ಸಿ.ರವಿ, ನಿರ್ದೇಶಕರು ಉಪಸ್ಥಿತರಿದ್ದರು. ತುಮುಲ್ ನಿರ್ದೇಶಕ ಮಾದೀಹಳ್ಳಿ ಪ್ರಕಾಶ್, ಮಂಜುನಾಥ್.ವಿ. ಶಂಕರಮೂರ್ತಿ, ಶಿ ಸುರೇಶ್‌ರಾವ್, ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರಿದ್ದರು.