ಸಾರಾಂಶ
ಗುಂಡ್ಲುಪೇಟೆ: ಅನಗತ್ಯವಾಗಿ ಆಡಂಬರ, ಅದ್ಧೂರಿ ಮದುವೆ ಮಾಡುವುದು ಬಿಟ್ಟು ಸರಳ ವಿವಾಹ ಆಗುವುದು ಉತ್ತಮ ಎಂದು ಮೂಡುಗೂರು ವಿರಕ್ತ ಮಠಾಧೀಶ ಇಮ್ಮಡಿ ಉದ್ದಾನಸ್ವಾಮೀಜಿ ಸಲಹೆ ನೀಡಿದರು.ತಾಲೂಕಿನ ಮೂಡುಗೂರು ಮಠ ಆಯೋಜಿಸಿದ್ದ ಸರಳ ವಿವಾಹ ಜಾಗೃತಿ ಮತ್ತು ವಚನ ಮಾಂಗಲ್ಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ತಾಲೂಕಿನ ಬಲಚವಾಡಿ ಗ್ರಾಮದ ವಧು ಮತ್ತು ಬರಗಿ ಗ್ರಾಮದ ವರ ವಚನ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ವಚನ ಮಾಂಗಲ್ಯ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಇತ್ತೀಚಿನ ವರ್ಷಗಳಲ್ಲಿ ಒಬ್ಬರ ನೋಡಿ ಗೊಬ್ಬರ ಹೂಡಿದ್ರು ಎಂಬ ಗಾದೆಯಂತೆ ಅವನಿಗಿಂತ ನಾನೇನು ಕಡಿಮೆ ಇಲ್ಲದಂತೆ ವಿವಾಹ ನೆರವೇರಿಸುವುದು ನಡೆಯುತ್ತಿದೆ. ಇದರಿಂದ ಗಳಿಸಿದ, ಉಳಿಸಿದ ಹಣದ ಜತೆಗೆ ಸಾಲ ಮಾಡಿದ ಹಣ ವಿವಾಹದ ಹೆಸರಿನಲ್ಲಿ ದುಂದುವೆಚ್ಚ ಆಗುತ್ತಿದೆ ಎಂದರು.ಅದ್ಧೂರಿ ಮದುವೆಯಲ್ಲಿ ತಿನ್ನಲು ಆಗದಷ್ಟು ಪುಷ್ಕಳ ಭೋಜನ ಮಾಡುತ್ತಿದ್ದಾರೆ. ಆಡಂಬರದ ನೆಪದಲ್ಲಿ ಆಹಾರವು ವ್ಯರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಸರಳ ವಿವಾಹದ ಸಲುವಾಗಿ ವಚನ ಮಾಂಗಲ್ಯ ಮಾಡಿಸಲಾಗುತ್ತಿದ್ದು, ಇದು ನಮ್ಮ ಮಠದ ಆಶಯ ಎಂದರು.ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್, ಸಮಾಜ ಸೇವಾ ರತ್ನ ಪುರಸ್ಕೃತ ಬಲಚವಾಡಿ ಮಾದೇಶ್, ಎಚ್.ಎಂ.ಪ್ರಸಾದ್, ಮುಖಂಡರಾದ ನಂಜಪ್ಪ, ನಟೇಶ್, ಕುಮಾರ್, ಮಹೇಶ್, ನಾಗಪ್ಪ,ಮಹೇಶ್, ಮಹೇಶಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂರ್ಯಪ್ರಕಾಶ್, ಸುರೇಶ್, ನಾಗಪ್ಪ ಹಾಜರಿದ್ದರು.25ಸಿಎಚ್ಎನ್20ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಮಠದ ವತಿಯಿಂದ ಸರಳ ವಿವಾಹ ಜಾಗೃತಿ ಮತ್ತು ವಚನ ಮಾಂಗಲ್ಯ ಕಾರ್ಯಕ್ರಮ ನಡೆಯಿತು.